/newsfirstlive-kannada/media/post_attachments/wp-content/uploads/2025/06/DK-SHIVAKUMAR.jpg)
ಬೆಂಗಳೂರಿನ ಚಿನ್ನಸ್ವಾಮಿ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಭಾರೀ ಸಾವು-ನೋವು ಸಂಭವಿಸಿದೆ. ಸದ್ಯದ ಮಾಹಿತಿ ಪ್ರಕಾರ, 10ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಘಟನೆ ಬಗ್ಗೆ ಡಿಸಿಎಂ ಏನಂದ್ರು..?
ಸ್ಟೇಡಿಯಂ ಬಳಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ.. ದುರಂತಕ್ಕೆ ಪೊಲೀಸರು ಹೊಣೆಯಲ್ಲ, ಸರ್ಕಾರವೂ ಹೊಣೆಯಲ್ಲ. ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಜನಸಾಗರ ತುಂಬಿತ್ತು. ಹಾಗಾಗಿ, ಜನರನ್ನ ನಿಯಂತ್ರಿಸಲು ಕಷ್ಟ ಆಯ್ತು. ಹಾಗಾಗಿ, ಜನರನ್ನ ನಿಯಂತ್ರಿಸಲು ಕಷ್ಟ ಆಯ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈದಾನದಲ್ಲೂ ನಾನು ಪೊಲೀಸರೊಂದಿಗೆ ಮಾತನಾಡಿದೆ. ಅವರು ನೀಡಿದ ಮಾಹಿತಿ ಪ್ರಕಾರ, ಕಂಟ್ರೋಲ್ ಮಾಡಲು ಸಾಧ್ಯವಾಗದೇ ಹೀಗೆ ಆಗಿದೆ. ಗೇಟ್ಗಳನ್ನು ಕಿತ್ತು ಬೀಸಾಡಲಾಗಿದೆ. ಭಾರೀ ನೂಕು-ನುಗ್ಗಲು ಸಂಭವಿಸಿದ ಹಿನ್ನೆಲೆಯಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ರೀತಿಯ ಘಟನೆ ಆಗಬಾರದಿತ್ತು. ತುಂಬಾ ನೋವು ಆಗಿದೆ.
ಆಗಿದ್ದೇನು..?
ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡವು ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ರಾಜ್ಯ ಸರ್ಕಾರ ವಿಧಾನಸೌಧದ ಮುಂಭಾಗದಲ್ಲಿ ಆರ್ಸಿಬಿ ಟೀಂಗೆ ಹಾಗೂ ಟೀಂನ ಮ್ಯಾನೇಜ್ಮೆಂಟ್ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ, ಫ್ಯಾನ್ಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದಾರೆ. ಆಗ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದು ಅನಾಹುತ ಆಗಿದೆ. ಇನ್ನು, ಕಾಲ್ತುಳಿತ ಸಂದರ್ಭದಲ್ಲಿ ಆಟಗಾರರು ವಿಧಾನಸೌಧದ ಕಾರ್ಯಕ್ರಮದಲ್ಲಿದ್ದರು.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ..? ದುರಂತಕ್ಕೆ ಕಾರಣವಾಯ್ತಾ 2 ತಪ್ಪುಗಳು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ