/newsfirstlive-kannada/media/post_attachments/wp-content/uploads/2024/07/Ishwar-Malpe.jpg)
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ ಮತ್ತು​ ಲಾರಿ ನದಿಯ ಆಳದಲ್ಲಿ ಸಿಲುಕಿದೆ. 20 ಅಡಿ ಅಳದಲ್ಲಿ ಲಾರಿ ಇದೆ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ಕರಾವಳಿಯ ಮುಗುಳು ತಜ್ಞ ಈಶ್ವರ್​ ಮಲ್ಪೆ ಮತ್ತು ಅವರ ತಂಡ ಇಂದು ಶಿರೂರಿಗೆ ಆಗಮಿಸುತ್ತಿದೆ.
ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 12 ದಿನ. ಕೇರಳ ಮೂಲದ ಲಾರಿ ಚಾಲಕ ಅರ್ಜುನ್​ ದುರಂತದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಸದ್ಯ ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆದಿದೆ. ಸದ್ಯ ಮುಳುಗು ತಜ್ಞರಿಂದ ನೀರಿನಲ್ಲಿರುವ ಲಾರಿ ಮತ್ತು ಚಾಲಕ ಅರ್ಜುನ್​ನನ್ನು ಪತ್ತೆ ಹಚ್ಚಬೇಕಿದೆ. ಅದಕ್ಕಾಗಿ ಕರಾವಳಿಯ ನುರಿತ ಮುಳುಗು ತಜ್ಞ ಈಶ್ವರ್​ ಮಲ್ಪೆಯವರ ಅನಿವಾರ್ಯತೆ ಕಾಡಿದೆ. ಜಿಲ್ಲಾಡಳಿತದ ಮನವಿ ಮೇರೆಗೆ ಈಶ್ವರ್​ ಮಲ್ಪೆ ಸ್ಥಳಕ್ಕಾಗಮಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/07/Shirur-2.jpg)
ಈಶ್ವರ್​ ಮಲ್ಪೆ ಮೂಲತಃ ಕರಾವಳಿ ಭಾಗದವರು. ಆ್ಯಂಬುಲೆನ್ಸ್​ ಚಾಲಕನಾಗಿರುವ ಈಶ್ವರ್​ ಅದೇಷ್ಟೋ ಜನರ ಜೀವ ಉಳಿಸಿದ್ದಾರೆ. ಮಾತ್ರವಲ್ಲದೆ ನದಿ ಆಳದಲ್ಲಿ ಸಿಲುಕಿದ, ನಾಪತ್ತೆಯಾದ ಮೃತದೇಹವನ್ನು ಪತ್ತೆ ಹಚ್ಚುವ ಸಾಹಸಿ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಈಶ್ವರ್​ ಮಲ್ಪೆ ಮಾಡುತ್ತಾರೆ. ಎಂತಹದೇ ಅಪಾಯಕಾರಿಯಾದರು ಆ ಸ್ಥಳದಲ್ಲಿ ಶೋಧ ನಡೆಸಿ, ಅದೆಷ್ಟೋ ಮೃತದೇಹವನ್ನು ಮೇಲೆತ್ತಿಕೊಟ್ಟಿದ್ದಾರೆ.
ಅದೇಷ್ಟೋ ಬಾರಿ ಈಶ್ವರ್​ ಮಲ್ಪೆಗೆ ಊಟದ ಸಮಯದಲ್ಲೂ ಕರೆ ಬಂದಿದ್ದಿದೆ. ಸನ್ಮಾನ ಕಾರ್ಯಕ್ರಮದಲ್ಲಿದ್ದಾಗಲೂ ಕರೆ ಬಂದ್ದಿದೆ. ಈ ವೇಳೆ ಅವರು ತಡ ಮಾಡದೆ ತುರ್ತು ಕರೆಗೆ ಓಗೊಟ್ಟು ರಕ್ಷಿಸಿದ ನೂರಾರು ಘಟನೆಗಳಿವೆ.
/newsfirstlive-kannada/media/post_attachments/wp-content/uploads/2024/07/Eshwar-Malpe.jpg)
‘‘ತಾಯಿ ಊಟ ಬಳಸುವಾಗ ಕೆಲವೊಮ್ಮೆ ಕರೆ ಬರುತ್ತದೆ. ಒಂದು ತುತ್ತು ಬಾಯಿಗೆ ಇಟ್ಟುಕೊಂಡಾಗ ತುರ್ತು ಕರೆ ಬರುತ್ತದೆ. ಆದರೆ ನಾನು ಕರೆ ಬಂದಾಗ ಊಟ ಮಾಡದೆ ಎದ್ದು ರಕ್ಷಿಸಲು ಹೋಗುತ್ತೇನೆ. ನನ್ನ ತಾಯಿ ಅದೆಷ್ಟೋ ಬಾರಿ ಊಟ ಮಾಡಿ ಹೋಗು ಎನ್ನುತ್ತಾರೆ. ಆದರೆ ನಾನು ಊಟ ಮಾಡುತ್ತಾ ಕುಳಿತರೆ ಅಪಾಯದಲ್ಲಿರುವ ವ್ಯಕ್ತಿ ಸಾವನ್ನಪ್ಪಬಹುದು. ಆತನನ್ನು ಬದುಕಿಸಿದರೆ ನನಗೆ ಪುಣ್ಯ ಬರುತ್ತದೆ ಎಂದು ಊಟ ಬಿಟ್ಟು ಹೋಗುತ್ತೇನೆ. ಊಟ ಬಿಟ್ಟು ಹೋದರೆ ಆತ ಬದುಕುತ್ತಾನೆ’’
ಈಶ್ವರ್​ ಮಲ್ಪೆ, ಮುಳುಗು ತಜ್ಞ
ಕಳೆದ ವರ್ಷ ಇದೇ ತಿಂಗಳು ಜುಲೈ 23ರಂದು ಅರಿಶಿನ ಗುಂಡಿ ಜಲಪಾತದಲ್ಲಿ ಭದ್ರಾವತಿ ಮೂಲದ ಶರತ್​ ಎಂಬಾತ ಕಾಲು ಜಾರಿ ನೀರಿಗೆ ಬೀಳುತ್ತಾನೆ. ಸೌಪರ್ಣಿಕ ನೀರಿನ ಸೆಳೆತಕ್ಕೆ ಆತ ಕೊಚ್ಚಿಕೊಂಡು ಹೋಗುತ್ತಾನೆ. ಆದರೆ ಆತನ ಮೃತದೇಹ 6 ದಿನಗಳ ಬಳಿಕ ಸಿಗುತ್ತದೆ. ರಭಸವಾಗಿ ಹರಿಯುವ ನದಿಯಲ್ಲೊಂದು ಅಡ್ಡಲಾಗಿದ್ದ ಮರದಲ್ಲಿ ಆತನ ಮೃತದೇಹ ಸಿಲುಕಿಕೊಂಡಿರುತ್ತದೆ. ಅದನ್ನು ಈಶ್ವರ್​ ಮಲ್ಪೆಯವರು ಮೇಲೆಕೆತ್ತುತ್ತಾರೆ.
ಸಮುದ್ರ ಪಾಲಾದ, ನೀರಿಗೆ ಬಿದ್ದ ಮೊಬೈಲ್​, ಬಂಗಾರ, ಡಕ್ಕೆಯ ಕೆಸರಿನ ಹೂಳಿನಲ್ಲಿ ಬಿದ್ದ ಶವವನ್ನು ಇವರು ಮೇಲೆತ್ತಿದ ಅದೆಷ್ಟೋ ಉದಾಹರಣೆಗಳಿವೆ. ಅಪಘಾತದ ಸಮಯದಲ್ಲಿ ಗಾಯಾಳುಗಳನ್ನು ಆಸ್ಪತ್ರೆ ಸೇರಿಸಿ ಜೀವ ಉಳಿಸಿದ ಅದೆಷ್ಟೋ ಘಟನೆಗಳು ಇವೆ.
ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us