/newsfirstlive-kannada/media/post_attachments/wp-content/uploads/2025/05/Disha_Madan_NEW.jpg)
ಪ್ರತಿಷ್ಠಿತ ದೀ ಗ್ರ್ಯಾಂಡ್ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಕನ್ನಡದ ನಟಿ ಹಾಗೂ ಮಾಡೆಲ್ ಆಗಿರುವ ದಿಶಾ ಮದನ್ ಅವರು ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಇದೇ ವೇಳೆ ಕನ್ನಡಿಗರ ಬಗ್ಗೆಯೂ ಮಾತನಾಡಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಕನ್ನಡದ ಕುಲವಧು ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ದಿಶಾ ಮದನ್ ಸದ್ಯ ಲಕ್ಷ್ಮಿ ನಿವಾಸದಲ್ಲಿ ಭಾವನಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ದಿಶಾ ಮದನ್ ಮಸ್ತ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಭ್ರಮ ಮುಗಿದ ಮೇಲೆ ದಿಶಾ ಮದನ್ ಅವರು ಕನ್ನಡದಲ್ಲಿ ಮಾತನಾಡಿ, ನನ್ನ ಭಾಷೆ ಕನ್ನಡದಲ್ಲಿ ಸ್ವಲ್ಪ ಮಾತನಾಡಲು ಇಷ್ಟ ಪಡುತ್ತೇನೆ ಎಂದಿದ್ದಾರೆ.
ಕರ್ನಾಟಕದ ಜನರು ನನ್ನನ್ನು ಪ್ರೋತ್ಸಾಹಿಸಿದ್ದಕ್ಕೆ ಕನಸು ಇಂದು ನನಸು ಆಗಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ನಾನು ಧರಿಸಿರುವ ಈ ಸೀರೆ ಹಾಗೂ ರವಿಕೆಯನ್ನು ವಿಶೇಷವಾಗಿ ಡಿಸೈನ್ ಮಾಡಿದ್ದಕ್ಕಾಗಿ ಅನ್ಮೋಲ್ ಹಾಗೂ ಬಿಂದುಗೆ ತುಂಬಾ ಥ್ಯಾಂಕ್ಸ್. ಇದು 17 ವರ್ಷದ ಹಿಂದಿನ ಸೀರೆ ಆಗಿದ್ದು ಇದು ಚೆಟ್ಟಿನಾಡಿನಲ್ಲಿ ನೇಯ್ಗೆ ಮಾಡಲಾಗಿತ್ತು. ಒಳ್ಳೆಯ ಲುಕ್ ಕೊಟ್ಟಿದ್ದು ಅನ್ಮೋಲ್ ಹಾಗೂ ಬಿಂದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳದ ಯುವತಿ ಕೇಸ್; ಪ್ರೊಫೆಸರ್ ಜತೆ ಪ್ರೇಮ ವೈಫಲ್ಯ.. ಕಟ್ಟಡದಿಂದ ಹಾರಿದ್ದ ಆಕಾಂಕ್ಷ
ಮಾಡೆಲಿಂಗ್, ಧಾರಾವಾಹಿಗಳಲ್ಲಿ ನಟಿಸುತ್ತಿರುವ ದಿಶಾ ಮದನ್ ಸಿನಿಮಾದಲ್ಲೂ ಆ್ಯಕ್ಟ್ ಮಾಡಿದ್ದಾರೆ. ಫ್ರೆಂಚ್ ಬಿರಿಯಾನಿ ಎನ್ನುವ ಸಿನಿಮಾ ಹಾಗೂ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಎಂಬ ವೆಬ್ ಸಿರೀಸ್ನಲ್ಲಿ ಅಭಿನಯ ಮಾಡಿದ್ದಾರೆ. ಇನ್ಸ್ಟಾದಲ್ಲೂ ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದು ತಮಿಳುನಾಡಿನ ಚೆಟ್ಟಿನಾಡ್ ಭಾಗದಲ್ಲಿ 1950ರಲ್ಲಿ ಪ್ರಖ್ಯಾತಿ ಪಡೆದಿದ್ದ ಮದುಮಗಳ ಉಡುಗೆಯನ್ನು ಧರಿಸಿದ್ದು ಖುಷಿ ನೀಡಿತು ಎಂದು ಬರೆದುಕೊಂಡಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ