ಸಿನಿಮಾ ಸ್ಕ್ರಿಪ್ಟ್ ಹೇಳಿ ಬರುವಾಗ ಎದೆ ನೋವು.. ತಮಿಳು ನಿರ್ದೇಶಕ ವಿಕ್ರಮ್ ಸುಗುಮಾರನ್​ ನಿಧನ

author-image
Bheemappa
Updated On
ಸಿನಿಮಾ ಸ್ಕ್ರಿಪ್ಟ್ ಹೇಳಿ ಬರುವಾಗ ಎದೆ ನೋವು.. ತಮಿಳು ನಿರ್ದೇಶಕ ವಿಕ್ರಮ್ ಸುಗುಮಾರನ್​ ನಿಧನ
Advertisment
  • ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನ ಆಗಲಿಲ್ಲ
  • ನಿರ್ಮಾಪಕರಿಗೆ ಸಿನಿಮಾ ಸ್ಕ್ರಿಪ್ಟ್ ಹೇಳಿ ವಾಪಸ್ ಆಗುವಾಗ ನೋವು
  • ನಿರ್ದೇಶನದ ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದ ಸುಗುಮಾರನ್

ಚೆನ್ನೈ: ತಮಿಳು ಸಿನಿಮಾ ನಿರ್ದೇಶಕ ವಿಕ್ರಮ್ ಸುಗುಮಾರನ್ (47) ಅವರು ಕಾರ್ಡಿಕ್ ಅರೆಸ್ಟ್​ (ಹೃದಯ ಸ್ತಂಭನ)ನಿಂದ ನಿಧನ ಹೊಂದಿದ್ದಾರೆ. ಸದ್ಯ ನಿರ್ದೇಶಕರು, ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

ನಿರ್ದೇಶಕ ವಿಕ್ರಮ್ ಸುಗುಮಾರನ್ ಅವರು ತಮಿಳುನಾಡಿನ ಮಧುರೈನಲ್ಲಿ ಇಂದು ಬೆಳಗ್ಗೆ ನಿರ್ಮಾಪಕರೊಬ್ಬರಿಗೆ ಸಿನಿಮಾದ ಸ್ಕ್ರಿಪ್ಟ್​ ಹೇಳಿ ವಾಪಸ್ ಆಗುತ್ತಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:ರಿಂಕು ಸಿಂಗ್, MP ಪ್ರಿಯಾ ಸರೋಜ್ ಮದುವೆ ಯಾವಾಗ.. ಇಬ್ಬರು ಪರಿಚಯ ಆಗಿದ್ದು ಹೇಗೆ?

publive-image

ತಮಿಳು ಸಿನಿ ರಂಗದ ನಿರ್ದೇಶಕರು, ನಿರ್ಮಾಪಕರು, ನಟ ಶಂತನು ಭಾಗ್ಯರಾಜ್ ಸೇರಿದಂತೆ ನಟರು, ನಟಿಯರು ಹಾಗೂ ಕಲಾವಿದರು ನಿರ್ದೇಶಕ ವಿಕ್ರಮ್ ಸುಗುಮಾರನ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರ ಬಳಿ 1999 ರಿಂದ 2000ರವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದಿದ್ದರು.

2013ರಲ್ಲಿ ಇವರ ಮೊದಲ ನಿರ್ದೇಶನದಲ್ಲಿ ತೆರೆಗೆ ಅಪ್ಪಳಿಸಿದ್ದ ಮಧ ಯಾನೈ ಕೂಟ್ಟಾಮ್ ಸಿನಿಮಾ ಯಶಸ್ವಿ ಪ್ರದರ್ಶನಗೊಂಡಿತ್ತು. ಈ ಸಿನಿಮಾದಲ್ಲಿ ಕಥೈರ್​ ಅಭಿನಯ ಮಾಡಿದ್ದರು. ಇದೊಂದು ಹಳ್ಳಿಯ ಕಥೆಯಾಗಿದ್ದು ಮೊದಲ ಯತ್ನದಲ್ಲೇ ಅಭಿಮಾನಿಗಳ ಮನ ಗೆದ್ದಿತ್ತು. ಇತ್ತೀಚೆಗೆ ಅಂದರೆ 2023ರಲ್ಲಿ ರಾವಣ ಕೊಟ್ಟಂ ಎನ್ನವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ನಟ ಶಂತನು ಭಾಗ್ಯರಾಜ್ ಈ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ತೇರಮ್ ಪೋರಮ್ ಎನ್ನುವ ಪ್ರಾಜೆಕ್ಟ್​ ಅನ್ನು ಕೈಗೆತ್ತಿಕೊಂಡಿದ್ದರು. ಆದರೆ ಇದರ ಮಧ್ಯೆ ನಿಧನ ಹೊಂದಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment