Advertisment

ಡಿನ್ನರ್ ಪಾರ್ಟಿ ಮೂಲಕ ರಣತಂತ್ರ ಹೆಣೆದ DK ಶಿವಕುಮಾರ್.. ಸಚಿವರಿಗೆ ಸಿದ್ದರಾಮಯ್ಯ ಕ್ಲಾಸ್..!

author-image
Ganesh
Updated On
New Airport: ನೆಲಮಂಗಲದಲ್ಲಿ ಹೊಸ ವಿಮಾನ ನಿಲ್ದಾಣ  ಬಹುತೇಕ ಅಂತಿಮ; 10 ಲಾಭಗಳು ಇಲ್ಲಿವೆ!
Advertisment
  • ಶಿವಕುಮಾರ್ ಡಿನ್ನರ್ ಪಾರ್ಟಿಯ ಮೆನು ಹೇಗಿತ್ತು ಗೊತ್ತಾ?
  • ಡಿಕೆ ಸುರೇಶ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಏನೆಲ್ಲ ಚರ್ಚೆ ಆಗಿದೆ..?
  • ತಮ್ಮ ಸಚಿವರಿಗೆ ಸಿದ್ದರಾಮಯ್ಯ ನೀಡಿದ ಸಲಹೆಗಳು ಏನೇನು?

ಸರ್ಕಾರ ಒಂದು ವರ್ಷ ಪೂರೈಸಿದ ಸಂಭ್ರಮದ ಭಾಗವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಸಚಿವರಿಗೆ ಔತಣಕೂಟ ಆಯೋಜಿಸಿದ್ರು. ಸಿಎಂ ಸೇರಿದಂತೆ ಬಹುತೇಕ ಎಲ್ಲ ಮಂತ್ರಿಗಳು ಭಾಗಿಯಾಗಿದ್ದ ಈ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.

Advertisment

ಡಿನ್ನರ್ ಮೀಟಿಂಗ್​ನಲ್ಲಿ ಏನೆಲ್ಲಾ ಚರ್ಚೆ?

ಡಿನ್ನರ್ ಮೀಟಿಂಗ್​ನಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಯಾವ್ಯಾವ ಕ್ಷೇತ್ರದಲ್ಲಿ ಫಲಿತಾಂಶ ಏನಾಗಬಹುದು ಎಂಬುದನ್ನು ಅಂಕಿ, ಅಂಶಗಳೊಂದಿಗೆ ಸಚಿವರೊಂದಿಗೆ ಸಿಎಂ ಚರ್ಚಿಸಿದ್ರು. ಕಾವೇರಿ ನ್ಯಾಯಾಧಿಕರಣ ಆದೇಶ ಕುರಿತು ಸಚಿವರ ಜೊತೆ ಸಿಎಂ ಚರ್ಚೆ ನಡೆಸಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಸಂಬಂಧ ನೀಡಿರುವ ಆದೇಶದ ಕುರಿತು ಮಂಥನ ನಡೆದಿದೆ. ಇದೇ ವೇಳೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಬಿಬಿಎಂಪಿ ಚುನಾವಣೆ ಬಗ್ಗೆಯೂ ಸಮಾಲೋಚನೆ ನಡೆಸಲಾಯ್ತು. ಇನ್ನು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಅಂತಾ ಬಿಜೆಪಿ, ಜೆಡಿಎಸ್ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿವೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾಗುತ್ತೆ ಎಂದು ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಕಿವಿಮಾತು ಹೇಳಿದರು. ಹಲವು ವಿಚಾರಗಳ ಚರ್ಚೆಯ ಜೊತೆಗೆ ಒಂದಷ್ಟು ಸಲಹೆಗಳನ್ನೂ ಸಚಿವರಿಗೆ ಸಿಎಂ ನೀಡಿದ್ದಾರೆ. ವಿಪಕ್ಷಗಳ ಅಪಪ್ರಚಾರಕ್ಕೆ ತಿರುಗೇಟು ನೀಡಲು ಸೂಚನೆ ಕೊಟ್ಟಿದ್ದಾರೆ.

publive-image

ಸಚಿವರಿಗೆ ಸಿಎಂ ಸಿದ್ದು ಪಾಠ

  1. ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ರಾಜ್ಯ ಪ್ರವಾಸ ಮಾಡಿ
  2. ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನೆ, ಆಡಳಿತಕ್ಕೆ ಚುರುಕು ಮುಟ್ಟಿಸಿ
  3. ಮುಂಗಾರು ಆರಂಭ, ಬೆಂಗಳೂರು ಸೇರಿ ಎಲ್ಲಕಡೆ ಮುನ್ನೆಚ್ಚರಿಕೆ ವಹಿಸಿ
  4. ಈಗಿನಿಂದಲೇ ಜನರ ಸಮಸ್ಯೆಗಳತ್ತ ಗಮನಹರಿಸಿ ಕೆಲಸ ಮಾಡಬೇಕು
  5. ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು, ವಿತರಣೆಗೆ ಗಮನಕೊಡಿ
  6. ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕಿದೆ
  7. ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನ ಪ್ರತಿಯೊಬ್ರೂ ನಿಭಾಯಿಸಬೇಕು
  8. ವಿಪಕ್ಷಗಳಿಂದ ಸರ್ಕಾರಕ್ಕೆ ಮಸಿ‌ ಬಳಿಯೋ ಕೆಲಸಕ್ಕೆ ತಿರುಗೇಟು ನೀಡಿ

ಔತಣಕೂಟದಲ್ಲಿ ಭರ್ಜರಿ ಭೋಜನವೂ ಇತ್ತು. ನಾನ್​ವೆಜ್ ಹಾಗೂ ವೆಜ್ ಎರಡರ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನಾನ್​ ವೆಜ್ ತಿನ್ನೋರಿಗಾಗಿ ಚಿಕನ್ ಘೀ ರೋಸ್ಟ್, ಚಿಕನ್ ಕಬಾಬ್, ಪ್ರಾನ್ಸ್ ಸುಕ್ಕಾ, ಮಟನ್ ಕೈಮ ಗೊಜ್ಜು ಮಾಡಲಾಗಿತ್ತು. ಮುಳಬಾಗಿಲು ದೋಸೆ, ಮಲ್ಲಿಗೆ ಇಡ್ಲಿ ಹಾಗೂ ಅದರ ಜೊತೆಗೆ ಚಿಕನ್ ಘಸಿ ಇತ್ತು. ರಾಗಿ ಮುದ್ದೆಯೂ ಔತಣ ಕೂಟದಲ್ಲಿ ಲಭ್ಯವಿತ್ತು. ಇದಲ್ಲದೇ ಮಟನ್ ಚಾಪ್ಸ್, ಮಟನ್ ಬಿರಿಯಾನಿ, ವೈಟ್ ರೈಸ್ ಹಾಗೂ ಅಲ್ಲಿದ್ದ ಮಟನ್ ಸಾಂಬರ್​ನ್ನ ಸಚಿವರು ಸವಿದರು.

Advertisment

ಇದನ್ನೂ ಓದಿ:ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲ್ಸಕ್ಕೆ ಹೋಗೋ ಪೋಷಕರೇ ಇರಲಿ ಎಚ್ಚರ.. ಇಲ್ಲಿ 5 ವರ್ಷದ ಮಗು ಸಾವನ್ನಪ್ಪಿದೆ..

publive-image

ವೆಜ್ ಮೆನು ಏನು?
ವೆಜ್ ತಿನ್ನೋರಿಗಾಗಿ ಪನ್ನೀರ್ ಘೀ ರೋಸ್ಟ್, ಮಶ್ರೂಮ್ ಪೆಪ್ಪರ್, ಮುಳಬಾಗಿಲು ದೋಸೆ ಅದಕ್ಕೆ ಚಟ್ನಿ, ಮಲ್ಲಿಗೆ ಇಡ್ಲಿ ಹಾಗೂ ಸಾಂಬರ್ ಮಾಡಲಾಗಿತ್ತು. ವೆಜಿಟೇಬಲ್ ಪಲಾವ್, ಅನ್ನ, ರಸಂ ಲಭ್ಯವಿತ್ತು. ಮೊಸರನ್ನ, ಉಪ್ಪಿನಕಾಯಿ ಜೊತೆಗೆ ಪಾಪಾಡ್ ಕೂಡ ಮೆನುವಿನಲ್ಲಿತ್ತು. ಸಸ್ಯಹಾರಿ ಸಚಿವರು ಇವುಗಳನ್ನ ಸವಿಸಿ, ಒಂದಷ್ಟು ಚರ್ಚೆ ನಡೆಸಿದ್ದಾರೆ. ಒಟ್ಟಾರೆ, ಒಂದು ಡಿನ್ನರ್ ಪಾರ್ಟಿ ಮೂಲಕ ಡಿಕೆ ಶಿವಕುಮಾರ್ ಹಲವು ರಣತಂತ್ರಗಳನ್ನ ಹೆಣೆದಿದ್ದಾರೆ. ಈ ಮೂಲಕ ವಿರೋಧಿಗಳನ್ನ ಮಟ್ಟಹಾಕಲು ಮುಂದಾಗಿದ್ದಾರೆ ಅನ್ನೋದು ರಾಜಕೀಯ ವಲಯದಲ್ಲಿರೋ ಚರ್ಚೆ.

ವಿಶೇಷ ವರದಿ: ಹರೀಶ್ ಕಾಕೋಳ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment