/newsfirstlive-kannada/media/post_attachments/wp-content/uploads/2025/07/SIDDARAMAIAH-7.jpg)
ಭಾರೀ ರಾಜಕೀಯ ಕೆಸರೆರಚಾಟಗಳ ಮಧ್ಯೆ ಶುರುವಾದ ಜಾತಿ ಗಣತಿ ಸಮೀಕ್ಷೆ ಶುರುವಾದಾಗಲೇ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ. ಸಮೀಕ್ಷೆಯನ್ನ ಬೇಕಾಬಿಟ್ಟಿ ನಡೆಸಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಆದ್ರೆ ಇದಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮದೇ ದಾಟಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.
ಜಾತಿ ಗಣತಿ ಸಮೀಕ್ಷೆಯಲ್ಲಿ ಕಳ್ಳಾಟ ನಡೆಸುತ್ತಿರುವ ಆರೋಪ
ಬೇಕು-ಬೇಡಗಳ ಮಧ್ಯೆ ಶುರುವಾದ ಜಾತಿ ಗಣತಿ ಸದ್ಯ ವಿವಾದದ ಕೇಂದ್ರಬಿಂದುವಾಗಿದೆ. ಯಾಕಂದ್ರೆ ಅವೈಜ್ಞಾನಿಕವಾಗಿದೆ ಅಂತ ಕಾಂಗ್ರೆಸ್ ಸರ್ಕಾರ ಮತ್ತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ನಡೆಸುತ್ತಿದೆ. ಆದರೆ ಈ ಸಮೀಕ್ಷೆಯಾದರೂ ನೆಟ್ಟಗೆ ನಡೆಯುತ್ತಿದೆಯಾ ಇಲ್ಲ ಅಂತಿವೆ ಕೆಲವೊಂದು ದೃಶ್ಯಗಳು.. ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿ ಹಾಗೂ ಸರ್ಕಾರಿ ಅಧಿಕಾರಿಗಳು ಸರಿಯಾಗಿ ಮಾಹಿತಿ ಪಡೆಯದೇ ಕಾಟಾಚಾರಕ್ಕಾಗಿ ಸಮೀಕ್ಷೆ ಮಾಡಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸಿ ಕೈತೊಳೆಯುತ್ತಿದ್ದಾರೆಂಬ ದೂರು ಕೇಳಿಬಂದಿವೆ.
ಇದನ್ನೂ ಓದಿ: Heart attack: ‘ಕೋವಿಡ್ ಲಸಿಕೆಯ ದುಷ್ಪರಿಣಾಮ ಇರಬಹುದೇ..?’ ಚರ್ಚೆ ಹುಟ್ಟುಹಾಕಿದ ಸಿದ್ದರಾಮಯ್ಯ
ಸಂಪುಟ ಸಭೆಯಲ್ಲೂ ಒಳ ಮೀಸಲಾತಿ ಸಮೀಕ್ಷೆ ಬಗ್ಗೆ ಚರ್ಚೆ
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಒಳ ಮೀಸಲಾತಿ ಸರ್ವೆ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾಟಾಚಾರಕ್ಕೆ ಒಳ ಮೀಸಲಾತಿ ಸರ್ವೆ ಮಾಡಲಾಗ್ತಿದೆ ಅಂತ ದೂರು ಕೇಳಿಬಂದಿದೆ. ಕ್ಯಾಬಿನೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆ ಸಚಿವ ಹೆಚ್.ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೆಚ್.ಎನ್ ನಾಗಮೋಹನ್ ದಾಸ್ರನ್ನ ಕರೆಸಿ ಸಮೀಕ್ಷೆ ಯಾವ ಹಂತದಲ್ಲಿದೆ, ಏನಾಗಿದೆ ಎಂದು ವಿಚಾರಿಸುತ್ತೇನೆ ಅಂತ ಸಿಎಂ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬಡ್ತಿ, ಕೆಲಸಗಾರರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ
ಜಾತಿಗಣತಿ ಸಮೀಕ್ಷೆಯಲ್ಲಿ ಕಳ್ಳಾಟ ಆರೋಪ ಬೆನ್ನಲ್ಲೇ ಸಮೀಕ್ಷೆ ವಿರುದ್ಧ JDS ಕಿಡಿ ಕಾರಿದೆ. ಇದು ದಲಿತ ವಿರೋಧಿ ಕಾಂಗ್ರೆಸ್ನ ಢೋಂಗಿ ಸಮೀಕ್ಷೆ. ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುತ್ತಿದೆ ಅಂತ ಆರೋಪಿಸಿದೆ.
ಇದು ದಲಿತ ವಿರೋಧಿ @INCKarnataka ಸರ್ಕಾರದ ಢೋಂಗಿ ಸಮೀಕ್ಷೆ.
ಪರಿಶಿಷ್ಟರ ಉದ್ಧಾರ ಮಾಡುತ್ತೇವೆ ಎಂದು ಬೊಗಳೆ ಬಿಡುವ ಸಿಎಂ @siddaramaiah, ಡಿಸಿಎಂ @DKShivakumar ಅವರೇ,
ಮನೆ ಮಾಲಿಕರ/ವಾಸವಿರುವವರ ಬಳಿ ಮಾಹಿತಿಯನ್ನು ಪಡೆಯದೇ ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುವುದು ಯಾವ ಮಾದರಿಯ ಸಮೀಕ್ಷೆ ?
ಲಂಚಗುಳಿತನ, ಭ್ರಷ್ಟಾಚಾರ,… pic.twitter.com/2ChHhXAvZH— Janata Dal Secular (@JanataDal_S) July 2, 2025
ಬಿಜೆಪಿ ಕೂಡ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದೆ. ಸಿದ್ದರಾಮಯ್ಯ ಹುಡುಗಾಟಿಕೆಗೆ ಸಮೀಕ್ಷೆ ಮಾಡ್ತಿದ್ದಾರೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಅದ್ಯಾವಾಗ ಜಾತಿ ಗಣತಿ ಬಗ್ಗೆ ವಿಪಕ್ಷಗಳು ಸಾಲು ಸಾಲು ಆರೋಪ ಮಾಡಿದವೋ ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡುವ ಹೆಸರಲ್ಲಿ ಸಬೂಬು ಹೇಳ್ತಿದ್ದಾರೆ. ಮನೆಯಲ್ಲಿ ಇಲ್ಲ ಅಂದ್ರೆ ಸ್ಟಿಕ್ಕರ್ ಅಂಟಿಸಲಾಗ್ತಿದ್ದು, ಮನೆಯಲ್ಲಿ ಸಿಗದಿದ್ರೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಅಂತ ಹೇಳಿದ್ದಾರೆ.
ಇದನ್ನೂ ಓದಿ: ಯಶ್ ತೋಳಿನಲ್ಲಿ ಮಗುವಾದ ಸಿಂಡ್ರೆಲಾ ರಾಧಿಕಾ ಪಂಡಿತ್..! Cute Photo
ಒಟ್ಟಾರೆ ಜಾತಿ ಗಣತಿ ಸಮೀಕ್ಷೆಯನ್ನ ಬೇಕಾಬಿಟ್ಟಿ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ರೂ ಹಳ್ಳಿ ಜನರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸೋವಷ್ಟು ಅವರಿಗೆ ಮಾಹಿತಿ ಇದೆಯಾ ಅನ್ನೋದನ್ನ ಮರೆತಿರುವಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ