Advertisment

ಬಡ ಮನುಷ್ಯ ಅಣ್ಣಾಮಲೈ.. ತಮಿಳುನಾಡಿನಲ್ಲಿ ‘ಕಿಚ್ಚು’ ಹಚ್ಚಿದ ಡಿ.ಕೆ ಶಿವಕುಮಾರ್‌; ಹೇಳಿದ್ದೇನು?

author-image
admin
Updated On
ಬಡ ಮನುಷ್ಯ ಅಣ್ಣಾಮಲೈ.. ತಮಿಳುನಾಡಿನಲ್ಲಿ ‘ಕಿಚ್ಚು’ ಹಚ್ಚಿದ ಡಿ.ಕೆ ಶಿವಕುಮಾರ್‌; ಹೇಳಿದ್ದೇನು?
Advertisment
  • ಅಣ್ಣಾಮಲೈ ಹಾಗೂ ಡಿಕೆ ಶಿವಕುಮಾರ್‌ ಮಧ್ಯೆ ಮಾತಿನ ಸಮರ
  • ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ಸಭೆ
  • ಅಣ್ಣಾಮಲೈಗೆ ನಮ್ಮ ಶಕ್ತಿ ಏನು ಅನ್ನೋದು ಗೊತ್ತು ಎಂದ ಡಿಕೆಶಿ

ಚೆನ್ನೈ: ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮಿಳುನಾಡಿಗೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಆಡಿದ ಒಂದು ಮಾತಿಗೆ ಅಣ್ಣಾಮಲೈ ಕೆರಳಿ ಕೆಂಡವಾಗಿದ್ದಾರೆ. ಅಣ್ಣಾಮಲೈ ಹಾಗೂ ಡಿಕೆಶಿ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ.

Advertisment

ಲೋಕಸಭಾ ಕ್ಷೇತ್ರ ಮರುವಿಂಗಡನೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗುತ್ತಿದೆ. ಈ ಅನ್ಯಾಯದ ನಡೆಗಳನ್ನು ಖಂಡಿಸಲು ಇಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ಸಭೆ ನಡೆಯಿತು.

ಚೆನ್ನೈನಲ್ಲಿ ನಡೆದ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಒಟ್ಟು 14 ರಾಜ್ಯಗಳ ನಾಯಕರು ಭಾಗವಹಿಸಿದ್ದರು.

publive-image

ಈ ಸಭೆಯ ಮಧ್ಯೆ ಡಿ.ಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಸ್ಟಾಲಿನ್ ಕರೆದ ಸಭೆಗೆ ತಮಿಳುನಾಡಿನಲ್ಲಿ ಬಿಜೆಪಿ ನಾಯಕರು ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಡಿಕೆಶಿ ಉತ್ತರಿಸಿದರು.

Advertisment

ಅಣ್ಣಾಮಲೈ ನಮ್ಮ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಪೂರ್ ಮ್ಯಾನ್ (ಬಡ ಮನುಷ್ಯ). ಅಣ್ಣಾಮಲೈಗೆ ನಮ್ಮ ಶಕ್ತಿ ಏನು ಅನ್ನೋದು ಗೊತ್ತು. ನನ್ನನ್ನು ಬಿಜೆಪಿ, ತಿಹಾರ್ ಜೈಲಿಗೆ ಕಳಿಸಿತ್ತು. ಆಗಲೇ ನಾನು ಹೆದರಿಲ್ಲ. ಈಗ ಕಪ್ಪು ಬಾವುಟಕ್ಕೆ ಹೆದರಲ್ಲ. ಬಿಜೆಪಿಯ ಕಪ್ಪು ಬಾವುಟವನ್ನು ನಾನು ಸ್ವಾಗತಿಸುತ್ತೇನೆ. ಬಿಜೆಪಿಯವರು ಅವರ ಕೆಲಸ ಮಾಡಲಿ. ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಕ್ಷೇತ್ರ ಮರುವಿಂಗಡನೆ! ಕೇಂದ್ರ ಸರ್ಕಾರದ ವಿರುದ್ಧದ ಬಹುರಾಜ್ಯ ಒಕ್ಕೂಟಗಳ ಹೋರಾಟಕ್ಕೆ ಕರ್ನಾಟಕ ಬಲ..! 

ಅಣ್ಣಾಮಲೈ ಸಖತ್ ಟಾಂಗ್‌! 
ಡಿ.ಕೆ ಶಿವಕುಮಾರ್ ಅವರು ಈ ಹೇಳಿಕೆ ನೀಡಿದ ತಕ್ಷಣವೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾದಲ್ಲೇ ತಿರುಗೇಟು ಕೊಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಹೌದು.. ನಾನು ಶ್ರದ್ದೆಯಿಂದ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ಜನರ ಸೇವೆ ಮಾಡಿದ್ದೇನೆ. ಈ ಬಗ್ಗೆ ಉಲ್ಲೇಖಿಸಿದ್ದಕ್ಕೆ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು ಎಂದು ಅಣ್ಣಾಮಲೈ ಹೇಳಿದ್ದಾರೆ.

Advertisment


">March 22, 2025

ಮುಖ್ಯವಾಗಿ ಈ ಬಡ ವ್ಯಕ್ತಿಗೆ ವಿಶ್ ಮಾಡಿದ್ದಕ್ಕೆ ಧನ್ಯವಾದಗಳು. ಕರ್ನಾಟಕದ ಮುಖ್ಯಮಂತ್ರಿಯಾಗುವ ನಿಮ್ಮ ಪರಿಶ್ರಮಕ್ಕೆ ನನ್ನ ಶುಭಾಶಯಗಳು. ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಸಿಎಂ ಆಗುವ ನಿಮ್ಮ ಪರಿಶ್ರಮಕ್ಕೆ ನನ್ನ ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಸಖತ್ ಟಾಂಗ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment