newsfirstkannada.com

BREAKING: ‘ದ್ವೇಷದ ರಾಜಕಾರಣ ಬೇಡ’: ಡಿ.ಕೆ.ಶಿವಕುಮಾರ್- ಡಾ.ಅಶ್ವಥ್ ನಾರಾಯಣ್​ ಮಧ್ಯೆ ಶ್ರೀಗಳಿಂದ ರಾಜೀ ಸಂಧಾನ..?

Share :

Published June 27, 2023 at 10:50am

Update June 27, 2023 at 10:54am

    ಒಂದೇ ವೇದಿಕೆ ಮೇಲೆ ಶಿವಕುಮಾರ್-ಡಾ.ಅಶ್ವಥ್ ನಾರಾಯಣ್

    ರಾಜಕೀಯ ದ್ವೇಷ ಮರೆತು ಮತ್ತೆ ಒಂದಾಗ್ತಾರಾ ಘಟಾನುಘಟಿಗಳು?

    ಚರಿತ್ರೆ ಗೊತ್ತಿಲ್ಲ ಅಂದ್ರೆ ಚರಿತ್ರೆ ಸೃಷ್ಟಿ ಮಾಡೋಕೆ ಸಾಧ್ಯವಿಲ್ಲ-DKS ಕೌಂಟರ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ನಡುವಿನ ರಾಜಕೀಯ ಜಿದ್ದಾಜಿದ್ದಿ ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಂದು ನಡೆದ ಮಹತ್ವದ ಬೆಳವಣಿಗೆ ಒಂದರಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಅಶ್ವಥ್ ನಾರಾಯಣ್ ಒಂದೇ ವೇದಿಕೆ ಹಂಚಿಕೊಂಡು ಅಚ್ಚರಿ ಮೂಡಿಸಿದರು. ಮಾತ್ರವಲ್ಲ, ಇದೇ ವೇದಿಕೆ ಮೇಲೆ ಇಬ್ಬರು ನಾಯಕರಿಗೂ ಆದಿಚುಂಚನಗಿರಿಯ ಶ್ರೀಗಳು ಕಿವಿ ಮಾತು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಲ್ಲಿ ನಡೆದ ಕೆಂಪೇಗೌಡ ದಿನಾಚರಣೆಯ ವೇದಿಕೆ ಮೇಲೆ ನಿರ್ಮಲಾನಂದನಾಥ ಶ್ರೀಗಳು ಇಬ್ಬರಿಗೂ ದ್ವೇಷದ ರಾಜಕಾರಣ ಮಾಡಬೇಡಿ. ಒಬ್ಬರಿಗೊಬ್ಬರು ಪರಸ್ಪರ ವಾಕ್ಸಮರ ಮಾಡಿಕೊಳ್ಳಬೇಡಿ. ಪ್ರೀತಿಯಿಂದ ರಾಜಕಾರಣ ಮಾಡಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶ್ರೀಗಳು ಬುದ್ಧಿ ಮಾತು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಲು ಇಬ್ಬರು ನಾಯಕರು ನಿರಾಕರಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಏನಂದ್ರು..?

ನನ್ನ ಫ್ರೆಂಡ್‌ಗೆ ಹೇಳದೆ ಇನ್ಯಾರಿಗೆ ಹೇಳೋಕೆ ಸಾಧ್ಯ. ಚರಿತ್ರೆ ಗೊತ್ತಿಲ್ಲ ಅಂದ್ರೆ ಚರಿತ್ರೆ ಸೃಷ್ಟಿ ಮಾಡೋಕೆ ಸಾಧ್ಯವಿಲ್ಲ. ಇತಿಹಾಸ ಗೊತ್ತಾಗಬೇಕಾಲ್ಲ. ನಾನು 6ನೇ ಕ್ಲಾಸ್‌ಗೆ ಬಂದು ಎನ್‌ಪಿ‌ಎಸ್‌ನಲ್ಲಿ ಓದಿದ್ದೇನೆ. ಸುಮ್ಮನೇ ಬಂದಿದ್ದೀನಾ. ಕೆಲವೊಂದು ಸಂದರ್ಭಗಳಲ್ಲಿ ಗೊತ್ತಿಲ್ಲದೇ ಇರೋದನ್ನು ನೆನಪಿಸಬೇಕಾಗುತ್ತದೆ ಎಂದಿದ್ದಾರೆ.

ನಾನು ಯಾವುದೇ ವ್ಯಕ್ತಿಗತವಾಗಿ ಮಾತನಾಡಿಲ್ಲ. ನಾನು ದ್ವೇಷ ಮಾತನಾಡೋಕೆ ಬಂದಿಲ್ಲ. ನಾಡಿಗೆ ಒಳಿತು ಮಾಡಬೇಕು ಎಂದು ರಾಜಕೀಯಕ್ಕೆ ಬಂದಿದ್ದೇವೆ. ಅವರು ಹೇಳಿದ್ದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಷ್ಟೇ. ಸುಮ್ಮನೇ ರಾಜಕೀಯದಲ್ಲಿದ್ದರೆ ಆಗುತ್ತಾ? ಯಾವುದೇ ವೈಮನಸ್ಸು ಇಲ್ಲ ಅಂತಾ ಅಶ್ವಥ್ ನಾರಾಯಣ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ‘ದ್ವೇಷದ ರಾಜಕಾರಣ ಬೇಡ’: ಡಿ.ಕೆ.ಶಿವಕುಮಾರ್- ಡಾ.ಅಶ್ವಥ್ ನಾರಾಯಣ್​ ಮಧ್ಯೆ ಶ್ರೀಗಳಿಂದ ರಾಜೀ ಸಂಧಾನ..?

https://newsfirstlive.com/wp-content/uploads/2023/06/dks_ashwath.jpg

Load More