/newsfirstlive-kannada/media/post_attachments/wp-content/uploads/2024/12/ANIL-KUMBLE.jpg)
ಟೀಮ್​ ಇಂಡಿಯಾದ ಸ್ಟಾರ್​​ ಕ್ರಿಕೆಟರ್​​ ರವಿಚಂದ್ರನ್ ಅಶ್ವಿನ್. ಇವರು ಕ್ರಿಕೆಟ್​ನ ರಿಯಲ್ ಜಂಟಲ್​ಮೆನ್. ಅಶ್ವಿನ್,​​​​​​ ಒಬ್ಬ ಲೆಜೆಂಡರಿ ಕ್ರಿಕೆಟರ್​ಗೇ ಅಭಿಮಾನಿ ಆಗಿದ್ರು. ನಿಮಗೆ ಈ ವಿಚಾರ ಗೊತ್ತಿರಬಹುದು. ಅಶ್ವಿನ್, ಟೀಮ್ ಇಂಡಿಯಾದ ದ ಗ್ರೇಟ್ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆಯ ಅಪ್ಪಟ ಅಭಿಮಾನಿ. ಸದ್ಯ ಭಾರತೀಯ ಟೆಸ್ಟ್ ಕ್ರಿಕೆಟ್​​ನಲ್ಲಿ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು, ನಂಬರ್ ವನ್ ಸ್ಥಾನದಲ್ಲಿದ್ದಾರೆ. ಸದ್ಯಕ್ಕಂತೂ ಆ ದಾಖಲೆಯನ್ನ ಭಾರತೀಯ ಬೌಲರ್ ಬ್ರೇಕ್ ಮಾಡೋದು ಕಷ್ಟ.
ಕುಂಬ್ಳೆ ದಾಖಲೆಯನ್ನ ಮುರಿಯೋ ಒಬ್ಬ ಬೌಲರ್​ ಅಂದ್ರೆ ಅದು ಆರ್.ಅಶ್ವಿನ್ ಅಂತ ಹೇಳಲಾಗ್ತಿತ್ತು. ಕುಂಬ್ಳೆ ಮತ್ತು ಅಶ್ವಿನ್ ನಡುವೆ ಇದ್ದ ಗ್ಯಾಪ್, ಜಸ್ಟ್ 82 ವಿಕೆಟ್ ಮಾತ್ರ. ಆಶ್ವಿನ್ ಮನಸು ಮಾಡಿದ್ರೆ ಈ ದಾಖಲೆಯನ್ನ ಮುರಿಯಬಹುದಿತ್ತು. ತವರಿನಲ್ಲಿ 10-15 ಟೆಸ್ಟ್ ಪಂದ್ಯಗಳನ್ನ ಆಡಿದ್ರೆ ಭಾರತದ ನಂಬರ್ ಒನ್ ಬೌಲರ್​ ಆಗಬಹುದಿತ್ತು. ಅಶ್ವಿನ್ ಕುಂಬ್ಳೆ ದಾಖಲೆ ಮುರಿಯೋ ಮನಸು ಮಾಡಲಿಲ್ಲ. ನಾನು ಯಾವತ್ತೂ ಅನಿಲ್ ಕುಂಬ್ಳೆ ಟೆಸ್ಟ್ ದಾಖಲೆಯನ್ನ ಮುರಿಯೊಲ್ಲ ಅಂತ ಹೇಳಿದ್ದರು. ಬೇಕಾದ್ರೆ 618 ವಿಕೆಟ್ ತೆಗೆದು ನಿವೃತ್ತಿ ಆಗ್ತೀನಿ. ಆದ್ರೆ ಅನಿಲ್ ಬಾಯ್​​ನ ಓವರ್​ ಟೇಕ್ ಮಾಡಲ್ಲ ಅಂದಿದಿದ್ದರು. ಆದ್ರೀಗ ಅಶ್ವಿನ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಇನ್ನು ಅಶ್ವಿನ್ ನಿವೃತ್ತಿಗೆ ಅನಿಲ್ ಕುಂಬ್ಳೆ ಬೇಸರ ವ್ಯಕ್ತಪಡಿಸಿದ್ದಾರೆ. ಆಶ್, ಅಭಿನಂದನೆಗಳು. ಅದ್ಭುತವಾದ ವೃತ್ತಿ ಜೀವನ ನಿಮ್ಮದಾಗಿದೆ. ನೀವು ಭಾರತಕ್ಕೆ ಚಾಂಪಿಯನ್ ಬೌಲರ್ ಆಗಿದ್ದೀರಿ. ಚಾಂಪಿಯನ್ ಆಲ್‌ರೌಂಡರ್ ಆಗಿದ್ದೀರಿ. ನೀವು ಖಂಡಿತ ಮಿಸ್ ಮಾಡಿಕೊಳ್ತೀರಿ. ಟೀಂ ಇಂಡಿಯಾ ನಿಮ್ಮನ್ನು ಮಿಸ್​​ ಮಿಸ್​ ಮಾಡಿಕೊಳ್ಳುತ್ತದೆ. ಆದರೆ ನಿಮ್ಮ ನಿವೃತ್ತಿ ಸುದ್ದಿ ತಿಳಿದು ನಾನು ಕೊಂಚ ನಿರಾಸೆಗೊಂಡಿದ್ದೇನೆ. ತಾತ್ವಿಕವಾಗಿ 619 ವಿಕೆಟ್​​ಗಳ ಆಚೆಗೆ ಹೋಗುವುದನ್ನು ನಾನು ಬಯಸಿದ್ದೆ. ನಿಮ್ಮ ಎರಡನೇ ಇನ್ನಿಂಗ್ಸ್​ಗೆ ಶುಭಾಶಯಗಳು. ನಿಮ್ಮ ಮುಂದಿನ ಜೀವನ ಅದ್ಭುತವಾಗಿರಲಿದೆ ಎಂಬ ನಂಬಿಕೆ ನನಗೆ ಇದೆ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us