ಕೃಷ್ಣನೂರಿನಲ್ಲೂ ಹಿಂದುತ್ವದ ಜಪ ಮಾಡಿದ ಡಿಸಿಎಂ; ಡಿಕೆಶಿ ಸಿಎಂ ಆಗೋದು ಪಕ್ಕಾ ಅಂದಿದ್ದು ಯಾರು?

author-image
Gopal Kulkarni
Updated On
ಕೃಷ್ಣನೂರಿನಲ್ಲೂ ಹಿಂದುತ್ವದ ಜಪ ಮಾಡಿದ ಡಿಸಿಎಂ; ಡಿಕೆಶಿ ಸಿಎಂ ಆಗೋದು ಪಕ್ಕಾ ಅಂದಿದ್ದು ಯಾರು?
Advertisment
  • ಕೃಷ್ಣನೂರು ಉಡುಪಿಯಲ್ಲಿ ಡಿಸಿಎಂ ಡಿಕೆಶಿ ಹಿಂದುತ್ವದ ಜಪ
  • ಡಿಕೆಶಿಯ ಮಾರಿಗುಡಿ ಭೇಟಿ ಬೆನ್ನಲ್ಲೇ ಕೇಸರಿ ಪಡೆ ಅಲರ್ಟ್​
  • ಡಿಕೆಶಿ ಸಿಎಂ ಆಗೋದನ್ನ ತಪ್ಪಿಸಲು ಆಗಲ್ಲ-ಮಾಜಿ ಸಿಎಂ ಭವಿಷ್ಯ

ಚರ್ಚೆ, ಧಾರ್ಮಿಕ ನಂಬಿಕೆ ಮತ್ತು ಹಿಂದುತ್ವದ ವಿಚಾರದಲ್ಲಿ ನಡೆಯುತ್ತಿದೆ. ಮುಂದುವರಿದ ಭಾಗವಾಗಿ ಬಿಜೆಪಿಯ ಭದ್ರಕೋಟೆ ಉಡುಪಿ ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್ ಟೆಂಪಲ್ ರನ್ ನಡೆಸಿ, ಬಿಜೆಪಿ ಗೆ ನಡುಕ ಹುಟ್ಟಿಸಿದ್ದಾರೆ. ಟ್ರಬಲ್ ಶೂಟರ್ ಜಿಲ್ಲೆಗೆ ಬಂದು ವಾಪಸ್ ಆಗುತ್ತಿದ್ದಂತೆ ರಾಜಾಹುಲಿಯ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಉಡುಪಿಗೆ ಬಂದು ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​​ಗೆ ಡಿಕೆಶಿ ವಾರ್ನಿಂಗ್.. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೆದರಿಕೆ, ಧಮ್ಕಿ ನಡೆಯಲ್ಲ ಎಂದ ವಿಜಯೇಂದ್ರ

ರಾಜ್ಯ ರಾಜಕೀಯದಲ್ಲಿ ಧಾರ್ಮಿಕತೆ ಚರ್ಚೆಯ ವಿಚಾರವಾಗಿದೆ. ಪ್ರಯಾಗ್ ರಾಜ್​ನ ತ್ರಿವೇಣಿ ಸಂಗಮದ ಕುಂಭಮೇಳದಲ್ಲಿ ಭಾಗವಹಿಸುವ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ರಾಷ್ಟ್ರ ಮಟ್ಟದಲ್ಲಿ ಕೆಸರೆಚಾಟ ನಡೀತಿದೆ. ಇತ್ತ ರಾಜ್ಯದಲ್ಲಿ ಡಿಕೆಶಿ ನಡೆಯಿಂದ ಕಾಂಗ್ರೆಸ್​ನೊಳಗೆ ಭಿನ್ನಾಭಿಪ್ರಾಯ ಶುರುವಾಗಿದ್ರೆ.. ಇತ್ತ ಕಮಲ ಪಾಳಯದಲ್ಲೂ ಗೊಂದಲ ಹುಟ್ಟಿಸಿದೆ. ಇದರ ನಡುವೆ ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿ ಗುಡಿಯ ಬ್ರಹ್ಮಕಲಕೋತ್ಸವದಲ್ಲಿ ಭಾಗಿಯಾದ ಡಿಕೆಶಿ, ಧರ್ಮ ಮತ್ತು ರಾಜಕಾರಣದ ದಾಳ ಉರುಳಿಸಿ, ಕರಾವಳಿ ಭಾಗದಲ್ಲಿ ಹೊಸ ಆಟ ಶುರುಮಾಡಿದ್ದಾರೆ.

publive-image

ಕರಾವಳಿ ಭಾಗ, ಅದರಲ್ಲೂ ಉಡುಪಿ ಬಿಜೆಪಿಯ ಭದ್ರಕೋಟೆ. ಹಿಂದುತ್ವ ಅಜೆಂಡಾ ಮೂಲಕ ಕೇಸರಿ ಪಡೆ ಕೃಷ್ಣನೂರಿನಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಆದ್ರೀಗ ಬಿಜೆಪಿಯ ಭದ್ರಕೋಟೆಯಲ್ಲಿ ಡಿಕೆಶಿ ಹಿಂದುತ್ವದ ಕಾರ್ಡ್​ ಪ್ಲೇ ಮಾಡಿದ್ದಾರೆ. ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡ ಡಿಸಿಎಂ ಡಿಕೆಶಿ, ಮಾತೃಭೂಮಿ ಪುಣ್ಯಭೂಮಿ ಎಂಬ ನಂಬಿಕೆಯ ಮಾತುಗಳನ್ನಾಡಿ ಹಿಂದುತ್ವದ ನೆಲದಲ್ಲಿ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. ಇದಷ್ಟೇ ಅಲ್ಲ ಕಾಂಗ್ರೆಸ್​ ನಾಯಕರ ಜೊತೆ ಸಭೆ ನಡೆಸಿ ಜಾತಿ ರಾಜಕಾರಣ ಗುಂಪುಗಾರಿಕೆ ಬಿಟ್ಟುಬಿಡಿ ಕೆಲಸ ಮಾಡುವಂತೆ ವಾರ್ನಿಂಗ್​ ಮಾಡಿದ್ದಾರೆ.

publive-image

ಕಾಂಗ್ರೆಸ್​ನ ಹಿಂದೂ ವಿರೋಧಿ ನಿಲುವನ್ನೇ ಬಿಜೆಪಿಗೆ ಅಸ್ತ್ರವಾಗಿದೆ. ಆದ್ರೀಗ ಡಿಕೆಶಿ ನಡೆ-ನುಡಿ ಕೇಸರಿ ಪಡೆಗೆ ಅಲರಾಮ್​ ಆಗಿದೆ. ಡಿಕೆಶಿ ಪ್ರವಾಸ ಮುಗಿಸುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉಡುಪಿಗೆ ದೌಡಾಯಿಸಿದ್ರು. ಕಾಪು ಕಡಲ ತೀರದಲ್ಲಿ ವಿಹರಿಸುತ್ತಾ , ಕರಾವಳಿಯ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ನಡೆಸಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ರಾಜ್ಯದಲ್ಲಿ ಅಧಿಕಾರ ಹಂಚಿಕೆ ಗದ್ದಲದ ನಡುವೆ ಡಿಕೆಶಿಯ ಸಾಫ್ಟ್​ ಹಿಂದುತ್ವದ ಆಟ.. ಮತ್ತೊಂದೆಡೆ ಸಿದ್ದರಾಮಯ್ಯ ಬಣದ ರಹಸ್ಯ ನಡೆ ಕಾಂಗ್ರೆಸ್​ ಹೈಕಮಾಂಡ್​ನ ಚಿಂತೆ ಹೆಚ್ಚಿಸಿದೆ. ಎಐಸಿಸಿ ಅಧ್ಯಕ್ಷರೇ ಬಾಯಿ ಮುಚ್ಚಿಕೊಂಡಿರುವಂತೆ ರಾಜ್ಯ ನಾಯಕರಿಗೆ ವಾರ್ನ್​ ಮಾಡಿದ್ರೂ ಬಣ ಬಡಿದಾಟ ಕಡಿಮೆ ಆಗ್ತಿಲ್ಲ.

publive-image

ಇದೀಗ ಮಾಜಿ ಸಿಎಂ, ಹೈಕಮಾಂಡ್​ ಮಟ್ಟದ ನಾಯಕರೊಬ್ಬರು ಡಿಕೆಶಿ ಪರ ಭವಿಷ್ಯ ನುಡಿದಿದ್ದಾರೆ. ಡಿಕೆಶಿ ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ವೀರಪ್ಪ ಮೊಯ್ಲಿ ಬಾಂಬ್​ ಸಿಡಿದಿದ್ದಾರೆ. ಈ ಎಲ್ಲಾ ಕಾರಣಕ್ಕೆ ರಾಜ್ಯ ರಾಜಕೀಯ ರಣರೋಚಕ ಘಟ್ಟ ತಲುಪಿದೆ. ಶಿವನ ಅಧಿಕಾರ ಸ್ತೋತ್ರ ಪಠಣ ಮಾತ್ರ ಡಿಸೆಂಬರ್​​​ ಹೊತ್ತಿಗೆ ಕನಕಪುರದ ಹೆಬ್ಬಂಡೆ, ಅಗ್ನಿಯ ಶಿಲೆಯಾಗಿ ಬದಲಾಗೋದು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment