Advertisment

ದೀಪಾವಳಿಗೆ ಊರಿಗೆ ಹೊರಟವರಿಗೆ ಆಘಾತ; ರೈಲು ಹತ್ತುವ ವೇಳೆ ಕಾಲ್ತುಳಿತ.. ಹಲವರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

author-image
AS Harshith
Updated On
ದೀಪಾವಳಿಗೆ ಊರಿಗೆ ಹೊರಟವರಿಗೆ ಆಘಾತ; ರೈಲು ಹತ್ತುವ ವೇಳೆ ಕಾಲ್ತುಳಿತ.. ಹಲವರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ
Advertisment
  • ರೈಲು ಹತ್ತಲು ಬಂದಿದ್ದ ಸಾವಿರಕ್ಕೂ ಅಧಿಕ ಪ್ರಯಾಣಿಕರು
  • ರೈಲು ಫ್ಲಾಟ್​ಫಾರಂಗೆ ಬರ್ತಿದ್ದಂತೆ ಏಕಾಏಕಿ ನುಗ್ಗಿದ ಜನ
  • ಕಾಲ್ತುಳಿತದಿಂದ 9 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಹುತೇಕರು ಊರಿಗೆ ಹೊರಟಿದ್ದಾರೆ. ಹಾಗೇನೇ ದೀಪಾವಳಿ ಹಬ್ಬ ಆಚರಿಸಲು ಊರಿಗೆ ಹೊರಟಿದ್ದ ಪ್ರಯಾಣಿಕರು ರೈಲು ಹತ್ತುವ ವೇಳೆ ಮುಂಬೈನಲ್ಲಿ ಕಾಲ್ತುಳಿತ ಸಂಭವಿಸಿವೆ. ಮುಂಬೈನ ಬಾಂದ್ರಾ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಇದು ಹಬ್ಬದ ಸಂಭ್ರಮವನ್ನು ಕಸಿದಿದೆ.

Advertisment

ದೀಪಾವಳಿ ಹಬ್ಬ ಆಚರಿಸಲು ವಿವಿಧ ರಾಜ್ಯಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿದೆ. ಉತ್ತರಪ್ರದೇಶ ಹಾಗೂ ವಿವಿಧ ರಾಜ್ಯಗಳ ಲಕ್ಷಾಂತರ ಜನ ಮುಂಬೈನಲ್ಲಿ ಬದುಕು ಕಟ್ಟಿಕೊಂಡಿದ್ದು ಇಂದು ವೀಕೆಂಡ್ ಆಗಿದ್ದರಿಂದ ಊರಿನತ್ತ ತೆರಳಲು ಸಾವಿರಾರು ಮಂದಿ ರೈಲ್ವೇ ನಿಲ್ದಾಣದಲ್ಲಿ ಸೇರಿದ್ದರು. ಸ್ಟೇಷನ್​ಗೆ ರೈಲು ಬರ್ತಿದ್ದಂತೆ ಪ್ರಯಾಣಿಕರು ಒಬ್ಬರ ಮೇಲೊಬ್ಬರು ನುಗ್ಗಿದ್ದರಿಂದ ದುರಂತ ಸಂಭವಿಸಿದೆ.

 ‘ದೀಪಾವಳಿ’ ದುರಂತ!

ಇವತ್ತು ಮುಂಜಾನೆ 5.56ರ ವೇಳೆ ಕಾಲ್ತುಳಿತ ಸಂಭವಿಸಿದೆ. ಮುಂಬೈನ ಬಾಂದ್ರಾ ರೈಲು ನಿಲ್ದಾಣದಿಂದ ಹೊರಟಿದ್ದ ಎಕ್ಸ್​ಪ್ರೆಸ್​ ಮುಂಬೈನಿಂದ ಉತ್ತರ ಪ್ರದೇಶದ ಗೋರಖ್​​ಪುರಕ್ಕೆ ತೆರಳುತ್ತಿತ್ತು. ವಾರದಲ್ಲಿ ಭಾನುವಾರ ಮಾತ್ರ ತೆರಳುವ ಗೋರಖ್​ಪುರ ರೈಲು ಇದಾಗಿದ್ದು ಕಾಲ್ತುಳಿತದಿಂದ 9 ಮಂದಿ ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇವತ್ತು ಮುಂಜಾನೆ 5.10ಕ್ಕೆ ಹೊರಡಬೇಕಿದ್ದ ರೈಲು ತಡವಾಗಿ ಬಂದಿತ್ತು ಎನ್ನಲಾಗಿದೆ. ರೈಲು ಫ್ಲಾಟ್​ಫಾರಂಗೆ ಬರ್ತಿದ್ದಂತೆ ಪ್ರಯಾಣಿಕರು ಏಕಾಏಕಿ ನುಗ್ಗಿದ್ದರಿಂದ ದುರಂತ ಸಂಭವಿಸಿದೆ. ಇವತ್ತು ಇದೇ ರೈಲು ಹತ್ತಲು ಪ್ರಯಾಣಿಕರು ರೈಲ್ವೇ ನಿಲ್ದಾಣದಲ್ಲಿ ಸೇರಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಂದನ ಉಳಿಸಿಕೊಡಿ ಎಂದು ರಸ್ತೆಯಲ್ಲಿ ತಾಯಿ ಕಣ್ಣೀರು.. ಫೋಟೋ ಕ್ಲಿಕ್ಕಿಸಿಕೊಂಡು ಸಾಗಿದ ಸವಾರರು..

Advertisment

ಕಾಲ್ತುಳಿತದ ಬಳಿಕ ಹಲವರು ಗಾಯಗೊಂಡು ಫ್ಲಾಟ್​ಫಾರಂ ಮೇಲೆ ನರಳುತ್ತಿದ್ರು. ಕೂಡಲೇ ಧಾವಿಸಿದ ರೈಲ್ವೇ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದರು. ಸ್ಥಳದಲ್ಲಿ ಬಿದ್ದಿರುವ ಚಪ್ಪಲಿಗಳು, ರಕ್ತದ ಕಲೆಗಳು ಹಾಗೂ ಸರಕು, ಸರಂಜಾಮುಗಳು ಘಟನೆಗೆ ಸಾಕ್ಷ್ಯ ಹೇಳಿವೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ಶಿವಸೇನೆ ಆಕ್ರೋಶ

ಇನ್ನು ಘಟನೆಯನ್ನು ಶಿವಸೇನೆ ಖಂಡಿಸಿದೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಸಮರ್ಥರು ರೈಲ್ವೇ ಮಂತ್ರಿಗಳಾಗಿರುವ ಕಾರಣ ಇಂತಹ ದುರಂತಗಳು ಸಂಭವಿಸುತ್ತಿವೆ ಅಂತ ಲೇವಡಿ ಮಾಡಿದ್ದಾರೆ.

ಇನ್ನು ದುರಂತ ಸಂಭವಿಸುತ್ತಲೇ ಎಚ್ಚೆತ್ತ ಬಾಂದ್ರಾ ರೈಲ್ವೇ ಆಡಳಿತ ವರ್ಗ ಪ್ರಯಾಣಿಕರಿಗೆ ಕ್ಯೂ ವ್ಯವಸ್ಥೆ ಮಾಡಿದೆ. ಸಾಲಾಗಿ ಬಂದು ರೈಲು ಹತ್ತುವಂತೆ ವ್ಯವಸ್ಥೆ ಮಾಡಿದೆ. ಅದೇನೇ ಇರಲಿ, ಇತ್ತೀಚೆಗೆ ರೈಲುಗಳು ಹಳಿ ತಪ್ಪುವುದು ಸೇರಿದಂತೆ ಅನೇಕ ದುರಂತಗಳು ಹೆಚ್ಚಾಗಿ ಸಂಭವಿಸುತ್ತಿವೆ. ದೇಶದ ಸಂಚಾರ ವ್ಯವಸ್ಥೆಯಲ್ಲಿ ರೈಲುಸೇವೆ ಸುಖಕರ ಪ್ರಯಾಣವಾಗಿದೆ. ಆದ್ರೆ ಪ್ರಯಾಣಿಕರು ರೈಲು ಸಂಚಾರವನ್ನ ಅನುಮಾನಿಸುವಂತಾಗಿದೆ. ಇಂತಹ ದುರಂತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment