13 ವರ್ಷದ ಬಾಲಕನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಆಗಿ ನೇಮಿಸಿದ ಡೋನಾಲ್ಡ್ ಟ್ರಂಪ್!

author-image
Bheemappa
Updated On
13 ವರ್ಷದ ಬಾಲಕನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಆಗಿ ನೇಮಿಸಿದ ಡೋನಾಲ್ಡ್ ಟ್ರಂಪ್!
Advertisment
  • ಅಮೆರಿಕದ ಕಾನೂನು ಜಾರಿ ಸಂಸ್ಥೆಗಳಿಗೆ ಭೇಟಿ ನೀಡಿದ್ದ ಬಾಲಕ
  • 13 ವರ್ಷದ ಬಾಲಕ ದೇವರ್ಜಯೇ ಡಿಜೆ ಡೇನಿಯಲ್​ಗೆ ಗೌರವ
  • ಅಮೆರಿಕದ ಮಿಲಿಟರಿ ಅಕಾಡೆಮಿಗೆ ಹೈಸ್ಕೂಲ್ ವಿದ್ಯಾರ್ಥಿ ನೇಮಕ

ಡೊನಾಲ್ಡ್​ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ಮೇಲೆ ಜನ ಮೆಚ್ಚುಗೆಯ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಕಂಡುಬರುತ್ತಿದೆ. ಮೊನ್ನೆ ಮೊನ್ನೆಯಷ್ಟೇ, ಉಕ್ರೇನ್ ಅಧ್ಯಕ್ಷರಿಗೆ ಯುದ್ಧ ಬೇಡ, ಬಡವರ ಪ್ರಾಣ ಹೋಗುತ್ತವೆ ಎಂದು ಬುದ್ಧಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ 13 ವರ್ಷದ ಬಾಲಕನ ಆಸೆಯಂತೆ ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ.

[caption id="attachment_113625" align="alignnone" width="800"]publive-image ದೇವರ್ಜಯೇ ಡಿಜೆ ಡೇನಿಯಲ್[/caption]

13 ವರ್ಷದ ಬಾಲಕ ದೇವರ್ಜಯೇ ಡಿಜೆ ಡೇನಿಯಲ್ ಅವರ ಕೊನೆಯ ಆಸೆಯನ್ನು ಕಾಂಗ್ರೆಸ್​ನ ಜಂಟಿ ಕಾರ್ಯಕ್ರಮದಲ್ಲಿ ಡೋನಾಲ್ಡ್ ಟ್ರಂಪ್ ಅವರು ಈಡೇರಿಸಿದ್ದಾರೆ. ತಾನು ಕೊನೆಯುಸಿರೆಳೆಯುವುದರ ಒಳಗೆ ಪೊಲೀಸ್ ಅಧಿಕಾರಿ ಆಗಬೇಕು ಎಂಬುದು ಬಾಲಕನ ಜೀವನದ ಆಸೆ ಆಗಿತ್ತು. ಹೀಗಾಗಿ ಬಾಲಕನ ಕೊನೆ ಆಸೆಯಂತೆ ಸೀಕ್ರೆಟ್ ಸರ್ವೀಸ್ ಏಜೆಂಟ್ ಆಗಿ ನೇಮಿಸಲಾಗಿದೆ.

ಬಾಲಕ ದೇವರ್ಜಯೇ ಡಿಜೆ ಡೇನಿಯಲ್​ಗೆ 2018 ರಿಂದ ಬ್ರೈನ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಇವರು ಇನ್ನು ಕೇವಲ 5 ತಿಂಗಳು ಮಾತ್ರ ಬದುಕುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಬಾಲಕನ ಆಸೆಯಂತೆ ಕಳೆದ ಆರು ವರ್ಷಗಳಿಂದ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ಈಗ ಉನ್ನತ ಗೌರವ ನೀಡಲಾಗಿದೆ.

ಇದನ್ನೂ ಓದಿ:NHM ನೇಮಕಾತಿ 2025; ಹಾಸನದ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

[caption id="attachment_113624" align="alignnone" width="800"]publive-image ಹೈಸ್ಕೂಲ್ ವಿದ್ಯಾರ್ಥಿ ಜೇಸನ್ ಹಾರ್ಟ್ಲಿ[/caption]

ಅಮೆರಿಕದ ಸೀಕ್ರೆಟ್ ಸರ್ವೀಸ್​​ನ ನಿರ್ದೇಶಕರು ಆಗಿರುವ ಸೀನ್ ಕುರಾನ್ ಅವರಿಗೆ ಬಾಲಕನನ್ನು ನೇಮಿಸುವಂತೆ ಟ್ರಂಪ್ ಅವರು ಸೂಚನೆ ಕೊಟ್ಟಿದ್ದರು. ಅದರಂತೆ ಸೀನ್ ಕುರಾನ್ ಅವರು ಬಾಲಕನನ್ನು ಸೀಕ್ರೆಟ್ ಸರ್ವೀಸ್ ಏಜೆಂಟ್ ಬ್ಯಾಡ್ಜ್ ನೀಡಿ ಗೌರವಿಸಿದ್ದಾರೆ. ಇನ್ನೂ ಹೈಸ್ಕೂಲ್ ವಿದ್ಯಾರ್ಥಿ ಜೇಸನ್ ಹಾರ್ಟ್ಲಿಯನ್ನು ಅಮೆರಿಕದ ಮಿಲಿಟರಿ ಅಕಾಡೆಮಿಯ ವೆಸ್ಟ್ ಪಾಯಿಂಟ್​ನಲ್ಲಿ ಕೆಲಸ ಮಾಡುವ ಅವಕಾಶ ನೀಡಿದರು. ತಂದೆ ಕೆಲಸ ಮುಂದುವರಿಸಲು ಮಿಲಿಟರಿ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಇನ್ನು ಮಹತ್ವದ ಹುದ್ದೆಗೆ ನೇಮಕ ಮಾಡಿದ್ದಕ್ಕಾಗಿ ಬಾಲಕ ದೇವರ್ಜಯೇ ಡಿಜೆ ಡೇನಿಯಲ್, ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment