newsfirstkannada.com

×

ದೀಪಾವಳಿ; ಮಾರ್ಕೆಟ್​​ನಲ್ಲಿ ಹೂವು, ಹಣ್ಣು, ತರಕಾರಿ ಭಾರೀ ದುಬಾರಿ.. ಬೆಲೆ ಕೇಳಿ ಗ್ರಾಹಕರು ಫುಲ್ ಶಾಕ್​

Share :

Published October 31, 2024 at 9:46am

Update October 31, 2024 at 9:48am

    ಜನಜಂಗುಳಿಯಿಂದ ಕಂಗೊಳಿಸುತ್ತಿರುವ ಕೆ.ಆರ್ ಮಾರ್ಕೆಟ್

    ಒಳ್ಳೆಯ ಬೆಲೆಯಲ್ಲಿ ಮಾರಾಟ ಆಗುತ್ತಿರುವ ಎಲ್ಲ ಹೂವುಗಳು

    ನವಿಲು ದೀಪ, ಪಂಚಮುಖಿ, ಲಕ್ಷ್ಮಿದೇವಿ ದೀಪಗಳು ಮಾರಾಟ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳಕಿನ ಹಬ್ಬದ ಮೆರುಗು ಭರ್ಜರಿಯಾಗಿ ನಡೆದಿದೆ. ನಗರದಲ್ಲಿರುವ ವಿವಿಧ ಮಾರುಕಟ್ಟೆಗಳಲ್ಲಿ ದೀಪಾವಳಿಯ ರಂಗು ಹೆಚ್ಚಿಸುವಂತ ಹಣತೆ, ಹೂವು, ತರಕಾರಿ, ಹಣ್ಣುಗಳು ಸೇರಿದಂತೆ ಇತರೆ ವಸ್ತುಗಳ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಈ ಹಿನ್ನೆಲೆಯಲ್ಲಿ ಕೆ.ಆರ್ ಮಾರ್ಕೆಟ್​​ಯಲ್ಲಿ ಜನವೋಜನ ಸೇರಿದ್ದಾರೆ. ಇದರ ಜೊತೆಗೆ ಮಾರ್ಕೆಟ್​​ ಸುತ್ತ ಎಲ್ಲಿ ನೋಡಿದರು ಟ್ರಾಫಿಕ್.. ಟ್ರಾಫಿಕ್.

ಯಾವುದೇ ಹಬ್ಬ ಬಂದರೂ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಫುಲ್ ಬ್ಯುಸಿ ಆಗುವುದು ಸಾಮಾನ್ಯ. ಆದರೆ ದೀಪಾವಳಿ ಹಬ್ಬಕ್ಕೆ ಉಳಿದ ಎಲ್ಲ ಹಬ್ಬಕ್ಕಿಂತ ಹೆಚ್ಚು ಜನ ದಟ್ಟಣೆ ಆಗುತ್ತದೆ. ವಸ್ತುಗಳನ್ನು ಕೊಂಡುಕೊಳ್ಳಲು ನಾನು ಮುಂದು, ನೀ ಮುಂದು ಎಂದು ಮುಗಿ ಬೀಳುತ್ತಾರೆ. ಹೀಗಾಗಿ ಮಾರ್ಕೆಟ್​​ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದು ಇದರಿಂದ ಹಲವು ಕಡೆ ಟ್ರಾಫಿಕ್​ ಉಂಟಾಗಿ ವಾಹನಗಳು ನಿಂತಲ್ಲೇ ನಿಂತಿವೆ.

ಇದನ್ನೂ ಓದಿ: ರೋಹಿತ್ ಶರ್ಮಾ ಮೇಲೆ RCB ಸೇರಿ ಈ 2 ಟೀಮ್​ಗಳ ಕಣ್ಣು.. ಮುಂಬೈನಿಂದ ಹೊರ ಬರುತ್ತಾರಾ ಹಿಟ್​​ಮ್ಯಾನ್?

ಗ್ರಾಹಕರು ಮಾರ್ಕೆಟ್​​ನಲ್ಲಿ ನವಿಲು ದೀಪ, ಪಂಚಮುಖಿ ದೀಪ, ಲಕ್ಷ್ಮಿ ದೇವಿ ದೀಪ ಸೇರಿ ಇತರೆ ಕೆಲ ವಿಧಧಲ್ಲಿರುವ ಮಣ್ಣಿನ ಹಣತೆಗಳನ್ನು ಖರೀದಿಗೆ ಮುಗಿಬೀಳುತ್ತಿದ್ದಾರೆ. ಪಟಾಕಿಗಳನ್ನು ಗ್ರಾಹಕರು ಖರೀದಿ ಮಾಡುತ್ತಿದ್ದು ರಾಕೆಟ್, ಭೂಚಕ್ರ, ಹೂ-ಕುಂಡ, ಸರ್‌ಸುರ್ ಬತ್ತಿ ಇತ್ಯಾದಿಗಳನ್ನ ತೆಗೆದುಕೊಳ್ಳುತ್ತಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳು, ತರಕಾರಿ, ದಿನಸಿಗಳು ಹೆಚ್ಚಿನ ಬೆಲೆ ಕುದುರಿಸಿಕೊಂಡಿವೆ. ನಿತ್ಯದ ಮಾರಾಟದ ಬೆಲೆಗಿಂತ ಇಂದು ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿವೆ. ಬೆಲೆ ಹೆಚ್ಚಾದರೂ ಹಬ್ಬಕ್ಕೆಂದು ಜನ ಖರೀದಿ ಮಾಡುತ್ತಿದ್ದಾರೆ. ಹೂವುಗಳು ಮಾತ್ರ ಭಾರೀ ಬೆಲೆಗೆ ಮಾರಾಟ ಆಗುತ್ತಿವೆ. ಇದರಿಂದ ಗ್ರಾಹಕರು ಫುಲ್ ಶಾಕ್ ಆಗಿದ್ದಾರೆ.

ಮಾರ್ಕೆಟ್​ನಲ್ಲಿ ಪ್ರತಿ ಕೆ.ಜಿ ಹೂವುಗಳ ಬೆಲೆ ಹೇಗಿದೆ..?

  • ಕನಕಾಂಬರ- ₹2,000
  • ಮಲ್ಲಿಗೆ- ₹1,500
  • ಗುಲಾಬಿ- ₹260
  • ಸೇವಂತಿಗೆ- ₹160
  • ಸುಗಂಧರಾಜ- ₹200
  • ಅಣಗಲು ಹೂ- ₹700
  • ಚೆಂಡೂ ಹೂ- ₹120
  • ಕಾಕಾಡ- ₹800
  • ದುಂಡು ಮಲ್ಲಿಗೆ- ₹1,500- ₹800
  • ಜೋಡಿ ಕಲಮ- ₹100

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೀಪಾವಳಿ; ಮಾರ್ಕೆಟ್​​ನಲ್ಲಿ ಹೂವು, ಹಣ್ಣು, ತರಕಾರಿ ಭಾರೀ ದುಬಾರಿ.. ಬೆಲೆ ಕೇಳಿ ಗ್ರಾಹಕರು ಫುಲ್ ಶಾಕ್​

https://newsfirstlive.com/wp-content/uploads/2024/10/KR_MARKET_1.jpg

Load More