/newsfirstlive-kannada/media/post_attachments/wp-content/uploads/2024/11/DIsha-Patani-Father.jpg)
ಬಾಲಿವುಡ್​ ನಟಿ ದಿಶಾ ಪಠಾನಿ ತಂದೆ ಜಗದೀಶ್ ಸಿಂಗ್ ಪಠಾನಿಯವರಿಗೆ 25 ಲಕ್ಷ ರೂಪಾಯಿ ವಂಚಿಸಿದ್ದಾರೆ ಕಿರಾತಕರು. ನಟಿ ದಿಶಾ ಪಠಾನಿ ತಂದೆ ನಿವೃತ್ತ ಡೆಪ್ಯೂಟಿ ಎಸ್​ಪಿ. ಅವರಿಗೆ ಸರ್ಕಾರದ ಆಯೋಗಗಳಲ್ಲಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ.ಉತ್ತರ ಪ್ರದೇಶ ಬರೇಲಿ ಜಿಲ್ಲೆಯಲ್ಲಿ ಐವರಿಂದ ಜಗದೀಶ್ ಸಿಂಗ್ ಪಠಾನಿಗೆ ವಂಚನೆ ಆಗಿದೆ.
ಬರೇಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಐವರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು ಶಿವೇಂದರ ಪ್ರತಾಪ್ ಸಿಂಗ್, ದಿವಾಕರ್ ಗಾರ್ಗ್​, ಆಚಾರ್ಯ ಜಯಪ್ರಕಾಶ್ ಸೇರಿ ಒಟ್ಟು ಐವರ ವಿರುದ್ಧ ಕೇಸ್ ದಾಖಲಾಗಿದೆ. ಪರಿಚಿತ ಶಿವೇಂದ್ರ ಪ್ರತಾಪ್ ಸಿಂಗ್ ಮೂಲಕ ದಿವಾಕರ್ ಗಾರ್ಗ್ ಅವರ ಪರಿಚಯವಾಗಿದೆ. ನಮಗೆ ತುಂಬಾ ಪ್ರಭಾವಿ ರಾಜಕೀಯ ಸಂಪರ್ಕಗಳಿವೆ. ಯುಪಿ ಸರ್ಕಾರರದ ಆಯೋಗದ ಅಧ್ಯಕ್ಷ ಸ್ಥಾನ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅವರ ಮಾತನ್ನು ನಂಬಿದ ಜಗದೀಶ್ ಸಿಂಗ್ ಪಠಾನಿ, ಅವರ ಬೇಡಿಕೆಯಂತೆ 25 ಲಕ್ಷ ರೂಪಾಯಿ ನೀಡಿದ್ದಾರೆ.
ಇದನ್ನೂ ಓದಿ:ಲಾಟರಿ ಕಿಂಗ್​ ಆಫೀಸ್ ಮೇಲೆ ಜಾರಿ ನಿರ್ದೇಶನಾಲಯ ದಾಳಿ; ವಶಕ್ಕೆ ಪಡೆದಿದ್ದು ಎಷ್ಟು ಕೋಟಿ ಹಣ?
ಪ್ರಾರಂಭದಲ್ಲಿ 5 ಲಕ್ಷ ರೂಪಾಯಿ ಕ್ಯಾಶ್ ನೀಡಿದ ಜಗದೀಶ್ ನಂತರ ಬ್ಯಾಂಕ್ ಖಾತೆಯಿಂದ 20 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ. ಹಣ ಪಡೆದು ಮೂರು ತಿಂಗಳಾದರೂ ಕೂಡ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಣದ ಬಗ್ಗೆ ವಿಚಾರ ಮಾಡಿದಾಗಲೆಲ್ಲಾ ಸದ್ಯ ನಿಮ್ಮ ಕೆಲಸ ಆಗಿಲ್ಲ ಸದ್ಯದಲ್ಲಿಯೇ ಬಡ್ಡಿ ಸಮೇತ ವಾಪಸ್ ಹಣ ನೀಡುವುದಾಗಿ ಹೇಳಿದ್ದಾರೆ. ಕೊನೆಗೆ ಹಣ ವಾಪಸ್ ಕೊಡದೇ ಇದ್ದಾಗ ಜಗದೀಶ್ ಸಿಂಗ್ ಪಠಾನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಐವರ ವಿರುದ್ಧ ದೂರು ದಾಖಲಾಗಿದ್ದು. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಬರೇಲಿ ಪೊಲೀಸರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us