/newsfirstlive-kannada/media/post_attachments/wp-content/uploads/2025/03/DKS-DHRUVA-6.jpg)
ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಸಿಎಂ ಆಗಬೇಕು ಅನ್ನೋದು ಅವರ ಕುಟುಂಬಸ್ಥರು, ಅಭಿಮಾನಿಗಳ ಕನಸು. ಸ್ವತಃ ಡಿಕೆಶಿ ಕೂಡ ಮುಖ್ಯಮಂತ್ರಿ ಕುರ್ಚಿಗೇರಲು ಎಲ್ಲಾ ಕಸರತ್ತು ನಡೆಸ್ತಿದ್ದಾರೆ. ಈ ಮಧ್ಯೆ ಆ್ಯಕ್ಷನ್ ಪ್ರಿನ್ಸ್, ನಟ ಧ್ರುವ ಸರ್ಜಾ ಕೂಡ ಮುಂದಿನ ಸಿಎಂ ಡಿಕೆಶಿ ಅಂತ ಹೇಳುವ ಮೂಲಕ ಭಾರಿ ಕುತೂಹಲ ಮೂಡಿಸಿದ್ದಾರೆ.
ಆ್ಯಕ್ಷನ್ ಪ್ರಿನ್ಸ್​​ ಅಚ್ಚರಿ!
ಧ್ರುವ ಸರ್ಜಾ ಕೂಡ ಡಿ.ಕೆ ಶಿವಕುಮಾರ್‌ನ ಫ್ಯೂಚರ್ ಸಿಎಂ ಅಂತ ಕರೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಡಿಸಿಎಂ ಡಿಕೆಶಿ ಮಾಲೀಕತ್ವದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾರ್ಯಕ್ರಮದಲ್ಲಿ ಸ್ಪೆಷಲ್ ಗೆಸ್ಟ್ ಆಗಿ ಭಾಗಿಯಾಗಿದ್ದ ನಟ ಧ್ರುವ ಸರ್ಜಾ.. ವೇದಿಕೆ ಉದ್ದೇಶಿಸಿ ಮಾತನಾಡುವ ವೇಳೆ ನಾನು ಯಾರ ಬಗ್ಗೆ ಮಾತಾಡ್ತಿದ್ದೀನಿ ಗೊತ್ತಾ.. ನಾನು ಫ್ಯೂಚರ್ ಸಿಎಂ ಬಗ್ಗೆ ಮಾತನಾಡ್ತಾ ಇದ್ದೀನಿ ಎಂದ ಧ್ರುವ ಡಿಕೆಶಿಯನ್ನು ಹೊಗಳುವ ವೇಳೆ ಪರೋಕ್ಷ ಹಿಂಟ್ಸ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ಹೇಳಿಕೆಗೆ ಚಪ್ಪಾಳೆ ಹೊಡೆದ ವಿದ್ಯಾರ್ಥಿಗಳು ಕೇಕೆ ಹಾಕಿದ್ದಾರೆ.
ಏನಂದ್ರು ಧ್ರುವ..?
ಟೈಂ ಮ್ಯಾನೇಜ್ಮೆಂಟ್ ಅಂತಾ ಮಾತೋಡದ್ಕಿಂತ ಮುಂಚೆ ನಾನು ಅಣ್ಣನ ಕೇಳುತ್ತಿದ್ದೆ. ಅಣ್ಣಾ ಎಷ್ಟು ಗಂಟೆಗೆ ಮಲಗುತ್ತೀರಾ? ಎಷ್ಟು ಗಂಟೆಗೆ ಎದ್ದೇಳ್ತೀರಾ ಎಂದು. ಪಾಪ ಅವರು, ತಮ್ಮ ಬ್ಯುಸಿ ಶೆಡ್ಯೂಲ್ ಹೇಳಿದರು. ರಾತ್ರಿ 2.30 ಮಲಗಿಕೊಂಡು ಬೆಳಗ್ಗೆ 6.30ಗೆ ಎದ್ದೆ ಅಂದ್ರು. ಈ ಸ್ಥಾನಕ್ಕೆ ಬರೋದಕ್ಕೆ ಇದೇ ರೀತಿ ಎಷ್ಟೋ ವರ್ಷದಿಂದ ಮಾಡುತ್ತಿರುತ್ತಾರೆ. ನಾನು ಯಾರು ಬಗ್ಗೆ ಮಾತನಾಡುತ್ತಿದ್ದೇನೆ ಗೊತ್ತಾಯ್ತಾ..? ಏ ನಮ್ಮ ಫ್ಯೂಚರ್ ಸಿಎಂ ಬಗ್ಗೆ ಮಾತಾಡ್ತಾ ಇದ್ದೀನಪ್ಪ-ಧ್ರುವ ಸರ್ಜಾ, ನಟ
24ನೇ ವಿಟಿಯು ಯುವಜನೋತ್ಸವ, ಸಂವಹನ 2025, ಬ್ರ್ಯಾಂಡ್ ಕರ್ನಾಟಕ ವಿಷಯಾಧಾರಿತ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರದರ್ಶನ ಹಾಗೂ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.. ಕಾರ್ಯಕ್ರಮದಲ್ಲಿ ಡಿಕೆಶಿ ಪುತ್ರಿ ಶ್ರೀಮತಿ ಐಶ್ವರ್ಯಾ, ಉಷಾ ಡಿಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
ಒಟ್ಟಾರೆ, ನಾನು ಮುಂದಿನ ಸಿಎಂ ಆಗ್ಬೇಕು ಅಂತ ಕನವರಿಸ್ತಿರೋ ಡಿಕೆಶಿಗೆ ಫ್ಯೂಚರ್ ಸಿಎಂ ಎನ್ನುವ ಮೂಲಕ ನಟ ಧ್ರುವ ಸರ್ಜಾ ಕೂಡ ಬೆಂಬಲ ನೀಡಿರೋದು ಡಿಕೆಶಿ ಉತ್ಸಾಹ ಇಮ್ಮಡಿಸಿದಂತಾಗಿದೆ.
ಇದನ್ನೂ ಓದಿ: ನಂದಿನಿ ಹಾಲು ಮತ್ತಷ್ಟು ದುಬಾರಿ..! ನಿನ್ನೆಯ ಸಭೆಯಲ್ಲಿ ಎಷ್ಟು ರೂಪಾಯಿ ಏರಿಕೆಗೆ ನಿರ್ಧಾರ ಆಗಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ