ಇದಪ್ಪಾ ಲವ್ ಸ್ಟೋರಿ ಅಂದ್ರೆ.. 50 ವರ್ಷಗಳ ಬಳಿಕ ಮತ್ತೆ ಒಂದಾದ ಡಿವೋರ್ಸ್ಡ್‌ ಕಪಲ್‌!

author-image
admin
Updated On
ಇದಪ್ಪಾ ಲವ್ ಸ್ಟೋರಿ ಅಂದ್ರೆ.. 50 ವರ್ಷಗಳ ಬಳಿಕ ಮತ್ತೆ ಒಂದಾದ ಡಿವೋರ್ಸ್ಡ್‌ ಕಪಲ್‌!
Advertisment
  • ಮೊದಲ ಲವ್ವರ್‌ ಜೊತೆಗೆ ಮತ್ತೊಮ್ಮೆ ದಾಂಪತ್ಯ ಜೀವನ
  • 1951ರಲ್ಲಿ ಲವ್ ಮಾಡಿ ಮದುವೆ ಆಗಿದ್ದವರು ದೂರ, ದೂರ
  • ಈಗ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮತ್ತೆ ಮದುವೆ ಭಾಗ್ಯ

ಬ್ರೇಕಪ್‌ ಆದ ಮೇಲೆ ಮತ್ತೆ ಲವರ್ಸ್​ ಒಂದಾಗೋದನ್ನ ನೀವು ನೋಡಿರಬಹುದು. ಆದರೆ ಮದುವೆಯಾಗಿ ಡಿವೋರ್ಸ್‌ ಪಡೆದುಕೊಂಡ ಮೇಲೆ, ಬೇರೆ ಮದುವೆ ಆಗೋರನ್ನೂ ನೀವು ನೋಡಿರಬಹುದು. ಆದ್ರೆ, ಮತ್ತೆ ಅದೇ ಕಪಲ್ ಒಂದಾದಂತಹ ಕೇಸ್​​ಗಳನ್ನ ನೀವು ನೋಡಿರೋದಕ್ಕೆ ಸಾಧ್ಯವೇ ಇರಲ್ಲ. ಇಲ್ಲೊಂದು ಅದೇ ರೀತಿ, ಅಪರೂಪದ ಘಟನೆ ನಡೆದಿದೆ.

ಒಬ್ಬರು, ಇನ್ನೊಬ್ಬರನ್ನ ನೋಡಿದ್ರೆ ಸಾಕು ಮುಖದ ಕೋಪ-ತಾಪ, ಒಂದು ಲೆಕ್ಕದಲ್ಲಿ ಪರಮ ಶತ್ರುಗಳಂತೆ ಜೀವನ ಮಾಡ್ತಿದ್ದ ಡಿವೋರ್ಸ್​ ದಂಪತಿಗಳ ಮಧ್ಯೆ, ಇಲ್ಲಿಬ್ಬರು ಡಿವೋರ್ಸ್‌ ಪಡೆದುಕೊಂಡು ನಾನೊಂದು ತೀರ, ನೀನೊಂದು ತೀರ ಅನ್ನೋ ರೀತಿ ದೂರವಾಗಿದ್ದ ದಂಪತಿಗಳು ಮತ್ತೆ ಈಗ ಒಂದಾಗಿದ್ದಾರೆ. ಡಿವೋರ್ಸ್​ ಪಡೆದು ಬರೋಬ್ಬರಿ 50 ವರ್ಷಗಳ ನಂತರ ಈಗ, ಮತ್ತೊಮ್ಮೆ ಈ ಇಬ್ಬರೂ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಅತಿ ಸುಂದರ ಮಹಾರಾಣಿ ಯಾರು ಗೊತ್ತಾ? ಇವರ ಸ್ಟೈಲ್​ನ್ನು ಐಶ್ವರ್ಯ ರೈ ಕೂಡ ಕಾಪಿ ಮಾಡಿದ್ದರು.. 

ಅಮೆರಿಕಾದ ಪೆನ್ಸಿಲ್ವೇನಿಯಾದ ಡಿವೋರ್ಸ್​ಡ್ ದಂಪತಿಗಳಿಬ್ಬರು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿವೋರ್ಸ್‌ ಪಡೆದು ದೂರ ದೂರವಾಗಿದ್ದ ಈ ದಂಪತಿಗಳು ಇದೀಗ ಒಂದಾಗಿದ್ದು, ಬರೋಬ್ಬರಿ 50 ವರ್ಷಗಳ ಬಳಿಕ, ಇಳಿ ವಯಸ್ಸಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮತ್ತೆ ಮದುವೆಯಾಗಿದ್ದಾರೆ.

publive-image

ಫೇ ಗೇಬಲ್ ಮತ್ತು ರಾಬರ್ಟ್ ವೆನ್ರಿಚ್ ಅನ್ನೋರು 1951ರಲ್ಲಿ ಆಗಿನ ಕಾಲದಲ್ಲೇ ಲವ್ ಮಾಡಿ, ಮದುವೆ ಆಗಿದ್ದರು. ಈ ದಂಪತಿಗೆ 4 ಜನ ಮಕ್ಕಳು ಕೂಡ ಇದ್ದರು. ಕೆಲ ವರ್ಷಗಳ ನಂತರ, ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಶುರುವಾಗಿತ್ತು. 1975ರಲ್ಲಿ ಇಬ್ಬರೂ ಕೋರ್ಟ್​ ಮೆಟ್ಟಿಲೇರಿ, ಡಿವೋರ್ಸ್‌ ಕೂಡ ಪಡೆದುಕೊಂಡಿದ್ದರು. ಅದಾದ್ಮೇಲೆ, ಈ ಇಬ್ಬರು ಬೇರೆ ಬೇರೆ ಮದುವೆ ಕೂಡ ಆಗ್ತಾರೆ. ಅದ್ಯಾವ ಕರ್ಮವೋ ಏನೋ, ಮದುವೆ ಮಾಡಿಕೊಂಡಿದ್ದ ಅವರವರ ಸಂಗಾತಿಗಳು ಸಾವನ್ನಪ್ಪಿದ್ದಾರೆ.

ಡಿವೋರ್ಸ್​ನಿಂದ ಬೇರೆ ಬೇರೆಯಾಗಿದ್ದ ಇವರಿಬ್ಬರ ಮಧ್ಯೆ ಮಾತ್ರ ಒಳ್ಳೇ ಸಂಬಂಧ ಇರುತ್ತೆ. ಅದರ ಜೊತೆಗೆ ಅವಾಗವಾಗ, ಕುಟುಂಬದ ಕಾರ್ಯಕ್ರಮಗಳಲ್ಲಿ ಮೀಟ್ ಕೂಡ ಆಗ್ತಿದ್ರು. ಇದೇ ಮಾತುಕತೆ, ಭೇಟಿ ಇವರಿಬ್ಬರ ಮಧ್ಯೆ ಒಂದೊಳ್ಳೆ ಸಂಬಂಧದ ಸೇತುವೆ ಕಟ್ಟಿಕೊಂಡಿತ್ತು. ಫೈನಲ್ ಆಗಿ, ಈಗ ತಮ್ಮ ಇಳಿ ವಯಸ್ಸಲ್ಲಿ ಇವರಿಬ್ಬರು ಮತ್ತೊಮ್ಮೆ ಒಂದಾಗಿದ್ದಾರೆ. ಇವ್ರಿಬ್ಬರಿಗೂ ವಯಸ್ಸು ಕೇಳಿದ್ರೇ ಶಾಕ್ ಆಗ್ತೀರಾ. ತಾತ ವೆನ್ರಿಚ್‌ ಅವರಿಗೆ 94 ವರ್ಷ ಆಗಿದ್ದು, ಅಜ್ಜಿ ಫೇ ಗೇಬಲ್ ಅವರಿಗೆ 89 ವರ್ಷ ವಯಸ್ಸಾಗಿದೆ. ಈ ಹಿರಿಯ ಡಿವೋರ್ಸ್​ಡ್ ಕಪಲ್ಸ್, ತಮ್ಮ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮತ್ತೆ, ಮದುವೆಯಾಗಿದ್ದಾರೆ.

ಇದನ್ನೂ ಓದಿ: ಶೋಭಿತಾಗೆ ಮಗನಿಗಿಂತ ಹೆಚ್ಚು ಕೇರ್ ಮಾಡಿದ ನಾಗಾರ್ಜುನ.. ವಿಡಿಯೋ ನೋಡಿದ ನೆಟ್ಟಿಗರು ಶಾಕ್‌! 

ಈ ಡಿವೋರ್ಸ್​ಡ್ ಮದುವೆ ಬಗ್ಗೆ ರಿಯಾಕ್ಟ್ ಮಾಡಿದ 94 ವರ್ಷದ ವೆನ್ರಿಚ್‌, ಆಕೆ, ನನ್ನ ಜೀವನದ ಮೊದಲ ಪ್ರೀತಿ, ಆಕೆಯನ್ನು ನಾನು ಮತ್ತೆ ಪಡೀತೀನಿ ಅಂತ ನಾನು ಎಕ್ಸ್​​ಪೆಕ್ಟ್ ಇರಲಿಲ್ಲ. ಇದೀಗ ಮತ್ತೊಮ್ಮೆ ಅವಳು ನನಗೆ ಸಿಕ್ಕಿದ್ದು ಬಹಳ ಖುಷಿಯಾಗಿದೆ. ಈ ನನ್ನ, ಜೀವನ ಪೂರ್ತಿ ನಾನು ಅವಳೊಂದಿಗೆ ಸಂತೋಷದಿಂದ ಜೀವನ ಸಾಗಿಸೋದಕ್ಕೆ ನಿರ್ಧಾರ ಮಾಡಿದ್ದೀನಿ ಅಂತ ವೆನ್ರಿಚ್ ಹೇಳಿದ್ದಾರೆ.

ಪ್ರೀತಿಯ ಸೆಳೆತ, ದಶಕಗಳ ಮೀರಿದ್ದು.. ವಯಸ್ಸಿನ ಹಂಗಿಲ್ಲದೇ ಭಿನ್ನಾಭಿಪ್ರಾಯಗಳನ್ನ ಮೆಟ್ಟಿ ನಿಂತು, ಇಳಿವಯಸ್ಸಿನಲ್ಲೂ ಹತಾಷೆಯಿಂದ ಹೊರಬಂದು, ಮತ್ತೊಮ್ಮೆ ನವ ಜೀವನಕ್ಕೆ ಕಾಲಿಟ್ಟ ಈ ದಾಂಪತ್ಯ, ಇಂದಿನ ಯುವ ಪೀಳಿಗೆಗೆ ರೋಲ್ ಮಾಡೆಲ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment