newsfirstkannada.com

ಸ್ಟಾರ್​ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಜ್ಯೂ.NTR, ರಿಷಬ್ ಶೆಟ್ಟಿ; ಏನಿದರ ಸ್ಪೆಷಲ್‌ ಗೊತ್ತಾ?

Share :

Published March 2, 2024 at 3:10pm

    ಸಿನಿಮಾದಲ್ಲಿ ರಿಷಬ್ ಶೆಟ್ಟಿ- ಎನ್​ಟಿಆರ್ ಜೋಡಿಯಾಗ್ತಿದ್ದಾರಾ?

    NTR- ಪ್ರಶಾಂತ್ ನೀಲ್ ಕಾಂಬಿನೇಷನ್​​ನಲ್ಲಿ ಹೊಸ ಸಿನಿಮಾ

    ಈಗಾಗಲೇ ಜೂನಿಯರ್ ಎನ್​ಟಿಆರ್ ಜೊತೆ ಸಿನಿಮಾ ಅನೌನ್ಸ್​

KGF ಸ್ಟಾರ್​ ಡೈರೆಕ್ಟರ್​ ಪ್ರಶಾಂತ್ ನೀಲ್​ ಸ್ಯಾಂಡಲ್​ವುಡ್​ ಸಿನಿಮಾಗಳನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದವರು. ಯಶ್​ ಜೊತೆ ಕೆಜಿಎಫ್​ ಸಿನಿಮಾ ಮಾಡಿ ಇಡೀ ವಿಶ್ವಕ್ಕೆ ಪರಿಚಯಿಸಿಕೊಂಡವರು. ಪ್ರಭಾಸ್​ ಜೊತೆ ಬಿಗ್ ಬಜೆಟ್​ನಲ್ಲಿ ಸಲಾರ್ ಮೂವಿ ಮಾಡಿ ಸಕ್ಸಸ್​ ಕಂಡಿರುವ ಪ್ರಶಾಂತ್ ನೀಲ್ ಮನೆಯಲ್ಲಿ ಕಾರ್ಯಕ್ರಮವೊಂದು ಸಡಗರದಿಂದ ನಡೆದಿದ್ದು ಜೂನಿಯರ್ ಎನ್​ಟಿಆರ್ ಸೇರಿದಂತೆ ಸೌತ್​ ಸ್ಟಾರ್ಸ್​ ಸಮಾಗಮ ನಡೆದಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮ ಮನೆಯಲ್ಲಿ ಕಾರ್ಯಕ್ರಮವಿತ್ತು. ಇದಕ್ಕೆ ಜ್ಯೂನಿಯರ್ ಎನ್​ಟಿಆರ್ ಸೇರಿದಂತೆ ಸೌತ್​ ಸ್ಟಾರ್ಸ್​ ಸಮಾಗಮವಾಗಿದ್ದಾರೆ. ಬೆಂಗಳೂರಿನ ಮನೆಯಲ್ಲಿ ನಡೆದ ಈ ಸಮಾರಂಭದಲ್ಲಿ ತೆಲುಗು ನಟ ಜೂನಿಯರ್ ಎನ್​ಟಿಆರ್, ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ಸ್ ಇದರಲ್ಲಿ ಭಾಗವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಪ್ರಶಾಂತ್ ನೀಲ್, ಜೂನಿಯರ್ ಎನ್​ಟಿಆರ್ ಹಾಗೂ ರಿಷಬ್ ಶೆಟ್ಟಿ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಶಾಂತ್ ನೀಲ್ ಈಗಾಗಲೇ ಜೂನಿಯರ್ ಎನ್​ಟಿಆರ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಆದರೆ ಸದ್ಯಕ್ಕೆ ಎನ್​ಟಿಆರ್ ಅವರ ದೇವರ ಸಿನಿಮಾದ ಕೆಲಸಗಳಲ್ಲಿ ಇದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದ್ದು ಪೋಸ್ಟ್​ ಪ್ರೊಡೆಕ್ಷನ್ ವರ್ಕ್ ನಡೆದಿದೆ ಎಂದು ಹೇಳಲಾಗಿದೆ. ಇದು ಮುಗಿದ ಮೇಲೆ ಎನ್​ಟಿಆರ್- ಪ್ರಶಾಂತ್ ನೀಲ್ ಕಾಂಬಿನೇಷನ್​​ನಲ್ಲಿ ಹೊಸ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದ್ದು ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟಾರ್​ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಜ್ಯೂ.NTR, ರಿಷಬ್ ಶೆಟ್ಟಿ; ಏನಿದರ ಸ್ಪೆಷಲ್‌ ಗೊತ್ತಾ?

https://newsfirstlive.com/wp-content/uploads/2024/03/PRASHANTH_NEEL_NTR_3.jpg

Load More