newsfirstkannada.com

5 ವರ್ಷ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿಗೆ ಜೀವ ಬೆದರಿಕೆ; ಎತ್ತಿ ಆಡಿಸಿದ ಹೆತ್ತವರೇ ಮುಳುವಾದರು..

Share :

Published January 29, 2024 at 6:20am

    ನವ ಜೋಡಿಗೆ ಸ್ವಂತಃ ಕುಟುಂಬದವರಿಂದಲೇ ಜೀವ ಬೆದರಿಕೆ

    ಐದು ವರ್ಷ ಪ್ರೀತಿಸಿ ಸಪ್ತಪದಿ ತುಳಿದಿದ್ದ ನಾರಾಯಣ ಮತ್ತು ಶಿಲ್ಪಾ

    ಜೀವ ಭಯದಲ್ಲಿರುವ ಜೋಡಿ ಈಗ ರಕ್ಷಣೆಗಾಗಿ ಪೊಲೀಸರ ಮೊರೆ

ಬಳ್ಳಾರಿ: ಅವರಿಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ ಐದು ವರ್ಷ ಪ್ರೀತಿಸಿದ್ರು. ಆ ಪ್ರೀತಿಗೆ ಮದುವೆ ಮುದ್ರೆ ಕೂಡ ಬಿದ್ದಿತ್ತು. ಆದ್ರೀಗ ಈ ಪ್ರೀತಿಗೆ ಜಾತಿನೂ ಅಡ್ಡ ಬಂದಿಲ್ಲ. ಧರ್ಮನೂ ಅಡ್ಡ ಬಂದಿಲ್ಲ.. ಆದ್ರೂ ಹುಡುಗಿ ಮನೆಯವರು ಮದುವೆಯನ್ನ ಒಪ್ಪಿಕೊಳ್ತಿಲ್ಲ. ಸಾಲದೇ ನವಜೋಡಿಗೆ ಬೆದರಿಕೆ ಕೂಡ ಹಾಕ್ತಿದ್ದು, ಇದೀಗ ಪ್ರೇಮಿಗಳು ಸಹಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರೀತಿ ಪ್ರೇಮಕ್ಕೆ ವಯಸ್ಸಿನ ಬೇದ ಇರಲ್ಲ.

ಪ್ರೀತಿಯಲ್ಲಿ ಸಿಹಿ ಕಹಿ ಇದ್ದೇ ಇರುತ್ತೆ. ಕೆಲವು ಪ್ರೀತಿಗಳು ಗೆಲ್ಲುತ್ತೆ. ಕೆಲವು ಪ್ರೀತಿ ಸೋಲುತ್ತೆ. ಪ್ರೀತಿಯಲ್ಲಿ ಗೆದ್ದವರೂ ಜೀವನದಲ್ಲಿ ಸೋತಿರೋದನ್ನ ನೋಡಿದ್ದೇವೆ. ಪ್ರೀತಿಯಲ್ಲಿ ಸೋತವರು ಜೀವನದಲ್ಲಿ ಗೆದ್ದಿರೋದನ್ನ ನೋಡಿದ್ದೇವೆ. ಅದ್ರಂತೆ ಈ ಜೋಡಿ ಪ್ರೀತಿಯಲ್ಲಿ ಗೆದ್ದು ಆ ಪ್ರೀತಿಗೆ ವಿವಾಹದ ಮುದ್ರೆಯನ್ನ ಒತ್ತಿತ್ತು. ಆದ್ರೀಗ ಪ್ರೀತಿಯಲ್ಲಿ ಗೆದ್ದ ನವ ಜೋಡಿಗಳಿಗೆ ನಿಜ ಜೀವನದಲ್ಲಿ ಸ್ವಂತಃ ಕುಟುಂಬದವರಿಂದಲೇ ಬೆದರಿಕೆ ಶುರುವಾಗಿದೆ.

ನನಗೆ ನೀನು. ನಿನಗೆ ನಾನು ಅಂತ ಕೈ ಕೈ ಹಿಡಿದು ಸಾಗ್ತಿರುವ ಜೋಡಿ. ಆ ಹುಡುಗನ ಹೆಸರು ನಾರಾಯಣ್,​​ ಹುಡುಗಿ ಹೆಸರು ಶಿಲ್ಪಾ. ನಾರಾಯಣ ಬಳ್ಳಾರಿಯ ಗೋನಾಳ ಗ್ರಾಮದವನಾದ್ರೆ ಶಿಲ್ಪಾ ಊಳುರು ಗ್ರಾಮದ ಹುಡುಗಿ. ಇಬ್ಬರಿಗೂ ಶಾಲೆಯಲ್ಲಿರುವಾಗಲೇ ಪ್ರೀತಿ ಮೂಡಿತ್ತು. ಐದು ವರ್ಷಗಳ ಕಾಲ ಇಬ್ಬರು ಪರಸ್ಪರ ಪ್ರೀತಿ ಮಾಡಿದ್ರು. ಅನುರಾಗದ ಅಲೆಯಲ್ಲಿ ತೇಲಾಡಿದ್ರು. ಆದ್ರೆ ಅದ್ಯಾವಾಗ ಇವರ ಪ್ರೀತಿ ವಿಚಾರ ಶಿಲ್ಪಾ ಮನೆಯಲ್ಲಿ ಗೊತ್ತಾಯ್ತೋ, ಶಿಲ್ಪಾ ಮನೆಯವರು ಹುಡುಗಿಗೆ ಹೊಡೆಯೋದು ಬಡೆಯೋದು ಮಾಡಿದ್ದಾರೆ. ಬೆಲ್ಟ್​ನಿಂದ ಹೊಡೆದು ನಾರಾಯಣ್​​ನಿಂದ ದೂರವಿರುವಂತೆ ಹೇಳಿದ್ದಾರೆ. ಆದ್ರೆ ಮನೆಯವರು ಎಷ್ಟೆ ಹಿಂಸೆ ನೀಡಿದ್ರೂ ಶಿಲ್ಪಾ ಮಾತ್ರ ನಾರಾಯಣ್​ನಿಂದ ದೂರ ಆಗೋ ಮನಸ್ಸು ಮಾಡಿಲ್ಲ. ಇದು ಹೀಗೆ ಮುಂದುವರಿದ್ರೆ ಸರಿ ಇರಲ್ಲ ಅಂತ ಕೊನೆಗೆ ನಾರಾಯಣ್ ಮತ್ತು ಶಿಲ್ಪಾ ಗಟ್ಟಿ ಧೈರ್ಯ ಮಾಡಿ ಮನೆಯಿಂದ ಓಡಿ ಬಂದು ಮದುವೆಯಾಗಿದ್ದಾರೆ. ಆದ್ರೀಗ ಮದುವೆ ವಿಚಾರ ಮನೆಯಲ್ಲಿ ಗೊತ್ತಾಗಿ ನವಜೋಡಿಗಳಿಗೆ ಹುಡುಗಿ ಮನೆಯಿಂದ ಜೀವ ಬೆದರಿಕೆ ಹಾಕ್ತಿರುವ ಆರೋಪ ಕೇಳಿ ಬಂದಿದೆ.

ಹೌದು, ನಾರಾಯಣ ಮತ್ತು ಶಿಲ್ಪಾ ಐದು ವರ್ಷ ಪ್ರೀತಿಸಿ ಸಪ್ತಪದಿ ತುಳಿದಿದ್ರು. ಪೋಷಕರ ವಿರೋಧದ ನಡುವೆ ಮನೆ ಬಿಟ್ಟು ಓಡಿ ಬಂದು ಬೇರೆ ಊರಲ್ಲಿ ಮದುವೆಯಾಗಿದ್ರು. ಇಲ್ಲಿ ಒಂದು ವಿಚಾರ ಹೇಳಲೇಬೇಕು. ಸಾಮಾನ್ಯವಾಗಿ ಪ್ರೀತಿಯಲ್ಲಿ ಅಡ್ಡ ಬರೋದೆ ಜಾತಿ ಆದ್ರೆ ಇಲ್ಲಿ ಇಬ್ಬರ ಜಾತಿ ಕೂಡ ಒಂದೇ ಇದೆ. ಆದ್ರೂ ಹುಡುಗಿ ಮನೆಯವರು ಈ ಮದುವೆಗೆ ಒಪ್ಪುತ್ತಿಲ್ಲ. ಹೀಗಾಗಿ ಮನೆಬಿಟ್ಟು ಓಡಿ ಬಂದು ಮದುವೆಯಾದ ಶಿಲ್ಪಾ ಮತ್ತು ನಾರಾಯಣ್​​ಗೆ ಹುಡುಗಿ ಮನೆಯವರು ಪ್ರಾಣ ಬೆದರಿಕೆ ಹಾಕಿ ಭಯ ಬೀಳಿಸಿದ್ದಾರೆ. ಹೀಗಾಗಿ ಶಿಲ್ಪಾ ಮತ್ತು ನಾರಾಯಣ ಸಹಾಯ ಕೋರಿ ತಮಗೆ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶಿಲ್ಪಾ ಮತ್ತು ನಾರಾಯಣ್ ಮದುವೆಗೆ ಜಾತಿಗಿಂತ ಅಡ್ಡ ಬಂದಿದ್ದು, ಆಸ್ತಿ.. ಅಸಲಿಗೆ ನಾರಾಯಣ್ ಜಿಲ್ಲಾ ಪಂಚಾಯಿತಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡ್ತಿದ್ದಾನೆ. ಇದೇ ವಿಚಾರ ಶಿಲ್ಪಾ ಮನೆಯವರಿಗೆ ಇಷ್ಟವಾಗಿಲ್ಲ. ಜಾತಿ ಒಂದೇಯಾದ್ರೂ ಮಗಳನ್ನ ಮದುವೆಯಾಗವನ್ನ ಮನೆಗೆ ಅಳಿಯನಾಗಿ ಬರೋನು ಸಿರಿವಂತನಾಗಿರಬೇಕು ಅನ್ನೋ ದುರಾಸೆ ಹುಟ್ಟಿಕೊಂಡಿದೆ. ಆದ್ರೆ ಈ ಮದುವೆಗೆ ನಾರಾಯಣ್ ಮನೆಯಲ್ಲಿ ಯಾವುದೇ ವಿರೋಧ ಇಲ್ಲ. ಶಿಲ್ಪಾ ಮನೆಯವರು ಮಾತ್ರ ಆಸ್ತಿ ಹಣ ಅಂತಸ್ತು ಅಂತ ಪ್ರೀತಿಸಿ ಮದುವೆಯಾದ ಜೋಡಿಗೆ ಇನ್ನಿಲ್ಲದ ಕಿರುಕುಳ ನೀಡ್ತಿದ್ದಾರೆ. ಜೀವ ಭಯದಲ್ಲಿರುವ ಜೋಡಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದೆ.

ಸಾಮಾನ್ಯವಾಗಿ ಪ್ರೀತಿ ವಿಚಾರದಲ್ಲಿ ಜಾತಿ ಧರ್ಮ ಅನ್ನೋದು ಬಂದಾಗ ಮನೆಯವರು ವಿರೋಧ ವ್ಯಕ್ತಪಡಿಸ್ತಾರೆ. ಆದ್ರೆ ನಾರಾಯಣ್​ಗೆ ಒಳ್ಳೆ ಉದ್ಯೋಗವೂ ಇದೆ. ಜೊತೆಗೆ ಒಂದೇ ಜಾತಿ ಬೇರೆ. ಆದ್ರೂ ಅದ್ಯಾಕೋ ಶಿಲ್ಪಾ ಮನೆಯವರಿಗೆ ನಾರಾಯಣ್ ಇಷ್ಟ ಆಗ್ತಿಲ್ಲ. ಇಷ್ಟೆಲ್ಲಾ ಆದ್ರೂ ಇವರಿಬ್ಬರೂ ಧೈರ್ಯಗೆಟ್ಟಿಲ್ಲ ಮನೆಯವರನ್ನ ವಿರೋಧ ಕಟ್ಕೊಂಡು ಮದುವೆಯಾಗಿದ್ದಾರೆ. ಆದ್ರೀಗ ನೆಮ್ಮದಿಯಾಗಿ ಸಂಸಾರ ಮಾಡೋಣ ಅಂದ್ರೆ ಶಿಲ್ಪಾ ಮನೆಯವರು ಪದೇ ಪದೇ ಪ್ರಾಣಕ್ಕೆ ಕುತ್ತು ತರೋದಾಗಿ ಬೆದರಿಕೆ ಒಡ್ತಿದ್ದಾರೆ. ಹೀಗಾಗಿ ಪ್ರೀತಿಯಲ್ಲಿ ಗೆದ್ದು ಮದುವೆಯಾದ್ರೂ ಈ ಜೋಡಿ ನೆಮ್ಮದಿಯಾಗಿ ಇರಲು ಆಗ್ತಿಲ್ಲ.

ಪ್ರತಿದಿನ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಐದು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿ ಈಗ ಜೀವ ಭಯದಲ್ಲೇ ಕಾಲ ಕಳೆಯುತ್ತಿದೆ. ನೆರವಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರೇಮಿಗಳಿಗೆ ಪೊಲೀಸರು ಸಹಾಯ ಮಾಡಬೇಕಿದೆ. ಅದೇನೆ ಇರಲಿ ಮಕ್ಕಳು ತಪ್ಪು ಮಾಡ್ದಾಗ ಅದನ್ನು ಅರ್ಥ ಮಾಡ್ಕೊಂಡು ಪೋಷಕರು ಮಕ್ಕಳ ಜೊತೆಯಾಗಿ ನಿಲ್ಬೇಕು. ಆದ್ರೆ ಮಕ್ಕಳ ಪ್ರಾಣವನ್ನೆ ತೆಗಿಯೋ ಕೆಲಸಕ್ಕೆ ಕೈ ಹಾಕಬಾರದು. ಇನ್ನಾದ್ರೂ ಹುಡುಗಿ ಮನೆಯವರು ಪ್ರೇಮಿಗಳ ಮನಸ್ಸನ್ನ ಅರ್ಥ ಮಾಡ್ಕೊಂಡು ಇಬ್ಬರು ನೆಮ್ಮದಿಯಾಗಿ ಸಂಸಾರ ಮಾಡಲು ಅನುವು ಮಾಡಿಕೊಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ವರ್ಷ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿಗೆ ಜೀವ ಬೆದರಿಕೆ; ಎತ್ತಿ ಆಡಿಸಿದ ಹೆತ್ತವರೇ ಮುಳುವಾದರು..

https://newsfirstlive.com/wp-content/uploads/2024/01/lovers-4.jpg

Load More