/newsfirstlive-kannada/media/post_attachments/wp-content/uploads/2025/03/DK_Shivakumar-3.jpg)
ಕರ್ನಾಟಕ ಕಾಂಗ್ರೆಸ್ನ ಶಿವನಾಟ, ಇಡೀ ಕಾಂಗ್ರೆಸ್ ಪಾಳಯವನ್ನೇ ನಿದ್ದೆಗೆಡಿಸಿ ಜಾಗರಣೆ ಮಾಡಿಸಿದೆ. ಈ ಜಾಗರಣೆ ಅಧಿಕಾರದ ಜಾಗಾರ ಕಣಿವೆಯಲ್ಲಿ ಪಂಚತಂತ್ರದ ಕದನಕ್ಕೆ ಪಂಚಾಕ್ಷರಿ ಬರೆದಿದ್ದಾರೆ. ಅದರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಒಂದೊಂದು ನಡೆ- ನುಡಿಯೂ ರಾಜ್ಯ ರಾಜಕೀಯದಲ್ಲಿ ಸಂಚಲ ಸೃಷ್ಟಿಸಿದೆ. ನನಗೆ ಎಲ್ಲಿ ಒಳ್ಳೆಯದಾಗುತ್ತೋ ಅಲ್ಲಿಗೆ ಹೋಗಬೇಕಲ್ವಾ ಎಂದು ಮಾರ್ಮಿಕವಾಗಿ ನುಡಿದಿರೋದು ನಾನಾ ಅರ್ಥಗಳಿಗೆ ದಾರಿಯಾಗಿದೆ. ಇದರ ನಡುವೆ ಅಧಿಕಾರದ ಕಿಚ್ಚಿನಲ್ಲಿ ಉರಿಯುತ್ತಿರುವ ಕಾಂಗ್ರೆಸ್ ಮನೆಗೆ ಕೇಸರಿ ಪಡೆ ಮತ್ತಷ್ಟು ಪೆಟ್ರೋಲ್ ಸುರಿದಿದೆ.
‘ಡಿಸಿಎಂ ಡಿ.ಕೆ.ಶಿವಕುಮಾರ್ ಕರ್ನಾಟಕದ ಏಕನಾಥ್ ಶಿಂಧೆ’
ಡಿಸಿಎಂ ಡಿ.ಕೆ.ಶಿವಕುಮಾರ್ರ ನಡೆ-ನುಡಿ ಬಗ್ಗೆ ಕಾಂಗ್ರೆಸ್ನಲ್ಲೇ ಅಪಸ್ವರ ಎದ್ದಿದೆ. ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದ ಡಿ.ಕೆ ಶಿವಕುಮಾರ್ ಶಿವರಾತ್ರಿಯಂದು ಅಮಿತ್ ಶಾ ಜೊತೆ ಶಿವ ಧ್ಯಾನ ಮಾಡಿದರು. ಇದು ಕೆಲ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗಿಸಿದೆ. ಆದ್ರೆ, ಬಿಜೆಪಿ ಇದರ ಲಾಭ ಪಡೆದುಕೊಳ್ಳಲು ದಾಳ ಉರುಳಿಸಿದೆ.
ಡಿ.ಕೆ ಶಿವಕುಮಾರ್, ಕರ್ನಾಟಕದ ಏಕನಾಥ್ ಶಿಂಧೆ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಮೊದಲು ಕಾಂಗ್ರೆಸ್ ನಾಯಕರು ಏನ್ ಮಾಡ್ತಾರೆ ನೋಡೋಣ.. ನಾವ್ಯಾರು ಡಿ.ಕೆ ಶಿವಕುಮಾರನ್ನ ಬಿಜೆಪಿಗೆ ಕರೆದಿಲ್ಲ. ಎಲ್ಲವನ್ನು ಕೇಂದ್ರದ ಬಿಜೆಪಿ ನಾಯಕರೇ ನೋಡಿಕೊಳ್ತಾರೆಂದು ಬಾಂಬ್ ಸಿಡಿಸಿದ್ದಾರೆ. ಇನ್ನು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡ, ಡಿ.ಕೆ ಶಿವಕುಮಾರ್ ಬಿಜೆಪಿ ಬರೋದಾದ್ರೆ ಸ್ವಾಗತ ಎಂದಿದ್ದಾರೆ.
ಬಿಜೆಪಿ ನಾಯಕರ ಹೇಳಿಕೆಗೆ ಕಾಂಗ್ರೆಸ್ ನಾಯಕರ ತಿರುಗೇಟು
ಮಹಾರಾಷ್ಟ್ರದಲ್ಲಿ ಆದಂತೆ.. ಕರ್ನಾಟಕದಲ್ಲಿ ಡಿ.ಕೆ ಶಿವಕುಮಾರ್ ಏನಕಾಥ್ ಶಿಂಧೆ ಆಗ್ತಾರೆ ಎಂಬ ಬಿಜೆಪಿ ನಾಯಕರ ಮಾತಿಗೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಹೀಗಾಗಿ ಕನಸು ಕಾಣ್ತಿದ್ದಾರೆ ಎಂದು ಚೆಲುವರಾಯಸ್ವಾಮಿ ಮಾತಿನಲ್ಲಿ ಕಮಲವನ್ನು ಚುಚ್ಚಿದ್ದಾರೆ. ಇನ್ನು ಶಿವರಾತ್ರಿಯಲ್ಲಿ ಡಿ.ಕೆ ಶಿವಕುಮಾರ್ ಭಾಗಿ ಬಗ್ಗೆ ಸಚಿವ ಎಂ.ಬಿ ಪಾಟೀಲ್, ಶಿವರಾಜ್ ತಂಗಡಗಿ ಸಮರ್ಥಿಸಿಕೊಂಡಿದ್ದಾರೆ.
‘ಬಿಜೆಪಿಯಲ್ಲಿ ನಾಯಕತ್ವ ಇಲ್ಲ’
ಬಿಜೆಪಿ ಮಾತು ಕೇಳಿ ತೀರ್ಮಾನ ತೆಗೆದುಕೊಳ್ಳುವಂತ ದಡ್ಡರು ಏನು ಇಲ್ಲಿ ಇಲ್ಲ. ಬಿಜೆಪಿಯವರಿಗೆ ಒಬ್ಬರು ಲೀಡರ್ ಅನ್ನೋದು ಇಲ್ಲ. ಅದಕ್ಕಾಗಿ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿ ಲೀಡರ್ಶಿಪ್ ತೆಗೆದುಕೊಳ್ಳುವ ಅವಶ್ಯಕತೆ ಯಾರಿಗೂ ಇಲ್ಲ. ಕಾಂಗ್ರೆಸ್ ಭದ್ರವಾಗಿದೆ. ಬಿಜೆಪಿ ಇನ್ನೂ ಡೌನ್ ಆಗಬೇಕು ವಿನಃ ಜಾಸ್ತಿ ಅಂತೂ ಆಗಲ್ಲ.
ಚಲುವರಾಯಸ್ವಾಮಿ, ಸಚಿವ
‘ಶಿವಕುಮಾರ್ ಹಿಂದು ಅಲ್ವಾ?’
ಡಿಸಿಎಂ ಡಿಕೆ ಶಿವಕುಮಾರ್ ಅವರು ಕಟ್ಟಾ ಕಾಂಗ್ರೆಸ್ನವರು. ಇದೆಲ್ಲಾ ಕೂಡ ಮಾಧ್ಯಮದ ಊಹಾಪೋಹಾ. ಈಶ ಪೌಂಡೇಶನ್ದು ಬಿಜೆಪಿ ಪಾರ್ಟಿ ಕಾರ್ಯಕ್ರಮ ಅಲ್ಲ. ಈಶ ಪೌಂಡೇಶನ್ದು ಶಿವರಾತ್ರಿ ಕಾರ್ಯಕ್ರಮ. ಪಕ್ಷದ ಸಿದ್ಧಾಂತಗಳಿರುತ್ತವೆ. ಹಾಗದ್ರೆ ಶಿವಕುಮಾರ್ ಹಿಂದುಗಳು ಅಲ್ವಾ?.
ಎಂ.ಬಿ.ಪಾಟೀಲ್, ಸಚಿವ
‘ಬಿಜೆಪಿ ಕನಸು ನನಸಾಗಲ್ಲ’
ಕರ್ನಾಟಕದ ಏಕನಾಥ್ ಶಿಂಧೆ ಹುಟ್ಟಿಕೊಂಡಿದ್ದಾರೆ ಎಂದು ಬಿಜೆಪಿಯವರು ಅನ್ಕೊಂಡಿದ್ದಾರೆ. ಅದು ಅವರ ಕನಸು. ಆದರೆ ಅವರ ಕನಸು ನನಸು ಆಗೋಕೆ ಸಾಧ್ಯ ಇಲ್ಲ. ಕಾಂಗ್ರೆಸ್ ಸದೃಢವಾಗಿದೆ.
ಶಿವರಾಜ್ ತಂಗಡಗಿ, ಸಚಿವ
ರಾಜಕೀಯವಾಗಿ ಒಂದು ರಾತ್ರಿಯಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದ ಡಿ.ಕೆ ಶಿವಕುಮಾರ್, ಎಲ್ಲಿ ಒಳ್ಳೆಯದಾಗುತ್ತೋ ಅಲ್ಲಿಗೆ ಹೋಗಬೇಕು ಎಂದಿರೋದು ರಾಜ್ಯ ರಾಜಕೀಯದಲ್ಲಿ ಹಲವು ಚರ್ಚೆಗಳಿಗೆ ವೇದಿಕೆ ಆಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ