Advertisment

ಶ್ರೀಗಳು ಬಂದೋರಿಗೆ ಆಶೀರ್ವಾದ ಮಾಡಿ ವಿಭೂತಿ ಇಡ್ತಾರೆ ಅಷ್ಟೇ -ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್

author-image
Ganesh
Updated On
ಶ್ರೀಗಳು ಬಂದೋರಿಗೆ ಆಶೀರ್ವಾದ ಮಾಡಿ ವಿಭೂತಿ ಇಡ್ತಾರೆ ಅಷ್ಟೇ -ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್
Advertisment
  • ಹೆಚ್​.ಡಿ.ಕುಮಾರಸ್ವಾಮಿ ಮಾತಿನಲ್ಲಿ ಸ್ಟ್ಯಾಂಡ್ ಇಲ್ಲ -ಡಿಕೆಶಿ
  • ‘ಒಕ್ಕಲಿಗರು ದಡ್ಡರಲ್ಲ, ಒಕ್ಕಲಿಗ ಸ್ವಾಮಿಗಳು ದಡ್ಡರಲ್ಲ’
  • ನಿರ್ಮಲಾನಂದನಾಥ ಶ್ರೀಗಳಿಗೂ ಟಾಂಗ್ ಕೊಟ್ಟ ಡಿಕೆಶಿ

ಬೆಂಗಳೂರು: ಕುಮಾರಸ್ವಾಮಿ ಯಾರಿಗೆ ಟೀಕೆ ಮಾಡಿಲ್ಲ ಹೇಳಿ. ಮೇಕೆದಾಟು ಬಗ್ಗೆಯೂ ಟೀಕೆ ಮಾಡಿದ್ರು. ಈಗ ಮೇಕೆದಾಟು ಬಗ್ಗೆ ಬೆಂಬಲ ಅಂತಾರೆ. ಕುಮಾರಸ್ವಾಮಿ ಮಾತಿನಲ್ಲಿ ಸ್ಟ್ಯಾಂಡ್ ಇಲ್ಲ ಎಂದು ಹೆಚ್‌ಡಿಕೆ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

Advertisment

ಇದನ್ನೂ ಓದಿ: ಇಬ್ಬರು ಮುದ್ದಾದ ಮಕ್ಕಳನ್ನು ಸಾಯಿಸಿದ್ದೇನೆ..’ ಬರ್ಬರ ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿದ ಐನಾತಿ ತಾಯಿ

ಮೈತ್ರಿ ನಾಯಕರು ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿಯಾಗಿದ್ದರ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಒಕ್ಕಲಿಗರ ಮತಗಳನ್ನ ಸೆಳೆಯೋದು ಅಷ್ಟು ಈಸಿ ಅಲ್ಲ. ನಿರ್ಮಲಾನಂದ ಶ್ರೀಗಳು ಯಾರ ಪರವೂ ಇಲ್ಲ. ಅವ್ರು ಬಂದೋರಿಗೆ ಆಶೀರ್ವಾದ ಮಾಡಿ ವಿಭೂತಿ ಇಡ್ತಾರೆ ಅಷ್ಟೇ. ನಮ್ಮ ಕ್ಯಾಂಡಿಡೇಟ್ಸ್ ಸ್ವಾಮೀಜಿಗಳ ಬಳಿ ಹೋಗಿದ್ದರು. ಹಾಗೇ ಈಗ ಇವರು ಹೋಗಿದ್ದಾರೆ. ಆದರೆ ಸ್ವಾಮೀಜಿ ಮಾತ್ರ ಯಾರ ಪರವೂ ಇಲ್ಲ ಎಂದರು.

Advertisment

ಇದನ್ನೂ ಓದಿ: ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್​; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?

ಒಕ್ಕಲಿಗರು ದಡ್ಡರಲ್ಲ, ಒಕ್ಕಲಿಗ ಸ್ವಾಮಿಗಳು ದಡ್ಡರಲ್ಲ. ಅವರು ಬರ್ತಾರೆ, ಆಶೀರ್ವಾದ ಮಾಡ್ತಾರೆ, ವಿಭೂತಿ ಇಡ್ತಾರೆ, ಕಳುಹಿಸುತ್ತಾರೆ. ಅವರು ನಮ್ಮ ಪರವೂ ಮಾಡುವುದಿಲ್ಲ, ಅವರ ಪರವೂ ಮಾಡುವುದಿಲ್ಲ. ನಮ್ಮ ಕ್ಯಾಂಡಿಡೇಟ್​​ಗಳೂ ಹೋಗಿದ್ದರು. ಬಿಜೆಪಿ ಅವರು ಈಗ ಹೋಗಿದ್ದಾರೆ. ಆ ವೇಳೆ ಸ್ವಾಮಿಗಳು ಕೇಳಬೇಕಿತ್ತು. ನಮ್ಮ ಚೀಫ್ ಮಿನಿಸ್ಟರ್​​​​ ಅನ್ನು ಅಂದು ಇಳಿಸಿಬಿಟ್ರಲ್ಲ ಎಂದು ಕೇಳಬೇಕಿತ್ತು. ಬಹುಶಃ ಅದನ್ನು ಕೇಳುವ ಶಕ್ತಿ ಸ್ವಾಮೀಜಿಗಳಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇಂದು ಯಾರೆಲ್ಲ ಆದಿಚುಂಚನಗಿರಿಗೆ ಹೋಗಿದ್ದಾರೋ, ಅವರೇ ಮುಖ್ಯಮಂತ್ರಿಯನ್ನು ಇಳಿಸಿದ್ದು. ಯಾರೂ ಕೂಡ ಸತ್ಯವನ್ನೂ ಮುಚ್ಚೋದಕ್ಕೆ ಆಗುವುದಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ಮಹಿಳೆ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಆಕೆ ವಿರುದ್ಧವೇ ಕೇಸ್ ದಾಖಲಿಸಿದ BMTC ಕಂಡಕ್ಟರ್..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment