newsfirstkannada.com

‘ಇಂಡಿಯಾ’ ಬದಲು ಭಾರತ ಎಂದು ಮರುನಾಮಕರಣ; ಮೋದಿ ನಿರ್ಧಾರಕ್ಕೆ ಡಿಕೆಶಿ ಭಾರೀ ವಿರೋಧ

Share :

Published September 5, 2023 at 4:01pm

Update September 5, 2023 at 4:07pm

    'ಇಂಡಿಯಾ' ಬದಲು ಭಾರತ ಎಂದು ಮರುನಾಮಕರಣ

    ಪ್ರಧಾನಿ ಮೋದಿ ನಿರ್ಧಾರಕ್ಕೆ ಡಿಸಿಎಂ ಡಿಕೆಶಿ ವಿರೋಧ..!

    ನಾನು ಇದನ್ನು ಖಂಡಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್

ರಾಮನಗರ: ದೇಶದ ಹೆಸರು ‘ಇಂಡಿಯಾ’ ಬದಲು ಭಾರತ ಎಂದು ಮರುನಾಮಕರಣ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್​​​ ಮಾತಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್​​, ಮುಂದಿನ ದಿನಗಳಲ್ಲಿ ನಿಮ್ಮ ಹೆಸರು ಬದಲಾವಣೆ ಮಾಡುತ್ತಾರೆ. ಇದು ರಿಪಬ್ಲಿಕ್ ಆಪ್ ಇಂಡಿಯಾ. ನೋಟ್​​ನಲ್ಲೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿದೆ‌ ಎಂದರು ಡಿ.ಕೆ ಶಿವಕುಮಾರ್​​.

ಬಿಜೆಪಿಗೆ ಭಯ ಶುರುವಾಗಿದೆ ಎಂದ ಡಿಕೆಶಿ

ಕಾಂಗ್ರೆಸ್​ ನೇತೃತ್ವದ ಇಂಡಿಯಾ ಅನ್ನೋ ಒಕ್ಕೂಟದಿಂದ ಬಿಜೆಪಿಗೆ ಭಯ ಶುರುವಾಗಿದೆ. ನಮ್ಮ ಹೆಸರು ಬಹಳ ಎಫೆಕ್ಟಿವ್​ ಆಗಿದೆ. ಹೀಗಾಗಿ ಹೆಸರು ಬದಲಿಸೋ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಸೋಲನ್ನು ನೋಡುತ್ತಿದ್ದಾರೆ. ಎಲ್ಲದರ ಹೆಸರು ಬದಲಾವಣೆ ಮಾಡಿ ಅವರ ಮಾತಿಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ಕೆಲವು ವಿಚಾರಗಳನ್ನು ಕೇಳಿದ್ರೆ ಶಾಕ್​ ಆಗ್ತೀರಾ ಎಂದರು.

ಅಸೆಟ್ ಡೀಮಾನಿಟೈಸ್ ಮಾಡಲು ಮುಂದಾಗಿದ್ದಾರೆ. ನಾವು ಭಾರತೀಯರೇ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಬಿಜೆಪಿಯವ್ರು ಮಾಡ್ತಿರೋದು ಸರಿಯಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇದನ್ನ ಖಂಡಿಸ್ತೀನಿ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಇಂಡಿಯಾ’ ಬದಲು ಭಾರತ ಎಂದು ಮರುನಾಮಕರಣ; ಮೋದಿ ನಿರ್ಧಾರಕ್ಕೆ ಡಿಕೆಶಿ ಭಾರೀ ವಿರೋಧ

https://newsfirstlive.com/wp-content/uploads/2023/07/DK_Shivkumar-2.jpg

Load More