ನಿಶ್ಚಿತಾರ್ಥ ಆಗಿದ್ದ ಕೊಡಗಿನ ವೀರಯೋಧ ಹುತಾತ್ಮ; ಮದುವೆಗೆ ಇನ್ನೂ 2 ತಿಂಗಳು ಬಾಕಿ ಇತ್ತು

author-image
admin
Updated On
ನಿಶ್ಚಿತಾರ್ಥ ಆಗಿದ್ದ ಕೊಡಗಿನ ವೀರಯೋಧ ಹುತಾತ್ಮ; ಮದುವೆಗೆ ಇನ್ನೂ 2 ತಿಂಗಳು ಬಾಕಿ ಇತ್ತು
Advertisment
  • ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದ ಸೈನಿಕರು
  • ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ
  • ಅಮ್ಮನ ಕರೆಗೆ ಕಣ್ಣು ಬಿಡುವ ಪ್ರಯತ್ನ ಮಾಡಿದ್ದ ಸೈನಿಕ ಇನ್ನಿಲ್ಲ..

ಕೊಡಗು: ಸೇನಾ ವಾಹನ ದುರಂತದಲ್ಲಿ ಗಾಯಗೊಂಡಿದ್ದ ಕೊಡಗಿನ ವೀರಯೋಧ ದಿವಿನ್ ಹುತಾತ್ಮರಾಗಿದ್ದಾರೆ. ಕಳೆದ ಡಿಸೆಂಬರ್ 25ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ ದೊಡ್ಡ ಪ್ರಪಾತಕ್ಕೆ ಉರುಳಿ ಬಿದ್ದಿತ್ತು. ಈ ಘಟನೆಯಲ್ಲಿ ಐವರು ಯೋಧರು ಮೃತಪಟ್ಟಿದ್ದು, ಇನ್ನೂ ಐವರು ಗಾಯಗೊಂಡಿದ್ದರು.

ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದ ಕೊಡಗಿನ ಆಲೂರು ಸಿದ್ದಾಪುರದ ಸೈನಿಕ ದಿವಿನ್ (28) ಕೊನೆಯುಸಿರೆಳೆದಿದ್ದಾರೆ. ದಿವಿನ್ ಸೇನಾ ವಾಹನದಲ್ಲಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

ಗಾಯಗೊಂಡಿದ್ದ ದಿವಿನ್ ಅವರನ್ನ ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ 5 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ದಿವಿನ್ ಅವರಿಗೆ ಚಿಕಿತ್ಸೆ ಫಲಿಸದೆ ಇಂದು ಹುತಾತ್ಮರಾಗಿದ್ದಾರೆ.

publive-image

ಎರಡು ದಿನದ ಹಿಂದೆಯಷ್ಟೇ ದಿವಿನ್ ತಾಯಿ ಜಯಾ ಅವರು ಶ್ರೀನಗರದ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅಮ್ಮನ ಕರೆಗೆ ದಿವಿನ್ ಕಣ್ಣು ಬಿಡುವ ಪ್ರಯತ್ನ ಮಾಡಿದ್ದರಂತೆ. ಆದರೆ ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನೆಲೆಯಲ್ಲಿ ದಿವಿನ್ ಚಿಕಿತ್ಸೆ ಫಲಿಸದೆ ಕಣ್ಣು ಮುಚ್ಚಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಆಘಾತಕಾರಿ ಸುದ್ದಿ; ಹುತಾತ್ಮರಾದ ಐವರಲ್ಲಿ ಮೂವರು ಕನ್ನಡಿಗರು 

ಇನ್ನೆರಡು ತಿಂಗಳಲ್ಲಿ ವಿವಾಹ ನಿಶ್ಚಯ!
ಕೊಡಗಿನ ವೀರಯೋಧ ದಿವಿನ್ ಅವರು 10 ವರ್ಷದ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ದಿವಿನ್ ಅವರಿಗೆ ನಿಶ್ಚಿತಾರ್ಥ ಕೂಡ ನೆರವೇರಿತ್ತು. 2025ರ ಫೆಬ್ರವರಿಯಲ್ಲಿ ದಿವಿನ್ ವಿವಾಹ ನಿಶ್ಚಯವಾಗಿತ್ತು. ಆದರೆ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದ ಸೈನಿಕ ಹುತಾತ್ಮರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment