newsfirstkannada.com

Breaking: ‘ನಿಮ್ಮ ಬಾಯಿಗೆ ಬೀಗ ಹಾಕಿ, ಇಲ್ಲದಿದ್ರೆ..’ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ

Share :

Published June 29, 2024 at 11:16am

Update June 29, 2024 at 12:14pm

  ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಶಿವಕುಮಾರ್ ವಾರ್ನಿಂಗ್

  ‘ರಾಜಕಾರಣದ ಸುದ್ದಿಗೆ ನೀವು ಬರಲು ಹೋಗಬೇಡಿ’

  ಸ್ವಾಮೀಜಿಗಳಿಗೂ ಮನವಿ ಮಾಡಿಕೊಂಡ ಶಿವಕುಮಾರ್

ಬೆಂಗಳೂರು: ಸಿಎಂ, ಡಿಸಿಎಂ ವಿಚಾರವಾಗಿ ಬಹಿರಂಗ ಚರ್ಚೆ ಬೇಡ. ಪಕ್ಷವನ್ನು ಎಷ್ಟು ಕಷ್ಟಪಟ್ಟು ಅಧಿಕಾರಕ್ಕೆ ತಂದಿದ್ದೇವೆ. ನಿಮ್ಮ ಬಾಯಿಗೆ ಬೀಗ ಹಾಕಿ, ಇಲ್ಲದಿದ್ರೆ ಪಕ್ಷದಿಂದ ನೋಟಿಸ್ ಜಾರಿ ಮಾಡಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಪಕ್ಷದ ಶಾಸಕರು, ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಒಡೆದ ಹಲ್ಲಿನಿಂದ ಅಣ್ಣನ ಗುರುತು ಪತ್ತೆ ಹಚ್ಚಿದ ತಂಗಿ.. 18 ವರ್ಷದ ಬಳಿಕ ಸಹೋದರನ ಮರಳಿ ಪಡೆದ ಸಹೋದರಿ..!

ನನಗೆ ಯಾರ ರೆಕಮಂಡೇಶನ್ ಬೇಡ. ಆಶೀರ್ವಾದ ಸಾಕು. ರಾಜಕಾರಣದ ಸುದ್ದಿಗೆ ನೀವು ಬರಲು ಹೋಗಬೇಡಿ ಎಂದು ಸ್ವಾಮೀಜಿಗಳಿಗೆ ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ. ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುವೆ. ಚಂದ್ರಶೇಖರ್ ಸ್ವಾಮೀಜಿ ನನ್ನ ಮೇಲಿನ ಅಭಿಮಾನದಿಂದ ಮಾತನಾಡಿದ್ದಾರೆ. ನಿನ್ನೆ ನಾವೆಲ್ಲ, ಎಂಪಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಎಲ್ಲರೂ ಕೂಡ ಬಂದಿದ್ದರು, ಮುಕ್ತವಾಗಿ ಮಾತಾಡಿದ್ದೇವೆ ಎಂದರು.

ರಾಜ್ಯದಲ್ಲಿ ಯಾವ ಡಿಸಿಎಂ ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ನಾನು ಖರ್ಗೆ ಹಾಗೂ ಸಿದ್ದರಾಮಯ್ಯ ಕೂತು ಪಕ್ಷದ ಹಿತದೃಷ್ಟಿಯಿಂದ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಎಂಎಲ್ಎ ಕೂಡ ಮಾತಾಡುವ ಅವಶ್ಯಕತೆ ಇಲ್ಲ. ಎಐಸಿಸಿಯವರು, ನಾನೂ ವಿಧಿಯಿಲ್ಲದೇ ನೋಟಿಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​ನಲ್ಲಿ ಫೈನಲ್​ ಪಂದ್ಯ​.. ಟೀಂ ಇಂಡಿಯಾಗೆ ಕಾಡ್ತಿದೆ ಏಕಮಾತ್ರ ಚಿಂತೆ.. ಏನದು..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Breaking: ‘ನಿಮ್ಮ ಬಾಯಿಗೆ ಬೀಗ ಹಾಕಿ, ಇಲ್ಲದಿದ್ರೆ..’ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ

https://newsfirstlive.com/wp-content/uploads/2024/05/DK_SHIVAKUMAR_BBMP_1.jpg

Load More