ಜಾರಕಿಹೊಳಿ ಖರ್ಗೆ ಭೇಟಿ ಬೆನ್ನಲ್ಲೇ ಡಿಕೆ ಬ್ರದರ್ಸ್ ಅಲರ್ಟ್​​; ಕಾಂಗ್ರೆಸ್​ನಲ್ಲಿ ಕುತೂಹಲ ಮೂಡಿಸಿದ ನಾಯಕರ ನಡೆ

author-image
Ganesh
Updated On
ಕೆಪಿಸಿಸಿ ಅಧ್ಯಕ್ಷ ಗಾದಿ ರೇಸ್​ಗೆ ಮತ್ತೊಬ್ಬ ನಾಯಕನ ಎಂಟ್ರಿ; ಡಿಕೆ ಬ್ರದರ್ಸ್ ದೆಹಲಿ ಭೇಟಿ ಭಾರೀ ಕುತೂಹಲ..!
Advertisment
  • ಹೈಕಮಾಂಡ್ ನಾಯಕರ ಭೇಟಿಗೆ ಡಿಕೆ ಬ್ರದರ್ಸ್ ತಯಾರಿ
  • ದಸರಾ ಬಳಿಕ ಸಮಯ ಕೇಳಿರುವ ಡಿ.ಕೆ. ಸುರೇಶ್
  • ನಮಗೂ ಭೇಟಿಗೆ ಮುಕ್ತ ಅವಕಾಶ ಇದೆ ಎಂಬ ಸಂದೇಶ

ಬೆಂಗಳೂರು: ಸತೀಶ್ ಜಾರಕಿಹೊಳಿ ಬೆನ್ನಲ್ಲೇ ಡಿಕೆ ಸೋದರರು ದೆಹಲಿಗೆ ಹೋಗಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ದಸರಾ ಮುಗಿದ ಬಳಿಕ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಲು ಮುಂದಾಗಿದ್ದಾರಂತೆ.

ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಬಂದಿದ್ದರು. ಜಾರಕಿಹೊಳಿ, ಖರ್ಗೆ ಭೇಟಿ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಬೆನ್ನಲ್ಲೇ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್​ ದೆಹಲಿ ನಾಯಕರ ಭೇಟಿಗೆ ನಿರ್ಧರಿಸಿರೋದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ದಲಿತ ಸಿಎಂ ದಾಳ.. ದಿಢೀರ್ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ; ಏನಿದರ ರಹಸ್ಯ?

publive-image

ಡಿಕೆ ಸೋದರರ ತಂತ್ರ

ತಂತ್ರ 01: ದೆಹಲಿಗೆ ಹೋಗಿ ಕಾಂಗ್ರೆಸ್​ನ ವರಿಷ್ಠ ನಾಯಕರನ್ನ ಭೇಟಿ ಮಾಡೋದು
ತಂತ್ರ 02: ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಒಟ್ಟಿಗೆ ಹೋಗಿ ಭೇಟಿ ಮಾಡಿ ಚರ್ಚೆ
ತಂತ್ರ 03: ನಮಗೂ ವರಿಷ್ಠರ ಬೆಂಬಲವಿದೆ, ಭೇಟಿಗೆ ಮುಕ್ತ ಅವಕಾಶವೆಂಬ ಸಂದೇಶ
ತಂತ್ರ 04: ನಾವು ಕೇಳಿದರೂ ಸಮಯ ಕೊಡ್ತಾರೆ ಅಂತ ಮತ್ತೊಂದು ಬಣಕ್ಕೆ ಕೌಂಟರ್
ತಂತ್ರ 05: ರಾಜ್ಯದ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ನಾಯಕರಿಗೆ ಮಾಹಿತಿ ಕೊಡುವುದು
ತಂತ್ರ 06: ರಾಜ್ಯದ ಇತರೆ ನಾಯಕರೂ ಹೋಗಿ ಭೇಟಿ ಆಗೋ ಮುನ್ನ ಡಿಕೆ ಬ್ರದರ್ಸ್ ಅಲರ್ಟ್

ಇದನ್ನೂ ಓದಿ:ರೆಬಲ್ ಆಗ್ತಾರಾ ಬೆಳಗಾವಿ ನಾಯಕ? HDK, ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ; ಏನಿದರ ಗುಟ್ಟು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment