newsfirstkannada.com

ಕಲಾಪದಲ್ಲಿ ಪ್ರತಿಧ್ವನಿಸಿದ ‘ಜಿಂದಾಬಾದ್’ ಘೋಷಣೆ; ನೀವೇ ಮಾಡಿಸಿರಬಹುದು ಎಂದ ಗುಂಡೂರಾವ್

Share :

Published February 28, 2024 at 11:23am

Update February 28, 2024 at 11:26am

  ಕಿವಿ ಮೇಲೆ ಯಾರೂ ಹೂ ಇಡಬೇಡಿ ಎಂದು ಅಶೋಕ್​ ಆಕ್ರೋಶ

  ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಸ್ಪೀಕರ್​ ಯು.ಟಿ. ಖಾದರ್​

  ಯಾರೇ ಘೋಷಣೆ ಕೂಗಿದ್ರೂ ತಪ್ಪೇ, ದೇಶ ದ್ರೋಹಿಗಳೇ ಎಂದ ಸಚಿವ ಜಮೀರ್​

ಬೆಂಗಳೂರು: ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಆರೋಪ ವಿಚಾರ ಪ್ರತಿಧ್ವನಿಸಿತು. ನಿನ್ನೆ ಕಾಂಗ್ರೆಸ್​ ಬೆಂಬಲಿಗರು ‘ಪಾಕಿಸ್ತಾನ್ ಜಿಂದಾಬಾದ್’​ ಎಂದು ಕೂಗಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಕ್ರೋಶ ಹೊರಹಾಕಿದರು. ಪರಿಣಾಮ ಕಲಾಪದಲ್ಲಿ ತೀವ್ರ ಗದ್ದಲ ಸೃಷ್ಟಿಯಾಯ್ತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಖಾದರ್ ಕೆಲ ಸಮಯದವರೆಗೆ ಮುಂದೂಡಿದರು.

‘ನನಗೆ ಅವಮಾನ ಮಾಡಿ.. ಆದರೆ..’

ಕಲಾಪದ ಆರಂಭದಲ್ಲಿ.. ವಿವಾದಿತ ಘೋಷಣೆ ವಿಚಾರದ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಟ್ಟರು. ಅಧಿಕಾರಿಗಳ ಮೂಲಕ ಕೆಲವು ವಿಚಾರಗಳು ನನ್ನ ಗಮನಕ್ಕೆ ಬಂದಿವೆ. ನನಗೆ ಅವಮಾನ ಮಾಡಿ, ತೊಂದರೆ ಇಲ್ಲ. ರಾಷ್ಟ್ರಕ್ಕೆ ತೊಂದರೆ ಮಾಡಿದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ. ನಾನು ಅವಮಾನ ಆಗುವಂತಹದ್ದು ಏನೂ ಮಾತನ್ನಾಡಿಲ್ಲ. ಘಟನೆಯನ್ನ ನಾನೂ ತೀವ್ರವಾಗಿ ಖಂಡಿಸುತ್ತೇನೆ. ಆದರೆ ಅದಕ್ಕೂ ಮೊದಲು ಚರ್ಚಿಸಿ ಎಂದು ಸ್ಪೀಕರ್ ಮನವಿ ಮಾಡಿಕೊಂಡರು.

ಈ ವಿಚಾರವನ್ನ ಯಾರೂ ಲಘುವಾಗಿ ಪರಿಗಣಿಸಬೇಡಿ. ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕೆಂದು ಎಂದು ಸ್ಪೀಕರ್ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರಿಗೆ ಸಲಹೆ ನೀಡಿದರು.

ಯೋಧರಿಗೆ ಹೆಂಗೆ ಉತ್ತರ ಕೊಡೋಣ..!

ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಪ್ರಸ್ತಾಪಿಸಿ.. ದೇಶದ ಬಾವುಟ ಯಾರು ಹಿಡಿದುಕೊಂಡು ಬಂದಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಅಂತಾ ಘೋಷಣೆ ಕೂಗಿದ್ದಾರೆ ಎಂದು ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಸ್ಟೀಕರ್​ ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಶಿಫಾರಸು ಮಾಡಿದರು.

ಬಳಿಕ ಆರ್.ಅಶೋಕ್ ಮಾತು ಮುಂದುವರಿಸಿ.. ಕಿವಿ ಮೇಲೆ ಯಾರೂ ಹೂ ಇಡಬೇಡಿ. ನಾವು ನೋಡೇ ಇಲ್ಲ, ಕೇಳೇ ಇಲ್ಲಾ ಅಂತಿದ್ದಾರೆ. ಹಿಂದೆ ಕಾಂಗ್ರೆಸ್ ನವರು ಸದನದಕ್ಕೆ ಹೂ ಇಟ್ಕೊಂಡು ಬಂದಿದ್ದರು. ಪಾಕಿಸ್ತಾನ‌ ಜಿಂದಾಬಾದ್ ಅಂತಾ ಘೋಷಣೆ ಮಾಡಿದವರು ಪಾಕಿಸ್ತಾನದವರೇ? ಇಲ್ಲಿ ಇನ್ನೆಷ್ಟು ಜನ ಪಾಕಿಸ್ತಾನದವರು ಇದ್ದಾರೋ ಗೊತ್ತಿಲ್ಲ. ನಮಗೆ ಸಾಕಷ್ಟು ಭಯವಾಗುತ್ತಿದೆ. ಯೋಧರಿಗೆ ಹೇಗೆ ಉತ್ತರ ಕೊಡೋದು. ಗಡಿಯಲ್ಲಿ ಯೋಧರು ಕಾಯುತ್ತಿದ್ದಾರೆ. ಇದೂವರೆಗೂ ಯಾವುದೇ ಕ್ರಮತೆಗೆದುಕೊಂಡಿಲ್ಲ. ನಾನು ತಪ್ಪು ಮಾಡಿದ್ರೆ ನನ್ನನ್ನೂ ಜೈಲ್ ಗೆ ಹಾಕಲಿ. ಆದರೆ ಯಾಕೆ ಘೋಷಣೆ ಕೂಗಿದ್ರೂ ಯಾಕೆ ಕ್ರಮ ಆಗಿಲ್ಲ ಎಂದು ಆರ್​ ಅಶೋಕ್​ ಪ್ರಶ್ನಿಸಿದ್ದಾರೆ.

ಅಶೋಕ್ ತರಾಟೆ

ಪಾರ್ಲಿಮೆಂಟ್​ನಲ್ಲಿ ಯಾರೂ ಪಾಕಿಸ್ತಾನದಲ್ಲಿ ಜಿಂದಾಬಾದ್ ಎಂದು ಕೂಗಿಲ್ಲ. ಇದು ಕರ್ನಾಟಕದ ಏಳು ಕೋಟಿ ಜನರ ಆತ್ಮ ಇರುವ ಜಾಗ. ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದ್ದು ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಯಾರು ರಕ್ಷಣೆ ಕೊಡಬೇಕಾಗಿತ್ತೋ ಅವರು ರೆಡ್ ಕಾರ್ಪೆಟ್ ಹಾಕಿದ್ದಾರೆ ಎಂದು ಆರ್​ ಅಶೋಕ್​ ಸರ್ಕಾರಕ್ಕೆ ತರಾಟೆ ತೆಗೆದುಕೊಂಡರು. ಸರ್ಕಾರ ಬೇಜವಾಬ್ದಾರಿತನ ತೋರಿಲ್ಲ. ಘೋಷಣೆ ಕರೆದುಕೊಂಡು ಬಂದವರು ಯಾರು. ಯಾರು ಅವರನ್ನ ರಕ್ಷಿಸಿದವರು. ಪೊಲೀಸರು ಯಾಕೆ ಇನ್ನೂ ಬಂದಿಸಿಲ್ಲ ಎಂದು ಆರ್​ ಅಶೋಕ್​ ಪ್ರಶ್ನಿಸಿದ್ದಾರೆ.

ಅಶೋಕ್ ಮಾತಿನ ಮಧ್ಯೆ ಪ್ರವೇಶ ಮಾಡಿದ ಸಚಿವ ದಿನೇಶ್ ಗುಂಡೂರಾವ್.. ನೀವೇ ಇಂತಹ ಘಟನೆಗಳನ್ನ ಮಾಡಿಸಿರಬಹುದು ಎಂದರು. ಬಳಿಕ ಜಮೀರ್ ಎದ್ದುನಿಂತು, ಯಾರೇ ಘೋಷಣೆ ಕೂಗಿದ್ರೂ ತಪ್ಪೇ, ದೇಶ ದ್ರೋಹಿಗಳೇ. ಈ ವಿಚಾರದಲ್ಲಿ ಎರಡು ಮಾತೇ ಇಲ್ಲ. ಬಿಜೆಪಿಯವರಿಗೆ ವಿಷಯಗಳೇ ಇಲ್ಲ ಹಾಗಾಗಿ ಇದನ್ನ ಸಿಎಂ ರಾಜೀನಾಮೆ ಮಾಡಬೇಕೆಂದು ಕೇಳುತ್ತಿದ್ದಾರೆ. ನಿನ್ನೆ ಬೇರೆ ಅವರಿಗೆ ಮುಖಭಂಗವಾಗಿದೆ. ಹಾಗಾಗಿ ಪ್ರತಿಭಟನೆ ಮಾಡ್ತಿದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ ಅಂತಾ ನಾಜೀರ್ ಹುಸೇನ್ ಹೇಳಿದ್ದಾರೆ. ನಜೀರ್ ಸಾಬ್ ಜಿಂದಾಬಾದ್ ಅಂತಾ ಘೋಷಣೆ ಕೂಗಿದ್ದಾರೆ ಅಂದಿದ್ದಾರೆ. ಎಪ್‌ಎಸ್‌ಎಲ್ ವರದಿಗೆ ವಿಡಿಯೋ ಕಳಿಸಿದ್ದಾರೆ. ಯಾರೇ ಘೋಷಣೆ ಕೂಗಿದ್ರೂ ದೇಶದ್ರೋಹಿಯೇ ಎಂದು ಜಮೀರ್​ ಅಹ್ಮದ್​ ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲಾಪದಲ್ಲಿ ಪ್ರತಿಧ್ವನಿಸಿದ ‘ಜಿಂದಾಬಾದ್’ ಘೋಷಣೆ; ನೀವೇ ಮಾಡಿಸಿರಬಹುದು ಎಂದ ಗುಂಡೂರಾವ್

https://newsfirstlive.com/wp-content/uploads/2024/02/R-ASHOK-1.jpg

Load More