/newsfirstlive-kannada/media/post_attachments/wp-content/uploads/2024/10/laxmi.jpg)
ದೀಪಾವಳಿ ಅಂದರೆ ದೀಪಗಳ ಹಬ್ಬ. ಪ್ರಪಂಚದಾದ್ಯಂತದ ಭಾರತೀಯ ಸಮುದಾಯಗಳಲ್ಲಿ ಅತ್ಯಂತ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಈ ದೀಪಾವಳಿ ಒಂದಾಗಿದೆ. ಈ ದೀಪಾವಳಿ ಹಬ್ಬದ ದಿನದಂದು ಮನೆಯ ತುಂಬೇಲ್ಲಾ ದೀಪಗಳಿಂದ ಅಲಂಕರಿಸಲಾಗುತ್ತದೆ. ರಂಗೋಲಿ ಮೇಲೆ ದೀಪಗಳನ್ನು ಇಟ್ಟು ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ದರ್ಶನ್ ಇವತ್ತೇ ಬಳ್ಳಾರಿ ಜೈಲಿನಿಂದ ರಿಲೀಸ್? ಮಧ್ಯಂತರ ಜಾಮೀನಿಗೆ 13 ಷರತ್ತುಗಳು; ಏನವು?
/newsfirstlive-kannada/media/post_attachments/wp-content/uploads/2024/10/DEEPAVALI-DECORATION.jpg)
ಆದರೆ ಸಾಕಷ್ಟು ಮಂದಿಗೆ ಈ ಐದು ದಿನ ನಡೆಯುವ ದೀಪಾವಳಿ ಹಬ್ಬ ಯಾವಾಗ ಹಬ್ಬ ಆಚರಣೆ ಮಾಡಬೇಕು? ಯಾವಾಗ ಲಕ್ಷ್ಮಿ ಪೂಜೆ ಮಾಡಬೇಕು ಅಂತ ಮನೆಗೆ ಗೃಹಿಣಿಯರು ಗೊಂದಲದಲ್ಲಿ ಇರುತ್ತಾರೆ. ಮುಖ್ಯವಾಗಿ ಧನಲಕ್ಷ್ಮಿ ಪೂಜೆ, ಬಲೀಂದ್ರ ಪೂಜೆ, ಗೋ ಪೂಜೆ ಯಾವಾಗ ಮಾಡಬೇಕು ಅನ್ನೋ ಗೊಂದಲ ಇದ್ದೇ ಇರುತ್ತೆ. ಅದಕ್ಕಾಗಿಯೇ ನ್ಯೂಸ್ ಫಸ್ಟ್​ನಲ್ಲಿ ದೈವಜ್ಞ KN ಸೋಮಯಾಜಿ ಅವರು ಇದರ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/guruji.jpg)
30ನೇ ತಾರೀಕು ಧನ ತ್ರಯೋದಶಿ ಅಂದ್ರೆ ಗ್ರಾಮೀಣ ಭಾಗದಲ್ಲಿ ನೀರು ತುಂಬುವ ಹಬ್ಬ ಆಚರಣೆ ಮಾಡಬೇಕು. 31 ಅಂದ್ರೆ ಅಭ್ಯಂಗ ಸ್ನಾನ ಅಂದ್ರೆ ನರಕ ಚತುರ್ದಶಿ ಆಚರಣೆ ಮಾಡ್ತಾರೆ. ಲಕ್ಷ್ಮಿ ಪೂಜೆ ಯಾವತ್ತೂ ಅನ್ನೋ ಗೊಂದಲ ಈ ಬಾರಿ ಇದೆ. ನರಕ ಚತುರ್ದಶಿ ದಿನವೇ ಅಮವಾಸ್ಯೆ ಬಂದ ಕಾರಣ ಲಕ್ಷ್ಮಿ ಪೂಜೆ ಗೊಂದಲ ಇತ್ತು. ದೀಪಾವಳಿಯ ಧನಲಕ್ಷ್ಮಿ ಪೂಜೆ ಯಾವಾಗ ಅನ್ನೋ ಡೌಟ್ ಇದೆ. ಅಮಾವಾಸ್ಯೆ ಯುಕ್ತ ರಾತ್ರಿ ದೀಪಾವಳಿ ಲಕ್ಷ್ಮಿ ಪೂಜೆಗೆ ಶ್ರೇಷ್ಠವಾದದ್ದು. ಧನಲಕ್ಷ್ಮಿ ಸ್ಥಾಪನೆ ಮಾಡಿ ಪೂಜೆ ಮಾಡಬೇಕಾದ್ದು ಗುರುವಾರ. ಶುಕ್ರವಾರದ ದಿವಸ ದೀಪ ಹಚ್ಚಿ ಪೂಜೆ ಆರಂಭ ಆಗುತ್ತೆ. ಶನಿವಾರದ ದಿನ ಬಲಿ ಪಾಡ್ಯಮಿ, ಗೋ ಪೂಜೆ, ಬಲೀಂದ್ರ ಪೂಜೆ ಆರಂಭ ಆಗುತ್ತದೆ. ದೇಶದ ಹಲವು ಭಾಗಗಳಲ್ಲಿ ಈ ದಿನ ಹೊಸ ವರ್ಷ ಆರಂಭ ಕೂಡ ಹೌದು. ಒಟ್ಟಾರೆ ನರಕ ಚತುರ್ದಶಿ ಲಕ್ಷ್ಮಿ ಪೂಜೆ ಎರಡು ಒಂದೇ ದಿನ ನಡೆಯಲಿದೆ.
/newsfirstlive-kannada/media/post_attachments/wp-content/uploads/2024/10/DEEPAVALI-DECORATION-4.jpg)
ದೀಪಗಳ ಆಚರಣೆ ಯಾವಾಗ?
ದೀಪಾವಳಿ ಹಬ್ಬದಂದು ಮೂಖ್ಯವಾಗಿ ದೀಪಗಳು ಇರಬೇಕಾಗುತ್ತದೆ. ಈ ದೀಪಾವಳಿ ಹಬ್ಬದಲ್ಲಿ ದೀಪಗಳನ್ನು ಶುಕ್ರವಾರ ಪ್ರಾರಂಭ ಮಾಡಬೇಕು. ಬಲಿ ಪಾಡ್ಯಮಿ, ಗೋ ಪೂಜೆ, ಬಲೀಂದ್ರ ಪೂಜೆ ಆಚರಣೆಯನ್ನು ಶನಿವಾರ ಮಾಡಲಾಗುತ್ತದೆ. ಇನ್ನೂ ಭಾನುವಾರದಂದೂ ಅಕ್ಕ ತಂಗಿಯರ ಮನೆಗೆ ಹೋಗಿ ಉಡುಗೊರೆ ಕೊಟ್ಟು ಅವರಿಂದ ಆರ್ಶಿವಾದ ಪಡೆದುಕೊಳ್ಳಬೇಕು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us