DJ ಸೌಂಡ್‌ಗೆ ಡ್ಯಾನ್ಸ್‌ ಮಾಡುತ್ತಿದ್ದಾಗ 13 ವರ್ಷದ ಬಾಲಕ ದಾರುಣ ಸಾವು; ಆಗಿದ್ದೇನು?

author-image
admin
Updated On
DJ ಸೌಂಡ್‌ಗೆ ಡ್ಯಾನ್ಸ್‌ ಮಾಡುತ್ತಿದ್ದಾಗ 13 ವರ್ಷದ ಬಾಲಕ ದಾರುಣ ಸಾವು; ಆಗಿದ್ದೇನು?
Advertisment
  • ಡಿ.ಜೆ ಸೌಂಡ್ ಅಂದ್ರೆ ಬಹಳ ಇಷ್ಟ ಪಡುತ್ತಿದ್ದ 13 ವರ್ಷದ ಬಾಲಕನ ದುರಂತ
  • ಡಿ.ಜೆ ಸೌಂಡ್ ಕೇಳುತ್ತಿದ್ದಂತೆ ಮನೆಯಿಂದ ಹೊರಗೆ ಬಂದು ಕುಣಿಯುತ್ತಿದ್ದ
  • ಡಿಜೆ ಸೌಂಡ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ಬಾಲಕ ಸಾವು

ಭೋಪಾಲ್: ಗೌರಿ-ಗಣೇಶ ಹಬ್ಬ, ನವರಾತ್ರಿ ಹಬ್ಬ ಯಾವುದೇ ಇರಲಿ ಡಿ.ಜೆ ಸೌಂಡ್‌ ಸಖತ್ ಸದ್ದು ಮಾಡುತ್ತೆ. ಈ ಡಿ.ಜೆ ಸೌಂಡ್‌ ಅಂದ್ರೆ ಪಡ್ಡೆ ಹುಡುಗರಿಗೆ ಸಖತ್ ಇಷ್ಟ. ಹಬ್ಬದ ಖುಷಿಯಲ್ಲಿ ಡಿ.ಜೆ ಸೌಂಡ್‌ಗೆ ಡ್ಯಾನ್ಸ್ ಮಾಡೋದೇ ಡಬಲ್ ಖುಷಿ. ಡಿ.ಜೆ ಸೌಂಡ್ ಜೋಶ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಮಧ್ಯಪ್ರದೇಶದಲ್ಲಿ ದುರಂತವೊಂದು ನಡೆದಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ 13 ವರ್ಷದ ಬಾಲಕ ಡಿ.ಜೆ ಸೌಂಡ್‌ಗೆ ಡ್ಯಾನ್ಸ್‌ ಮಾಡುತ್ತಲೇ ಪ್ರಾಣ ಬಿಟ್ಟಿದ್ದಾನೆ. ಸಮರ್ ಬಿಲ್ಲೋರ್ ನತದೃಷ್ಟ ಬಾಲಕ ಎನ್ನಲಾಗಿದೆ. ಸಮರ್‌ಗೆ ಡಿ.ಜೆ ಸೌಂಡ್ ಅಂದ್ರೆ ಬಹಳ ಇಷ್ಟ. ಡಿ.ಜೆ ಸೌಂಡ್‌ ಎಲ್ಲೇ ಕೇಳಿದ್ರು ಹೋಗಿ ಡ್ಯಾನ್ಸ್ ಮಾಡುತ್ತಿದ್ದ.

ಇದನ್ನೂ ಓದಿ: VIDEO: ಜೋಗಿ ಅಮ್ಮನನ್ನೂ ಮೀರಿಸುವ ಹಾರ್ಟ್​​ ಟಚ್ಚಿಂಗ್ ಸ್ಟೋರಿ ಇದು; ಕರುಳು ಚುರ್ ಅನ್ನುತ್ತೆ! 

ಇತ್ತೀಚೆಗೆ ಸಮೀರ್ ಊರಿನಲ್ಲಿ ಹಬ್ಬ ಆಚರಿಸಲಾಗುತ್ತಿತ್ತು. ಈ ವೇಳೆ ಮನೆಯ ಬಳಿ ಡಿ.ಜೆ ಸೌಂಡ್‌ ಕೇಳಿಸಿದೆ. ಮನೆಯಿಂದ ಹೊರಗೆ ಹೋದ ಸಮೀರ್, ಡಿಜೆ ಸೌಂಡ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಗುಂಪಿನಲ್ಲಿ ಸೇರಿಕೊಂಡಿದ್ದಾನೆ.
13 ವರ್ಷದ ಸಮೀರ್ ಡಿ.ಜೆ ಸೌಂಡ್‌ಗೆ ಡ್ಯಾನ್ಸ್ ಮಾಡುವಾಗ ಅಸ್ವಸ್ಥರಾಗಿದ್ದಾರೆ. ಸಮೀರ್ ತಾಯಿ ಜಮುನಾ ದೇವಿ ಮಗನ ಸ್ಥಿತಿ ನೋಡಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಸಮೀರ್‌ಗೆ ಮೊದಲೇ ಆರೋಗ್ಯ ಸಮಸ್ಯೆ ಇತ್ತು. ಆದರೆ ಡಿ.ಜೆ ಸೌಂಡ್‌ನ ಭಯಾನಕ ಶಬ್ಧ ಅವನ ಹೃದಯಕ್ಕೆ ಘಾಸಿಯನ್ನು ಉಂಟು ಮಾಡಿದೆ. ಜೋರಾದ ಶಬ್ಧ ಕೇಳುತ್ತಿದ್ದ ಸಮೀರ್‌ಗೆ ಹೃದಯ ವೈಫಲ್ಯವಾಗಿದೆ. ವೈದ್ಯರು ಸಮೀರ್ ಡಿ.ಜೆ ಸೌಂಡ್‌ನಿಂದಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment