newsfirstkannada.com

ಆಸ್ಕರ್‌ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಭಾರತೀಯ ಕಲಾ ನಿರ್ದೇಶಕನಿಗೆ ವಿಶೇಷ ಗೌರವ; ಯಾರಿವರು?

Share :

Published March 11, 2024 at 4:20pm

Update March 11, 2024 at 5:36pm

    ಆಸ್ಕರ್‌ ವೇದಿಕೆಯ ಮೇಲೆ ನಿತಿನ್‌ ಚಂದ್ರಕಾಂತ್ ದೇಸಾಯಿ ನೆನಪು

    96ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಲ್ಲಿ ದೇಸಾಯಿ ಅವರಿಗೆ ಗೌರವ ಸಲ್ಲಿಕೆ

    ಸ್ಟುಡಿಯೋವೊಂದರಲ್ಲಿ ನಿತಿನ್‌ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದರು

ಬಾಲಿವುಡ್​ನ ಹೆಸರಾಂತ ಕಲಾ ನಿರ್ದೇಶಕ ದಿವಂಗತ ನಿತಿನ್‌ ಚಂದ್ರಕಾಂತ್‌ ದೇಸಾಯಿ (57) ಅವರಿಗೆ 96ನೇ ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳಲ್ಲಿ ಮರಣೋತ್ತರವಾಗಿ ಗೌರವಿಸಲಾಯಿತು. ‘ಲಗಾನ್’ ಮತ್ತು ‘ಜೋಧಾ ಅಕ್ಬರ್’ ಮುಂತಾದ ಸಿನಿಮಾಗಳಲ್ಲಿ ನಿತಿನ್‌ ಚಂದ್ರಕಾಂತ್‌ ದೇಸಾಯಿ ಅವರು ಕೆಲಸ ಮಾಡಿದ್ದರು. ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಮುಂಬೈ ಸಮೀಪದ ಕರ್ಜತ್‌ನಲ್ಲಿರುವ ಸ್ಟುಡಿಯೋದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಪ್ರತಿವರ್ಷ ಅಕಾಡೆಮಿ ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಇನ್ ಮೆಮೋರಿಯಮ್ ಮಾಂಟೇಜ್‌ನಲ್ಲಿ ಕಳೆದ ಒಂದು ವರ್ಷದಲ್ಲಿ ನಿಧನರಾದ ಉದ್ಯಮ ಕಥೆಗಳನ್ನು ನೆನಪಿಸಿಕೊಂಡು ಗೌರವ ಸಲ್ಲಿಸಲಾಗುತ್ತದೆ. ಈ ಭಾರೀ ದಿವಗಂತ ನಿತಿನ್‌ ಚಂದ್ರಕಾಂತ್‌ ದೇಸಾಯಿ ಅವರನ್ನು ಆಸ್ಕರ್‌ ವೇದಿಕೆಯ ಮೆಮೊರಿಯಂ ವಿಭಾಗದಲ್ಲಿ ನೆನಪಿಸಿಕೊಳ್ಳಲಾಗಿದೆ. ಆಸ್ಕರ್ ನಾಮನಿರ್ದೇಶನಗೊಂಡ ಲಗಾನ್ ಮತ್ತು ಹಮ್ ದಿಲ್ ದೇ ಚುಕೆ ಸನಮ್‌ನಂತಹ ಹೆಸರಾಂತ ಪ್ರೊಡಕ್ಷನ್‌ ಡೈರೆಕ್ಟರ್‌ ಇವರಾಗಿದ್ದಾರೆ.

ಹೀಗಾಗಿ 96ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಇನ್ ಮೆಮೋರಿಯಮ್ ವಿಭಾಗದಲ್ಲಿ ಇವರನ್ನು ನೆನಪಿಸಿಕೊಂಡು ಗೌರವ ಸಲ್ಲಿಸಲಾಗಿದೆ. 96ನೇ ಆಸ್ಕರ್‌ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್ ಏಂಜಲೀಸ್‌ನಲ್ಲಿ ನಡೆದಿದೆ. ಜಿಮ್ಮಿ ಕಿಮ್ಮೆಲ್‌ ಈ ಕಾರ್ಯಕ್ರಮವನ್ನು ಜಿಮ್ಮಿ ಕಿಮ್ಮೆಲ್ ಆಸ್ಕರ್ ಪ್ರಶಸ್ತಿಗಳನ್ನು ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಮೂಲ ಸಿನಿಮಾ ಸೇರಿದಂತೆ ಒಟ್ಟು ಏಳು ವಿಭಾಗದಲ್ಲಿ ಓಪನ್‌ಹೈಮರ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಕರ್‌ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಭಾರತೀಯ ಕಲಾ ನಿರ್ದೇಶಕನಿಗೆ ವಿಶೇಷ ಗೌರವ; ಯಾರಿವರು?

https://newsfirstlive.com/wp-content/uploads/2024/03/nitin-chandrakanth-1.jpg

Load More