/newsfirstlive-kannada/media/post_attachments/wp-content/uploads/2024/08/kulla-sena.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಸೇರಿ ಒಟ್ಟು 17 ಆರೋಪಿಗಳು ಜೈಲು ಸೇರಿದ್ದಾರೆ. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ ಅವರ ಕೆಲವೊಂದು ಫೋಟೋಗಳು ವೈರಲ್ ಆಗುತ್ತಿದ್ದಂತೆ ರಾಜ್ಯದಲ್ಲಿ ದೊಡ್ಡ ಸಂಚಲನ ಎಬ್ಬಿಸಿದೆ.
/newsfirstlive-kannada/media/post_attachments/wp-content/uploads/2024/08/kulla-sena1.jpg)
ಜೈಲಿನ ಆವರಣದಲ್ಲಿ ಟೀ ಕುಡಿದುಕೊಂಡು, ಸಿಗರೇಟ್ ಸೇದುತ್ತಾ ನಟ ದರ್ಶನ್​ ಜೊತೆಗೆ ನಾಗರಾಜ್, ವಿಲ್ಸನ್ ಗಾರ್ಡನ್ ನಾಗ ಹಾಗೂ ಕುಳ್ಳ ಸೀನಾ ಕುಳಿತುಕೊಂಡಿರೋ ಫೋಟೋಸ್​ ಸಖತ್​ ಹಲ್​ಚಲ್​ ಸೃಷ್ಟಿಸಿದ್ದವರು. ಆರೋಪಿಗಳ ರಾಜಾತಿಥ್ಯಕ್ಕೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಆದರೆ ದರ್ಶನ್ ಜೊತೆಗೆ ಕೂತು ಚಹಾ ಸವಿತಿದ್ದ ರೌಡಿ ಶೀಟರ್ ಕುಳ್ಳ ಶ್ರೀನಿವಾಸ್​ನಿಗೆ ಡಿಸಿಎಂ ಡಿಕೆ ಶಿವಕುಮಾರ್​ ಅವರು ಸನ್ಮಾನ ಮಾಡಿರೋ ವಿಡಿಯೋ ವೈರಲ್ ಆಗ್ತಾ ಇದೆ. ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನ. ಸುಬ್ರಮಣ್ಯಪುರದ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದಲ್ಲಿ ಈತ ಜೈಲು ಸೇರಿರುವ ಖೈದಿಯಾಗಿದ್ದಾನೆ.
/newsfirstlive-kannada/media/post_attachments/wp-content/uploads/2024/08/darshan-2.jpg)
ಹಲವು ವರ್ಷಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್​ ಜೊತೆಗೆ ಕುಳ್ಳ ಶ್ರೀನಿವಾಸ್ ವೇದಿಕೆ ಹಂಚಿಕೊಂಡಿದ್ದಾರೆ. ಇವರ ಜೊತೆಗೆ ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಕೂಡ ಭಾಗಿಯಾಗಿದ್ದರು. ಡಿಕೆ ಶಿವಕುಮಾರ್​ ಅವರ ಕೈಯಿಂದಲೇ ರೌಡಿಶೀಟರ್ ಸನ್ಮಾನ ಮಾಡಿಸಿಕೊಂಡಿದ್ದ. ಹಳೆಯ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಸಮಾಜ ಸೇವಕನ ಮುಖವಾಡ ಹಾಕಿಕೊಂಡಿದ್ದ ಶ್ರೀನಿವಾಸ್ ಸದ್ಯ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಸದ್ಯ ಇದೇ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us