/newsfirstlive-kannada/media/post_attachments/wp-content/uploads/2024/07/divya-alru.jpg)
ಕನ್ನಡ ಸಿನಿಮಾ, ಸಾಹಿತ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ದಿವ್ಯಾ ಆಲೂರು ಅವರ ತಂದೆ ನಿಧನರಾಗಿದ್ದಾರೆ. ಪ್ರಸಿದ್ಧ ಜಾನಪದ ಹಾಡುಗಾರ, ಸಾಹಿತಿ, ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ (74) ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆಲೂರು ನಾಗಪ್ಪ ಅವರ ಮಗಳಾದ ದಿವ್ಯಾ ಆಲೂರು ಅವರು ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಅವರೇ ನೆರವೇರಿಸಿದ್ದಾರೆ. ಹಿಂದು ಧರ್ಮದಲ್ಲಿ ಗಂಡು ಮಕ್ಕಳು ಮಾತ್ರ ಈ ಕಾರ್ಯ ಮಾಡುತ್ತಾರೆ. ಆದರೆ ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಖುದ್ದು ದಿವ್ಯಾ ಅವರೇ ಮಾಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದಿವ್ಯಾ ಆಲೂರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಂತ್ಯಕ್ರಿಯೆ ಮಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದಿವ್ಯಾ ಆಲೂರು ಪೋಸ್ಟ್ ನೋಡಿದ ಜನರು ಒಬ್ಬ ತಂದೆಗೆ ಇನ್ನು ಎಂಥಹ ಮಗಳು ಸಿಗೋಕೆ ಸಾಧ್ಯ ಅಕ್ಕ. ನೀವು ನಮ್ಮ ಹೆಮ್ಮೆ. ನಿಮ್ಮ ನಿಲುವು ನಿಮ್ಮ ಧೈರ್ಯ ಅದೆಷ್ಟೋ ಹೆಣ್ಣು ಮಕ್ಕಳಿಗೆ ಇನ್ನೆಲ್ಲೋ ಬದುಕುವ ಧೈರ್ಯ ಆಗಿರಬಹುದು. ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಇನ್ನಷ್ಟು ಶಕ್ತಿ ಕೂಡಲಿ ನಿಮಗೆ ಅಕ್ಕ, ಹದಿನೈದು ವರ್ಷಗಳ ಹಿಂದೆಯೇ ನನ್ನ ಅಮ್ಮ ದೈವಾಧೀನರಾದಾಗ, ನನ್ನ ತಂದೆ ನನಗಿರೋದು ಒಬ್ಬಳೇ ಮಗಳು ಅವಳೇ ಕಾರ್ಯಗಳನ್ನು ಮಾಡಲಿ ಅನ್ನೋ ನಿರ್ಧಾರ ಮಾಡಿದ್ರು. ನಾವು ಆಗ ಇದೇ ತರನಾದ ಮಾತುಗಳನ್ನ ಕೇಳ್ಬೇಕಾಯಿತು. ಬದಲಾವಣೆ ನಿಮ್ಮಿಂದಲೇ ನಡೆಯಲಿ ನಾನು ನಮ್ಮ ಅಪ್ಪ ಅಮ್ಮಗೆ ಒಬ್ಬಳೇ ಮಗಳು ನಮ್ಮ ಅಣ್ಣ ತೀರಿ ಹೋದರು ಅಪ್ಪ ಅಮ್ಮ ಜೊತೆ ನಾನೇ ಇರುವುದು ಹಾಗಾಗಿ ಎಲ್ಲಾ ಕರ್ತವ್ಯ ನನಗೆ ಸೇರಿದ್ದು, ನಿಮ್ಮನ್ನು ನೋಡಿ ನನಗೆ ಮತ್ತಷ್ಟು ಧೈರ್ಯ ಬಂದಿದೆ, ಈ ವಿಡಿಯೋ ನಿಮ್ಮ ಹತ್ತಿರ ಇಟ್ಟಕೊಬೇಡಿ ಇದರಿಂದ ಮತ್ತಿಷ್ಟು ನೋವು ನಿಮಗೆ ಮರಿಯುದಕ್ಕೆ ಆಗುವುದಿಲ್ಲ.
ಇದನ್ನೂ ಓದಿ:ತಂದೆಯ ಅಂತಿಮ ಸಂಸ್ಕಾರ ಮಾಡಿದ ಮಗಳು.. ಕನ್ನಡದ ಖ್ಯಾತ ನಿರೂಪಕಿ ದಿವ್ಯಾ ಆಲೂರು ಭಾವುಕ ಪೋಸ್ಟ್
ಒಂದೊಳ್ಳೆ ಧೈರ್ಯದ ನೈಜ ಸಂದೇಶದ ವಿಡಿಯೋ ಇದು. ಇದರಿಂದ ನಿಮಗೆ ಮತ್ತೆ ಮತ್ತೆ ಅದೇ ನೋವು ಮರುಕಳಿಸಬಾರದು. ತಂದೆ ಕಳಕೊಂಡಾಗಿನ ನೋವು ಎಂತಹದು ಅಂತ ಅದು ತಂದೆ ಕಳಕೊಂಡವರಿಗೆ ತಿಳಿಯುವುದು ನಿಮ್ಮ ದುಃಖದಲ್ಲಿ ನಾವು ಭಾಗಿ ಓಂ ಶಾಂತಿ. ಅಪ್ಪನಿಗೆ ಇವಾಗ ಆತ್ಮಕ್ಕೆ ತೃಪ್ತಿ ಸಿಕ್ಕಿತು. ಚಿಂತೆ ಮಾಡಬೇಡ ಅಕ್ಕ. ಜೊತೆಗೆ ಇರದ ಜೀವ ಎಂದಿಗೂ ನಮ್ಮೊಂದಿಗೆ ಜೀವಂತ. ಬದಲಾವಣೆ ಜಗದ ನಿಯಮ ಖಂಡಿತ ಅವರ ಆತ್ಮಕ್ಕೆ ಮೋಕ್ಷ ಸಿಕ್ಕಿರುತ್ತೆ ಮೇಡಮ್. ಅಪ್ಪಾಜಿ ನಿಮ್ಮ ಆತ್ಮಕ್ಕೆ ಶಾಂತಿ ಮುಕ್ತಿ ಸಿಗಲಿ. ಮತ್ತೆ ಇಡೀ ಕರ್ನಾಟಕ ಜನತೆಗೆ ಹುಟ್ಟಿ ಬರಲಿ ಎಂದು ಹಾರೈಸುತ್ತೇನೆ ಅಕ್ಕ ನಾವು ಒಂದೇ ಹೊಟ್ಟೆಯಲ್ಲಿ ಹುಟ್ಟಿಲ್ಲ ಅಂದ್ರು ನಮಗೆ ಅಕ್ಕ ಅಕ್ಕನೇ ಇವತ್ತಿನವರು ತುಂಬಾ ಇಷ್ಟ ಪಡುತ್ತೇನೆ. ಮತ್ತೆ ಇಡೀ ಕರ್ನಾಟಕ ಜನತೆಗೆ ಹುಟ್ಟು ಬರಲಿ ಎಂದು ಹಾರೈಸುತ್ತೇನೆ ಐ ಮಿಸ್ ಯು ಅಪ್ಪಾಜಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ