ಕುಂಭಮೇಳದ ವೈರಲ್ ಬ್ಯೂಟಿ ಮೊನಾಲಿಸಾಗೆ ಬಿಗ್ ಶಾಕ್‌.. ಸಿನಿಮಾ ಆಫರ್ ಕೊಟ್ಟಿದ್ದ ಡೈರೆಕ್ಟರ್ ಅರೆಸ್ಟ್​! ಯಾಕೆ?

author-image
Bheemappa
Updated On
ಕುಂಭಮೇಳದ ವೈರಲ್ ಬ್ಯೂಟಿ ಮೊನಾಲಿಸಾಗೆ ಬಿಗ್ ಶಾಕ್‌.. ಸಿನಿಮಾ ಆಫರ್ ಕೊಟ್ಟಿದ್ದ ಡೈರೆಕ್ಟರ್ ಅರೆಸ್ಟ್​! ಯಾಕೆ?
Advertisment
  • ಯಾವ ಆರೋಪದ ಮೇಲೆ ನಿರ್ದೇಶಕನನ್ನ ಬಂಧಿಸಲಾಗಿದೆ?
  • ಜಾಮೀನು ಅರ್ಜಿ ನಿರಾಕರಣೆ ಮಾಡಿರುವ ದೆಹಲಿ ಹೈಕೋರ್ಟ್
  • ಗುಪ್ತಚರ ಇಲಾಖೆಯಿಂದಲೂ ಪೊಲೀಸರು ಮಾಹಿತಿ ಪಡೆದ್ರಾ?

ನವದೆಹಲಿ: 2025ರ ಮಹಾ ಕುಂಭಮೇಳದಲ್ಲಿ ವೈರಲ್ ಆಗಿದ್ದ ಬ್ಯೂಟಿ ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟಿ ಆಗಬೇಕೆಂದು ಕನಸು ಕಂಡಿದ್ದ ಮಹಿಳೆಯ ಜೊತೆ ಅಸಭ್ಯ ವರ್ತನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧನ ಮಾಡಲಾಗಿದೆ.

ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರು ಬಂಧನ ಬಳಿಕ ಮಧ್ಯಂತರ ಜಾಮೀನಿಗಾಗಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಡೆಲ್ಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಣೆ ಮಾಡಿದೆ. ಹೀಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಗುಪ್ತಚರ ಮಾಹಿತಿ ಹಾಗೂ ಟೆಕ್ನಿಕಲ್​ ಆಗಿ ಕೆಲ ಮಾಹಿತಿ ಸಂಗ್ರಹಣೆ ಬಳಿಕ ಸನೋಜ್ ಮಿಶ್ರಾನನ್ನ ದೆಹಲಿ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಟ್ರಾಫಿಕ್​ ಸಿಗ್ನಲ್​ನಲ್ಲಿ ಹೆಂಡತಿ ಮಾಡಿದ ರೀಲ್ಸ್​ನಿಂದ ಪೊಲೀಸಪ್ಪನ ಉದ್ಯೋಗವೇ ಹೋಯಿತು!

publive-image

2020ರಲ್ಲಿ ಉತ್ತರ ಪ್ರದೇಶದ 28 ವರ್ಷದ ಮಹಿಳೆ ಒಬ್ಬರು ಇನ್​ಸ್ಟಾ ಮೂಲಕ ನಿರ್ದೇಶಕರಿಗೆ ಪರಿಚಯವಾಗಿದ್ದರು. ಬಳಿಕ ಸಿನಿಮಾದಲ್ಲಿ ನಟಿಯಾಗಿ ಮಾಡುತ್ತೇನೆ ಎಂದು ಹೇಳಿ ಮಹಿಳೆ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಅಲ್ಲದೇ ಮಾದಕ ದ್ರವ್ಯ ಕೂಡ ನೀಡಿದ್ದಾನೆ. ಮಹಿಳೆಯ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿದ್ದಾರೆ ಎನ್ನಲಾಗಿದೆ.

ಲಿವ್ ಇನ್​ ರಿಲೇಶನ್​ಶಿಪ್​ನಲ್ಲಿ ಇರುವಂತೆ ಆಕೆಯನ್ನು ಒತ್ತಾಯಿಸುತ್ತಿದ್ದನು. ಈ ಎಲ್ಲ ಮಾಹಿತಿಗಳು ತಿಳಿದ ಮೇಲೆ, ಈ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ ನಂತರವೇ ಪೊಲೀಸರು ನಿರ್ದೇಶಕ ಸನೋಜ್ ಮಿಶ್ರಾನನ್ನ ಬಂಧಿಸಿ, ಹೈಕೋರ್ಟ್​ಗೆ ಹಾಜರು ಪಡಿಸಿದ್ದರು. ಆದ್ರೆ ಈಗ ಕೋರ್ಟ್ ಜಾಮೀನು ನಿರಾಕರಣೆ ಮಾಡಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment