/newsfirstlive-kannada/media/post_attachments/wp-content/uploads/2025/04/DK-SHIVAKUMAR-4.jpg)
ರಾಜ್ಯದ ಕರಾವಳಿ ಭಾಗದಲ್ಲಿ ಕಾಂಗ್ರೆಸ್​ ಬಲವರ್ಧನೆಗೆ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಣತೊಟ್ಟಿದ್ದಾರೆ. ಹೌದು, ಒಂದು ಕಾಲ ಕಾಂಗ್ರೆಸ್​ನ್ನೇ ಉಸಿರಾಡ್ತಿದ್ದ ಕರಾವಳಿಯಲ್ಲಿ ಮತ್ತೆ ಹಸ್ತ ಧ್ವಜ ಹಾರಿಸುವ ದಿಟ್ಟತನಕ್ಕೆ ಬಿದ್ದಿದ್ದಾರೆ. ಇದಕ್ಕಾಗಿ ಶಿವಕುಮಾರ್ ಆಯ್ದುಕೊಂಡ ಮಾರ್ಗ, ಭಕ್ತಿ ಪರಂಪರೆ. ಮುಂದುವರಿದ ಭಾಗವಾಗಿ ​ಒಂದೇ ತಿಂಗಳಲ್ಲಿ 3ನೇ ಬಾರಿ ಕಡಲತಡಿಗೆ ಎಂಟ್ರಿಕೊಡ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/04/DK-SHIVAKUMAR-7.jpg)
ಕಂಬಳ, ಟೆಂಪಲ್​ ರನ್​, ಬ್ರಹ್ಮಕಲಶೋತ್ಸವ ಹೆಸರಲ್ಲಿ ಆ್ಯಕ್ಟಿವ್​​!
ಕರಾವಳಿ ಈಗ ಕೇಸರಿ ಅಲೆಯಲ್ಲಿ ತೇಲ್ತಿದೆ. ಬಿದ್ದ ಮತವೆಲ್ಲಾ ಕಮಲ ಪತಾಕೆಗೆ ಜೈ ಹೇಳ್ತಿದೆ. ದಶಕಗಳಿಂದ ಈ ಪರಂಪರೆ ಮೆಟ್ಟಿ ನಿಲ್ಲುವ ಸಾಹಸ ಸಾಧ್ಯವಾಗಿಲ್ಲ. ಇದೀಗ ಕರಾವಳಿಗಾಗಿ ವಿಶೇಷ ಕ್ಯಾಂಪಿಂಗ್​​ ಆರಂಭಿಸಿದ್ದಾರೆ. ಒಂದೇ ತಿಂಗಳಲ್ಲಿ ಮೂರನೇ ಬಾರಿ ಅರಬ್ಬಿ ತಟದಲ್ಲಿ ರಣವಿಹಾರಕ್ಕೆ ಆಗಮಿಸ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/04/DK-SHIVAKUMAR-6.jpg)
ಭಕ್ತಿ ಮಾರ್ಗ’.. ‘ಧರ್ಮ’ ರಾಜಕಾರಣ!
ಕಂಬಳ, ಟೆಂಪಲ್ ರನ್, ಬ್ರಹ್ಮಕಲಶೋತ್ಸವದ ಹೆಸರಿನಲ್ಲಿ ಕಡಲ ತೀರದಲ್ಲಿ ಡಿಕೆಶಿ ಫುಲ್​ ಆ್ಯಕ್ಟಿವ್​ ಆಗಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡ್ತಿದ್ದಾರೆ. ಕಾಂಗ್ರೆಸ್ ನಾಯಕರು ಆಯೋಜಿಸೋ ಪ್ರತೀ ಧಾರ್ಮಿಕ ಕಾರ್ಯಕ್ರಮಗಳಿಗೂ ಭೇಟಿ ನೀಡ್ತಿರುವ ಡಿಸಿಎಂ, ಭಕ್ತಿ ಮಾರ್ಗ ಆಯ್ದುಕೊಂಡಿದ್ದಾರೆ. ತನ್ನ ಕಟ್ಟಾಳುಗಳಿಗೆ ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲು ಇದೇ ದಾರಿ ತೋರಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/DK-SHIVAKUMAR-5.jpg)
ಗುರುಪುರ ಕಂಬಳ ಬೆನ್ನಲ್ಲೇ ಮುಂದಿನ ವಾರ ಮತ್ತೆ ಕರಾವಳಿಯಲ್ಲಿ ಬಂಡೆ ಟೆಂಪಲ್ ರನ್ ಆಗ್ತಿದೆ. ಧರ್ಮಸ್ಥಳ ದೇವಸ್ಥಾನ ಭೇಟಿ ಸೇರಿ ಬೆಳ್ತಂಗಡಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.. ಏಪ್ರಿಲ್ 20ರಂದು ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಕಾಂಗ್ರೆಸ್​​​ ಸಮಾವೇಶ ನಡೆಯಲಿದೆ.. ಮಾರ್ಚ್​ನಲ್ಲಿ ಕಾಪು ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿದ್ದ ಡಿಕೆಶಿ, ಎಪ್ರಿಲ್ 6 ರಂದು ಮಂಗಳೂರು ಗಡಿ ಭಾಗದ ಇತಿಹಾಸ ಪ್ರಸಿದ್ದ ಮಧೂರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗಿ ಆಗಿದ್ರು. ಒಟ್ಟಾರೆ, ಕರಾವಳಿ ಮಲೆನಾಡು ಭಾಗದಲ್ಲಿ ಕಾಂಗ್ರೆಸ್​​ ಕಟ್ಟುವ ಕಾಯಕದಲ್ಲಿ ನಿರತ ಡಿಕೆಶಿ, ಭಕ್ತಿ ಮಾರ್ಗ ಆಯ್ದು, ಧರ್ಮ ರಾಜಕಾರಣಕ್ಕೆ ನಿಂತಿದ್ದಾರೆ.. ಈ ಮೂಲಕ ಬಿಜೆಪಿಗೆ ಟಕ್ಕರ್​​ ಕೊಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us