newsfirstkannada.com

ಸಾವನ್ನೇ ಗೆದ್ದು ಬಂದ ಸದ್ಗುರು ವಾಸುದೇವ್‌.. ಬ್ರೈನ್ ಸರ್ಜರಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Share :

Published March 27, 2024 at 6:06pm

Update March 27, 2024 at 5:59pm

  ದೆಹಲಿಯ ಆಸ್ಪತ್ರೆಯಿಂದ ಸದ್ಗುರು ಜಗ್ಗಿ ವಾಸುದೇವ್ ಅವರು ಡಿಸ್ಚಾರ್ಜ್

  ಆಸ್ಪತ್ರೆ ಬೆಡ್ ಮೇಲೂ ಅವರ ಹಾಸ್ಯಪ್ರಜ್ಞೆಗೆ ಶಾಕ್ ಆದ ವೈದ್ಯರ ತಂಡ

  ಬ್ರೈನ್ ಸರ್ಜರಿ ಬಳಿಕ ಫಿಟ್ ಅಂಡ್ ಫೈನ್ ಆದ ಸದ್ಗುರು ಜಗ್ಗಿ ವಾಸುದೇವ್

ನವದೆಹಲಿ: ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಈಶಾ ಫೌಂಡೇಶನ್ ಸಂಸ್ಥಾಪಕ, ಸದ್ಗುರು ಜಗ್ಗಿ ವಾಸುದೇವ್ ಅವರು ದೆಹಲಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಮಾರ್ಚ್ 17ರಂದು ಸದ್ಗುರು ವಾಸುದೇವ್ ಅವರು ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಂದು ಸದ್ಗುರು ಫಿಟ್ ಅಂಡ್ ಫೈನ್ ಆದ ಹಿನ್ನೆಲೆಯಲ್ಲಿ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ.

ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿಯವರು, ಸದ್ಗುರುಗಳ ಆರೋಗ್ಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲೂ ಜಾಗತಿಕ ಒಳಿತಿಗಾಗಿ ಅವರ ಬದ್ಧತೆ, ಅವರ ತೀಕ್ಷ್ಣ ಬುದ್ಧಿ ಮತ್ತು ಅವರ ಹಾಸ್ಯಪ್ರಜ್ಞೆಯು ಎದ್ದು ಕಾಣುತ್ತಿತ್ತು. ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿರುವ ಲಕ್ಷಾಂತರ ಜನರಿಗೆ ಇದು ಒಳ್ಳೆಯ ಸುದ್ದಿ ಎಂದು ನಾನು ಭಾವಿಸುತ್ತೇನೆ ಎಂದು ಸಂಗೀತಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಎಮೆರ್ಜೆನ್ಸಿ ಬ್ರೈನ್ ಸರ್ಜರಿ.. ಸದ್ಗುರು ಜಗ್ಗಿ ವಾಸುದೇವ್​ ಆರೋಗ್ಯ ಈಗ ಹೇಗಿದೆ? ಲೇಟೆಸ್ಟ್ ವಿಡಿಯೋ ಇಲ್ಲಿದೆ

ವಿಶ್ವಾದ್ಯಂತ ಲಕ್ಷಾಂತರ ಸ್ವಯಂಸೇವಕರು ಮತ್ತು ಜನರ ಜೊತೆಗೂಡಿ, ಡಾ. ವಿನಿತ್ ಸೂರಿ, ಡಾ ಪ್ರಣವ್ ಕುಮಾರ್, ಡಾ ಸುಧೀರ್ ತ್ಯಾಗಿ, ಡಾ. ಎಸ್ ಚಟರ್ಜಿ ಮತ್ತು ಅಪೋಲೋ ಆಸ್ಪತ್ರೆಯ ಸಂಪೂರ್ಣ ತಂಡಕ್ಕೆ, ಅವರ ಅಸಾಧಾರಣ ಬೆಂಬಲ ಮತ್ತು ಕಾಳಜಿಗಾಗಿ ಈಶ ಫೌಂಡೇಶನ್ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಈ ಸಮಯದಲ್ಲಿ ಸದ್ಗುರುಗಳ ಮೇಲೆ ನೀವು ತೋರಿಸಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕಾಗಿ ಅಪಾರವಾದ ಕೃತಜ್ಞತೆಯನ್ನು ಹೊಂದಿದೆ ಎಂದು ಈಶ ಫೌಂಡೇಶನ್ ತಿಳಿಸಿದೆ.

ಬ್ರೈನ್ ಸರ್ಜರಿಗೂ ಮುನ್ನ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಕಳೆದ 4 ವಾರಗಳ ಹಿಂದೆಯೇ ತಲೆನೋವು ಬಂದಿತ್ತು. ತುಂಬಾ ತಲೆನೋವು ಇದ್ರೂ ಅದನ್ನ ಅವರು ನಿರ್ಲಕ್ಷ್ಯ ಮಾಡಿದ್ದರು. ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಕಳೆದ ಮಾರ್ಚ್ 8ರಂದು ಮಹಾಶಿವರಾತ್ರಿ ಹಬ್ಬದ ಆಚರಣೆಯಲ್ಲೂ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಆರೋಗ್ಯದ ಸಮಸ್ಯೆ ಎದುರಾಗಿತ್ತು. ಆದರೆ ತಮ್ಮ ಸಮಸ್ಯೆಯನ್ನ ಅವರು ಯಾರಿಗೂ ಹೇಳಿರಲಿಲ್ಲ.

ಕಳೆದ ಮಾರ್ಚ್ 15ರಂದು ಸದ್ಗುರು ಅವರಿಗೆ ತಲೆನೋವು ತುಂಬಾ ಹೆಚ್ಚಾಗಿದೆ. ಅಂದು ಸಂಜೆ 4ಗಂಟೆಗೆ MRI ಸ್ಕ್ಯಾನ್ ಮಾಡಲು ವೈದ್ಯರು ಹೇಳಿದ್ದಾರೆ. MRI ಸ್ಕ್ಯಾನ್ ಮಾಡಿದ ಮೇಲೂ ಸದ್ಗುರು ಅವರು ಸಂಜೆ 6 ಗಂಟೆಯ ಮೀಟಿಂಗ್ ಅಟೆಂಟ್ ಮಾಡಲು ಹೋಗಿದ್ದಾರೆ. ಅಲ್ಲಿ ಕೂಡ ಯಾರಿಗೂ ಅವರಿಗೆ ಅನಾರೋಗ್ಯ ಇದೆ ಅನ್ನೋದನ್ನ ಹೇಳಲಿಲ್ಲ.

ಇದಾದ ಬಳಿಕ ಮಾರ್ಚ್ 17ರ ಬೆಳಗ್ಗೆ ಸದ್ಗುರು ಜಗ್ಗಿ ವಾಸುದೇವ್ ಅವರು ತುಂಬಾ ಅಸ್ವಸ್ಥರಾಗಿದ್ದರು. ಆಗ ತಕ್ಷಣವೇ ಆಸ್ಪತ್ರೆಗೆ ದಾಖಲಾದರು. ತಮ್ಮ ಕರ್ತವ್ಯ, ಜವಾಬ್ದಾರಿಗಳ ಮಧ್ಯೆ ಎಮರ್ಜೆನ್ಸಿ ಸರ್ಜರಿಗೆ ಆಗ ಒಪ್ಪಿಗೆ ನೀಡಿದರು. ಮಾರ್ಚ್ 17ರಂದೇ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಆಗ ಅವರ ಮೆದುಳಿನಲ್ಲಿ ರಕ್ತಸ್ರಾವ ಹೆಚ್ಚಾಗಿತ್ತು. ಜೀವಕ್ಕೆ ಅಪಾಯ ಎದುರಾಗಿತ್ತು. ಆಗ ಎಮೆರ್ಜೆನ್ಸಿ ಬ್ರೈನ್ ಸರ್ಜರಿ ಮಾಡಲಾಗಿದೆ. ಈಗ ನಾವೇ ಸದ್ಗುರು ಜಗ್ಗಿ ವಾಸುದೇವ್ ಅವರ ಆರೋಗ್ಯದ ಸ್ಥಿತಿ ನೋಡಿ ಆಶ್ಚರ್ಯಗೊಂಡಿದ್ದೇವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವನ್ನೇ ಗೆದ್ದು ಬಂದ ಸದ್ಗುರು ವಾಸುದೇವ್‌.. ಬ್ರೈನ್ ಸರ್ಜರಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌

https://newsfirstlive.com/wp-content/uploads/2024/03/Sadguru-Vasudeva-2.jpg

Load More