Advertisment

‘ಒಳಗೆ ಕುಳಿತವನದ್ದೇ ಕುರ್ಚಿ, ಒದ್ದವನದ್ದೇ ಚೆಂಡು’-ಡಿ.ಕೆ ಶಿವಕುಮಾರ್

author-image
Bheemappa
Updated On
‘ಒಳಗೆ ಕುಳಿತವನದ್ದೇ ಕುರ್ಚಿ, ಒದ್ದವನದ್ದೇ ಚೆಂಡು’-ಡಿ.ಕೆ ಶಿವಕುಮಾರ್
Advertisment
  • ಸಿಎಂ ಆಗಮನಕ್ಕೂ ಮುನ್ನಾದಿನ ಮುಂದಿನ ಸಿಎಂ ಪೋಸ್ಟರ್​​
  • ನಾನೊಬ್ಬ ಮುಖ್ಯಮಂತ್ರಿ ಅಂತ ಬಂದಿಲ್ಲ ಎಂದಿರುವ ಡಿಸಿಎಂ
  • ಸಿಎಂ ಕುರ್ಚಿ ಕದನಕ್ಕೆ ಹಸ್ತದಲ್ಲಿ ವಿರಾಮ ಬೀಳುವ ಲಕ್ಷಣಗಳಿಲ್ಲ

ಸಿಎಂ ಸೀಟು ಖಾಲಿ ಇಲ್ಲ. ಅದು ನಮಗೂ ಗೊತ್ತು, ನಿಮಗೂ ಗೊತ್ತು.. ಆದ್ರೆ, ವಿಪಕ್ಷಗಳು ಭವಿಷ್ಯ ಸದ್ಯಕ್ಕೆ ಮುಂದೂಡಿಕೆ ಆಯ್ತಾ ಅಥವಾ ಹುಸಿ ಆಯ್ತಾ ಗೊತ್ತಿಲ್ಲ. ಇತ್ತ, ಕಾಂಗ್ರೆಸ್​​​ನಲ್ಲಿನ ಬೆಳವಣಿಗೆ ನಿತ್ಯವೊಂದು ಎಪಿಸೋಡ್​​​. ಎಲ್ಲರಿಗೂ ಅದೇ ಸೀಟಿನ ಕನವರಿಕೆ. ಅದರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್​​ಗೆ ಹೋದಲ್ಲಿ ಬಂದಲ್ಲಿ ಅದೆ ಗೊಣಗಾಟ. ಆದ್ರೆ, ಸಿದ್ದರಾಮಯ್ಯ ಹೇಳಿದ್ದು, ಇಂಟ್ರಸ್ಟಿಂಗ್​ ಆಗಿದೆ.

Advertisment

ಸುಮ್ನೆ ಎಣಿಕೆ ಹಾಕಿದ್ರೆ ಒಂದು ತಿಂಗಳೇ ಆಯ್ತು ಅನಿಸುತ್ತೆ.. ಸಿಎಂ ಕುರ್ಚಿ ಸಿದ್ದು ರಾಜೀನಾಮೆ ನೀಡ್ತಾರೆ. 24 ಗಂಟೆ, ಇಲ್ಲಾ ಎರಡೇ ಗಂಟೆ ನೋಡಿ. ಮೋಸ್ಟ್​ಲೀ ದಸರಾ. ಚಾಮುಂಡಿಗೆ ಈ ಬಾರಿ ಪುಷ್ಪಾರ್ಚನೆ ಮಾಡಲ್ಲ. ಇಲ್ಲ ಇಲ್ಲ ದೀಪಾವಳಿ, ದೀಪಾವಳಿಗೆ ಪಕ್ಕಾ ಹೀಗೆ ನಿತ್ಯವೂ ರಾಜಕೀಯ ಕವಡೆ ಹಾಕಿ ಹೇಳಿದ ಭವಿಷ್ಯಗಳು ಗೂಡು ಸೇರಿವೆ. ಆದ್ರೆ, ಕಾಂಗ್ರೆಸ್​ನಲ್ಲಿ ಈ ಕನವರಿಕೆ ಕಮ್ಮಿನೇ ಆಗ್ತಿಲ್ಲ.

ಇದನ್ನೂ ಓದಿ: ಸಾವಿರಾರು ವಜ್ರಗಳಲ್ಲಿ ಮೂಡಿ ಬಂದ ರತನ್ ಟಾಟಾ ಚಿತ್ರ; ಗುಜರಾತ್​ ವ್ಯಾಪಾರಿಯಿಂದ ವಿಶೇಷ ಶ್ರದ್ಧಾಂಜಲಿ!

publive-image

‘ಒಳಗೆ ಕೂತಿರುವವನದೇ ಕುರ್ಚಿ, ಒದ್ದವನದ್ದೇ ಚೆಂಡು’

ಸಿಎಂ ಬದಲಾವಣೆ ಚರ್ಚೆಗೆ ವಿರಾಮ ಬೀಳ್ತಾನೆ ಇಲ್ಲ. ನಾನ್​ ಸಿಎಂ, ನಾನ್​ ಸಿಎಂ ಟವಲ್​​ ಹಾಕಿ ಮೀಟಿಂಗ್​ ಮಾಡಿದ್ದೇ ಮಾಡಿದ್ದು. ಈ ನಡುವೆ ಧಾರವಾಡದಲ್ಲಿ ಡಿ.ಕೆ ಶಿವಕುಮಾರ್​​ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ. ನಾನೊಬ್ಬ ಮುಖ್ಯಮಂತ್ರಿ ಅಂತ ಬಂದಿಲ್ಲ ಅನ್ನೋ ಮೂಲಕ ಡಿ.ಕೆ ಶಿವಕುಮಾರ್ ಮನದಾಳದ ಮಾತು ಹೊರ ಬಂದಿದೆ. ಅದಾಗಿ ಕೆಲ ಸೆಕೆಂಡ್​ನಲ್ಲೇ ಡಿ.ಕೆ ಶಿವಕುಮಾರ್ ಆಡಿದ ಒಗಟಿನ ಮಾತು ಬಿಡಿಸಲು ಆಗ್ತಿಲ್ಲ.

Advertisment

ನಾನು ‘ಮುಖ್ಯಮಂತ್ರಿ’ಯಾಗಿ ಬಂದಿಲ್ಲ

ನಾನು ನಿಮಗೆ ಹೇಳೂವುದು ಇಷ್ಟೇ. ನಾನೊಬ್ಬ ಮುಖ್ಯಮಂತ್ರಿ ಆಗಿ ಇಲ್ಲಿಗೆ ಬಂದಿಲ್ಲ. ನಾನೊಬ್ಬ ಸಹಕಾರ ಸಂಸ್ಥೆಯಲ್ಲಿ ಬೆಳೆದವರನು. ಸಹಕಾರ ಸಂಸ್ಥೆ ಬೆಳೆಸಿಕೊಂಡು ಬರುವುದು ಕಷ್ಟ ಇದೆ. ಆದರೆ ನಾನು, ಸರ್ಕಾರ ನಿಮ್ಮ ಜೊತೆ ಇರುತ್ತೇವೆ.
ಎಲ್ಲ ಪಾರ್ಟಿಯಲ್ಲಿ ನಿಮ್ಮದೆಲ್ಲ ಕೋ ಪರೇಶನಲ್ಲಿ ಒಂದೇ. ಒಳಗೆ ಕುಳಿತವನದ್ದೇ ಕುರ್ಚಿ, ಒದ್ದವನದ್ದೆ ಚೆಂಡು. ಅದು ಕೂಡ ಅರಿವಿದೆ.

ಡಿ.ಕೆ.ಶಿವಕುಮಾರ್​, ಡಿಸಿಎಂ

ಜನರ ಆಶೀರ್ವಾದ ಇರುವವರೆಗೆ ಅಲ್ಲಾಡಿಸಲು ಆಗಲ್ಲ!

ಇದಕ್ಕೂ ಮುನ್ನ ಸಿದ್ದರಾಮಯ್ಯ, ಜನರ ಆಶೀರ್ವಾದ ಇರೋವರೆಗೆ ನನ್ನನ್ನು ಯಾರೂ ಅಲ್ಲಾಡಿಸಲು ಆಗಲ್ಲ ಅಂತ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಗುಡುಗಿದರು.

‘ಜನಾಶೀರ್ವಾದ ಇರೋವರೆಗೆ ಅಲ್ಲಾಡಿಸಕ್ಕಾಗಲ್ಲ’

ಬಿಜೆಪಿಯವರೇ ಎಲ್ಲಿವರೆಗೆ ಈ ರಾಜ್ಯದ ಜನರ ಆಶೀರ್ವಾದ ಇರುತ್ತದೋ ಅಲ್ಲಿವರೆಗೆ ನನ್ನನ್ನು ಅಲ್ಲಾಡಿಸೋಕೆ ಆಗಲ್ಲ. ಜನಶಕ್ತಿ ಮುಂದೆ ಯಾವ ಶಕ್ತಿನೂ ಇಲ್ಲ.

ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisment

publive-image

ಸಿಎಂ ಸೀಟ್​​ನಲ್ಲಿ ಕೂತು ಡಿ.ಕೆ ಶಿವಕುಮಾರ್ ಜತೆ ಜಾರಕಿಹೊಳಿ ಚರ್ಚೆ!

ಅಂದ್ಹಾಗೆ ಸಿಎಂ ಆಗಮನಕ್ಕೂ ಮುನ್ನಾ ದಿನವೇ ಬೆಳಗಾವಿಯಲ್ಲಿ ಸತೀಶ್​​ ಜಾರಕಿಹೊಳಿ ಮುಂದಿನ ಸಿಎಂ ಎಂಬ ಪೋಸ್ಟರ್​​​ ಬ್ಯಾನರ್​​​ಗಳು ಸದ್ದು ಮಾಡಿದ್ವು. ಈ ಬೆನ್ನಲ್ಲೆ ನಿನ್ನೆ ಸವದತ್ತಿ ಕಾರ್ಯಕ್ರಮದಲ್ಲಿ ಸಿಎಂ ಕುರ್ಚಿ ಮೇಲೆ ಜಾರಕಿಹೊಳಿ ಕುಳಿತಿದ್ದಾರೆ. ವೇದಿಕೆ ಮೇಲೆ ಸತೀಶ್- ಡಿಕೆ ಶಿವಕುಮಾರ್ ಮಧ್ಯದ ಕುರ್ಚಿಯಲ್ಲಿ ಸಿಎಂ ಕುರ್ಚಿ ಮೀಸಲಾಗಿರಿಸಲಾಗಿತ್ತು. ಆದ್ರೆ, ಸಿಎಂ ಭಾಷಣ ಮಾಡಲು ಎದ್ದು ಹೋಗಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಜೊತೆ ಚರ್ಚಿಸಲು ಖಾಲಿಯಿದ್ದ ಸಿಎಂ ಕುರ್ಚಿಯಲ್ಲಿ ಕೂತಿದ್ದು ಕಂಡು ಬಂತು. ಹಸ್ತದಲ್ಲಿ ಈ ಕುರ್ಚಿ ಕದನಕ್ಕೆ ಸದ್ಯಕ್ಕೆ ವಿರಾಮ ಬೀಳುವ ಲಕ್ಷಣಗಳಿಲ್ಲ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment