VIDEO: ‘ಟೆಂಟಲ್ಲಿ ಬ್ಲೂ ಫಿಲ್ಮ್‌ ತೋರಿಸಿ ಜೀವನ ಮಾಡ್ತಿದ್ದ ಡಿ.ಕೆ ಶಿವಕುಮಾರ್’- ಹೆಚ್‌.ಡಿ ಕುಮಾರಸ್ವಾಮಿ

author-image
admin
Updated On
VIDEO: ‘ಟೆಂಟಲ್ಲಿ ಬ್ಲೂ ಫಿಲ್ಮ್‌ ತೋರಿಸಿ ಜೀವನ ಮಾಡ್ತಿದ್ದ ಡಿ.ಕೆ ಶಿವಕುಮಾರ್’- ಹೆಚ್‌.ಡಿ ಕುಮಾರಸ್ವಾಮಿ
Advertisment
  • ‘ಟೆಂಟಲ್ಲಿ ಬ್ಲೂ ಫಿಲ್ಮ್‌ ತೋರಿಸಿ ಜೀವನ ಮಾಡ್ತಿದ್ದ ಸಂಸ್ಕೃತಿ ಅವರದ್ದು’
  • ದೊಡ್ಡ ಆಲದಹಳ್ಳಿ ಸಾತನೂರಲ್ಲಿ 2 ಟೆಂಟ್ ಇದ್ವಲ್ಲಾ ಅಲ್ಲಿ ಬ್ಲೂ ಫಿಲ್ಮ್‌!
  • ನಾನು ಆ ರೀತಿಯ ಜೀವನ ಮಾಡಿಕೊಂಡು ಬಂದಿಲ್ಲ ಎಂದ ಹೆಚ್‌ಡಿಕೆ

ಚಿಕ್ಕಮಗಳೂರು: ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಡಿಕೆಶಿ ವಿರುದ್ಧ ಕೆಂಡಾಮಂಡಲರಾಗಿರೋ ಹೆಚ್‌ಡಿಕೆ ಇಂದು ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ‌ ಸಿಎಂ ಕುಮಾರಸ್ವಾಮಿ, ಕರೆಂಟ್ ಕಳ್ಳ ಎಂದು ಪೋಸ್ಟರ್‌ ರಿಲೀಸ್ ಮಾಡಿದ್ದಕ್ಕೆ ಗರಂ ಆದರು. ಏಕವಚನದಲ್ಲೇ ಡಿ.ಕೆ ಶಿವಕುಮಾರ್ ಅವರನ್ನ ತರಾಟೆ ತೆಗೆದುಕೊಂಡ ಹೆಚ್‌ಡಿಕೆ, ಟೆಂಟಲ್ಲಿ ಬ್ಲೂ ಫಿಲ್ಮ್‌ ತೋರಿಸಿ ಜೀವನ ಮಾಡ್ತಿದ್ದವರು ಅವರು. ಆ ಮನಸ್ಥಿತಿಯಲ್ಲಿರುವ ಅವನಿಗೆ ಇನ್ನೇನು ಬರುತ್ತೆ ಎಂದು ಕಿಡಿಕಾರಿದರು.


">November 19, 2023

ಕನಕಪುರದ ದೊಡ್ಡ ಆಲದಹಳ್ಳಿ ಎಂದು ಡಿ.ಕೆ ಶಿವಕುಮಾರ್ ಅವರ ಹೆಸರನ್ನೇ ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು ಸಾತನೂರಲ್ಲಿ 2 ಟೆಂಟ್ ಇದ್ವಲ್ಲಾ. ಮಲೆಯಾಳಂ ಬ್ಲೂ ಸಿನಿಮಾಗಳ ರೀಲ್ ಜೋಡಿಸುತ್ತಿದ್ದವರು ಅವರು. ನಾನು ಆ ರೀತಿಯ ಜೀವನ ಮಾಡಿಕೊಂಡು ಬಂದಿಲ್ಲ. ಅವರು ಬಂದಿರುವುದೇ ಆ ರೀತಿಯ ಸಂಸ್ಕೃತಿಯಲ್ಲಿ. ಅಂತವರನ್ನ ಈ ರಾಜ್ಯದ ಜನ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ನಾಯಕರು ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಆ ತರಹ ಪೋಸ್ಟರ್ ಪ್ರಿಪೇರ್ ಮಾಡಿಸೋದು ನಮಗೂ ಗೊತ್ತಿದೆ ಎಂದು ಟಾಂಗ್ ಕೊಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment