ಜಿಯೋ ಗ್ರಾಹಕರಿಗೆ ದೀಪಾವಳಿ ಬೋನಸ್‌.. 100 GB ಫ್ರೀ ಯೋಜನೆ ಘೋಷಣೆ; ಏನಿದರ ಪ್ಲಾನ್?

author-image
admin
Updated On
ಅಂಬಾನಿ ಸಂಪತ್ತು.. ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಭಾರೀ ಹೆಚ್ಚಳ! ಆದಾಯ ಎಷ್ಟು ಲಕ್ಷ ಕೋಟಿ?
Advertisment
  • ಶೀಘ್ರದಲ್ಲೇ ತನ್ನ ಗ್ರಾಹಕರಿಗೆ 100 GB ಉಚಿತ ಕ್ಲೌಡ್ ಸ್ಟೋರೇಜ್
  • ಶೀಘ್ರದಲ್ಲೇ ಜಿಯೋ ಬ್ರೈನ್ ಆರಂಭಿಸಲು ರಿಲಯನ್ಸ್ ಸಕಲ ತಯಾರಿ
  • ಉಚಿತವಾಗಿ ಕೊಟ್ಟು ಆಮೇಲೆ ರೀಚಾರ್ಜ್ ಪ್ಲಾನ್ ಮಾಡಲಾಗುತ್ತಾ?

ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ತನ್ನ ಜಿಯೋ ಗ್ರಾಹಕರಿಗೆ ದೀಪಾವಳಿ ಬೋನಸ್‌ ಆಫರ್ ನೀಡಿದ್ದಾರೆ. ಜಿಯೋ ಗ್ರಾಹಕರಿಗೆ ಹೊಚ್ಚ ಹೊಸ ಉಡುಗೊರೆ ಕೊಡಲು ಮುಂದಾಗಿದ್ದು, ಭಾರತದ ಟೆಲಿಕಾಂ ಕ್ಷೇತ್ರದಲ್ಲೇ ಹೊಸ ಸಂಚಲನ ಸೃಷ್ಟಿಯಾಗಿದೆ.

ಇದನ್ನೂ ಓದಿ: 1 ವರ್ಷದ ಅನಿಯಮಿತ ಕರೆ, 912GB ಡೇಟಾ, ಉಚಿತ OTT ಚಂದಾದಾರಿಕೆ.. jio ಬಳಕೆದಾರರಿಗೆ ಈ ಪ್ಲಾನ್​ ಬೆಸ್ಟ್​ 

ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ಗ್ರಾಹಕರಿಗೆ 100 GB ಉಚಿತ ಕ್ಲೌಡ್ ಸ್ಟೋರೇಜ್ ಸೇವೆ ನೀಡುವುದಾಗಿ ತಿಳಿಸಿದೆ. ಕ್ಲೌಡ್ ಸ್ಟೋರೇಜ್ ಅಂದ್ರೆ ನಿಮ್ಮ ಮೊಬೈಲ್‌ನಲ್ಲಿರುವ ಫೋಟೋ, ವಿಡಿಯೋಗಳನ್ನು ಸಂಗ್ರಹಿಸುವ ವಿಧಾನ. ಮೊಬೈಲ್‌ನಲ್ಲಿ ಫೋಟೋ, ವಿಡಿಯೋಗಳ ಸಂಗ್ರಹ ಹೆಚ್ಚಾದಂತೆ ಅದರ ಸಂರಕ್ಷಣೆ ಕಷ್ಟವಾಗುತ್ತದೆ. ಹೀಗಾಗಿ ಕ್ಲೌಡ್ ಸ್ಟೋರೇಜ್ ಅನ್ನು ಬಳಸಲಾಗುತ್ತದೆ. ಕ್ಲೌಡ್ ಸ್ಟೋರೇಜ್‌ನಲ್ಲಿ ಎಷ್ಟು ಬೇಕಾದ್ರೂ ಫೋಟೋ, ವಿಡಿಯೋಗಳನ್ನು ಸಂಗ್ರಹದಲ್ಲಿಟ್ಟು ಕೊಳ್ಳಬಹುದು. ಆದರೆ ಅದಕ್ಕೂ ಇಂತಿಷ್ಟು ಹಣ ಪಾವತಿಸಬೇಕು ಅಷ್ಟೇ.

publive-image

ಸದ್ಯ ಜಿಯೋ ತನ್ನ ಗ್ರಾಹಕರಿಗಾಗಿ 100 ಜಿಬಿ ತನಕ ಉಚಿತ ಕ್ಲೌಡ್ ಸ್ಟೋರೇಜ್ ಸೇವೆ ನೀಡಲು ಮುಂದಾಗಿದೆ. ಮುಂಬೈನಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿರುವ ರಿಲಯನ್ಸ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಹಲವು ಮಹತ್ವದ ಪ್ಲಾನ್‌ಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲಿ 100 ಜಿಬಿ ತನಕ ಉಚಿತ ಕ್ಲೌಡ್ ಸ್ಟೋರೇಜ್ ಸೇವೆ ಪ್ರಮುಖವಾಗಿದೆ.

publive-image

ಈಗ ಫ್ರೀ ಕೊಟ್ಟು ಆಮೇಲೆ ವಸೂಲಿ!
ರಿಲಯನ್ಸ್‌ನ 100 GB ಉಚಿತ ಕ್ಲೌಡ್ ಸ್ಟೋರೇಜ್ ಸೇವೆ ಬಹಳಷ್ಟು ಚರ್ಚೆಗೆ ಗುರಿಯಾಗಿದೆ. ಜಿಯೋ ಸಿಮ್‌ ಕಾರ್ಡ್‌ ಅನ್ನು ಉಚಿತವಾಗಿ ಕೊಟ್ಟು ಆಮೇಲೆ ರೀಚಾರ್ಜ್ ಪ್ಲಾನ್ ಅನೌನ್ಸ್ ಮಾಡಲಾಯಿತು. ಇದು ಕೂಡ ಮೊದಲು ಉಚಿತವಾಗಿ ಕೊಟ್ಟು ಗ್ರಾಹಕರು ಹೆಚ್ಚು, ಹೆಚ್ಚು ಅವಲಂಬಿತವಾದ ಮೇಲೆ ಹಣ ವಸೂಲಿ ಮಾಡುವ ಆಫರ್ ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ.

ಜಿಯೋ ಬ್ರೈನ್ ಪ್ರಾರಂಭಿಸಲು ಸಿದ್ಧತೆ!
ರಿಲಯನ್ಸ್ ಜಿಯೋ ಸಂಸ್ಥೆಯು ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ. ಶೀಘ್ರದಲ್ಲೇ ಜಿಯೋ ಬ್ರೈನ್ ಅನ್ನೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆರಂಭಿಸಲು ರಿಲಯನ್ಸ್ ನಿರ್ಧಾರ ಮಾಡಿದೆ. ಜಿಯೋ ಸಂಪೂರ್ಣ AI ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಸೇವೆ ನೀಡೋ ತಯಾರಿ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment