newsfirstkannada.com

ಆ ಸಂದರ್ಭದಲ್ಲಿ ನಾನು ಸಹಾಯ ಮಾಡಿದ್ರೆ ಮನೆದೇವರು ನನಗೆ ಶಿಕ್ಷೆ ನೀಡಲಿ -ಶಿವಕುಮಾರ್ ಹೀಗ್ಯಾಕೆ ಹೇಳಿದರು?

Share :

Published March 21, 2024 at 9:57am

  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಂಗೇರಿದ ವಾಕ್ಸಮರ

  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಶಿವಕುಮಾರ್ ಟಾಂಗ್

  ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಮಾಡಿದ್ದ ಆರೋಪ ಏನು?

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ನನಗೆ ವಿಷ ಹಾಕಿದ್ದಾರೆ. ನನ್ನನ್ನ ಮುಗಿಸಲು ಯತ್ನಿಸಿದ್ದರು. ಆದರೆ ಅದು ಆಗಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ನಿನ್ನೆ ಕೌಂಟರ್ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ನಾನ್ಯಾರಿಗೂ ವಿಷ ಹಾಕಿಲ್ಲ. ಮೈತ್ರಿ ಸರ್ಕಾರದಲ್ಲಿ ಸರ್ಕಾರ ಉರುಳಿಸಲು ನಾನು ಸಹಾಯ ಮಾಡಿದ್ರೆ ನನ್ನ ಮನೆದೇವರು ನನಗೆ ಶಿಕ್ಷೆ ನೀಡಲಿ ಅನ್ನೋ ಮೂಲಕ ಟಾಂಗ್ ನೀಡಿದ್ದಾರೆ.

ಕುಮಾರಸ್ವಾಮಿ ಏನ್ ಹೇಳಿದ್ದರು..?
ರಾಜಕೀಯವಾಗಿ ನಮಗೆ ವಿಷ ಹಾಕಿಕೊಂಡಿದ್ದೀರಿ. ಹಂತ ಹಂತವಾಗಿ ನಮ್ಮ ಶಾಸಕರನ್ನ ಸೆಳೆಯಲು ಏನೆಲ್ಲ ಮಾಡಿದ್ದೀರಿ. ಇದನ್ನೆಲ್ಲ ಮರೆಯಲಿಕ್ಕೆ ಆಗುತ್ತಾ ಡಿ.ಕೆ.ಶಿವಕುಮಾರ್? ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಸರ್ಕಾರ ಉಳಿಸಲು ಪ್ರಯತ್ನಪಟ್ಟಿಲ್ಲ. ನಮ್ಮ ಜೊತೆನೇ ಇದ್ದು ನಮ್ಮ ಜೆಡಿಎಸ್ ಶಾಸಕರನ್ನ ಸೆಳೆಯಲು ಏನೆಲ್ಲಾ ಪ್ರಯತ್ನ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ಸಂದರ್ಭದಲ್ಲಿ ನಾನು ಸಹಾಯ ಮಾಡಿದ್ರೆ ಮನೆದೇವರು ನನಗೆ ಶಿಕ್ಷೆ ನೀಡಲಿ -ಶಿವಕುಮಾರ್ ಹೀಗ್ಯಾಕೆ ಹೇಳಿದರು?

https://newsfirstlive.com/wp-content/uploads/2024/03/Dkshivakumar-ED-Case.jpg

Load More