newsfirstkannada.com

CM ಕನಸು ನನಸಿಗೆ ಡಿಕೆಶಿ​​ ನಡೆ ತೀವ್ರ ಕುತೂಹಲ.. ಚನ್ನಪಟ್ಟಣ ವಿಚಾರದಲ್ಲಿ ಕಾಂಗ್ರೆಸ್ ಗೇಮ್ ಚೇಂಜ್..!

Share :

Published June 19, 2024 at 7:19am

Update June 19, 2024 at 12:13pm

    ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ?

    ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು ತೀರಿಸಿಕೊಳ್ಳಲು ತಂತ್ರ

    ನಾನು ಸುಮ್ಮನೆ ಕೂರುವ ಮಗ ಅಲ್ಲ ಎಂದಿದ್ದ ಡಿಸಿಎಂ ಶಿವಕುಮಾರ್

ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ ಅನ್ನೋದು ಭಾರಿ ಕುತೂಹಲಕ್ಕೆ ಕಾರಣ ಆಗಿದೆ. ಡಿ.ಕೆ.ಸುರೇಶ್ ಬದಲಿಗೆ ಡಿಸಿಎಂ ಡಿಕೆಶಿಯೇ ಅಖಾಡಕ್ಕಿಳಿಯುವ ಮಾತು ಕೇಳಿಬಂದಿದೆ. ಚನ್ನಪಟ್ಟಣದಿಂದ ಗೆದ್ದು ಸಿಎಂ ಕನಸನ್ನು ನನಸು ಮಾಡಿಕೊಳ್ಳುವ ಪ್ಲಾನ್ ನಡೆದಿದ್ದು ಬೆಂಗಳೂರು ಗ್ರಾಮಾಂತರ ಸೋಲಿನ ಸೇಡನ್ನ ತೀರಿಸಿಕೊಳ್ಳಲು ಡಿಕೆ ಬ್ರದರ್ಸ್​ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರ ಸೋಲು ಡಿಕೆ ಬ್ರದರ್ಸ್​ ಕಂಗೆಡಿಸಿದೆ.. ಸೋತ ನೆಲದಲ್ಲೇ ಪುಟಿದೇಳುವ ಛಲ ಹುಟ್ಟಿಸಿದೆ.. ಚನ್ನಪಟ್ಟಣದಲ್ಲಿ ಅಚ್ಚರಿ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಗೆಲ್ಲಿಸುವ ರಣತಂತ್ರ ಹೆಣೆದಿದ್ದು ತಮ್ಮನ ಬದಲಿಗೆ ಅಣ್ಣ ಡಿಕೆಶಿಯೇ ಅಭ್ಯರ್ಥಿ ಆಗ್ತಿರುವ ಗುಸುಗುಸು ಕೇಳಿಬಂದಿದೆ.

ಇದನ್ನೂ ಓದಿ:ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ದರ್ಶನ್‌ ನಡೆ ನುಡಿಯಲ್ಲಿ ಭಾರೀ ಬದಲಾವಣೆ.. ಕೊನೆಗೂ ಬಂತಾ ಬುದ್ಧಿ..?

ಕನಕಪುರ ತ್ಯಜಿಸಿ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಲಿಡ್ತಾರಾ ಡಿಕೆಶಿ?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್​ಗೆ ಅನಿರೀಕ್ಷಿತ ಸೋಲಿನ ಆಘಾತ ಆಗಿದೆ. ತವರು ಜಿಲ್ಲೆಯಲ್ಲೇ ಸೋತಿರುವ ಡಿಕೆ ಬ್ರದರ್ಸ್​​ರನ್ನು ಬಡಿದೆಬ್ಬಿಸಿದೆ. ಹೀಗಾಗಿ ಸೋಲಿನ ಸೇಡು ತೀರಿಸಿಕೊಳ್ಳಲು ಡಿಕೆ ಬ್ರದರ್ಸ್ ರಣತಂತ್ರ ಹೆಣೆದಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಉಪಚುನಾವಣೆಗೆ ಮುಂದಿನ ತಿಂಗಳು ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳುವ ಪ್ಲಾನ್ ನಡೆದಿದೆ. ಈ ಮೊದಲು ಚನ್ನಪಟ್ಟಣ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಕಣಕ್ಕಿಳಿಯುವ ಬಗ್ಗೆ ಮಾತು ಕೇಳಿಬಂದಿತ್ತು.

ಇದನ್ನೂ ಓದಿ:ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

ಆದ್ರೆ ಚನ್ನಪಟ್ಟಣದಲ್ಲಿ ಸ್ಪರ್ಧಿಸಲ್ಲ ಅಂತ ಡಿ ಕೆ. ಸುರೇಶ್ ಹೇಳಿದ್ದು ಕನಕಪುರ ತ್ಯಜಿಸಿ ಡಿಸಿಎಂ ಡಿಕೆಶಿಯೇ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಲಿಡ್ತಾರಾ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ. ಚನ್ನಪಟ್ಟಣದಲ್ಲಿ ಗೆದ್ದರೆ ಸಿಎಂ ಆಗಬಹುದೆಂಬ ನಂಬಿಕೆ ಇದ್ದು ಡಿಕೆಶಿ ಕ್ಷೇತ್ರ ಬದಲಿಸುವ ಬಗ್ಗೆ ಕೈಪಡೆಯಲ್ಲಿ ಗುಸುಗುಸು ಶುರುವಾಗಿದೆ. ಚನ್ನಪಟ್ಟಣ ಗೆದ್ದರೆ, ಕನಕಪುರ ಕ್ಷೇತ್ರವನ್ನ ಸಹೋದರ ಡಿ.ಕೆ ಸುರೇಶ್​ಗೆ ತ್ಯಾಗ ಮಾಡಲಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ಬೆನ್ನಲ್ಲೇ ಇವತ್ತು ಇಡೀ ದಿನ ಡಿಸಿಎಂ ಡಿಕೆಶಿ ಚನ್ನಪಟ್ಟಣ ಪ್ರವಾಸ ಕೈಗೊಳ್ಳಲಿದ್ದಾರೆ. ಚನ್ನಪಟ್ಟಣದ 12ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಲಿರುವ ಡಿಕೆಶಿ, ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲೂ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:RCBಗೆ ದುಬಾರಿ ಆಟಗಾರ.. ವಿಶ್ವಕಪ್​​ನಲ್ಲಿ 4 ಮೇಡಿನ್ ಓವರ್​ ಮಾಡಿದ ಸ್ಟಾರ್..!

ಚನ್ನಪಟ್ಟಣದಲ್ಲಿ ಡಿಕೆಶಿ ಅಖಾಡಕ್ಕಿಳಿಯುವ ಮಾತು ಕುತೂಹಲ ಮೂಡಿಸಿದೆ. ಕೆಲ ದಿನಗಳ ಹಿಂದೆ ಚನ್ನಪಟ್ಟಣ ಸ್ಪರ್ಧೆ ಬಗ್ಗೆ ಮಾತನಾಡಿದ್ದ ಡಿಕೆಶಿ, ನಾನು ಸುಮ್ಮನೆ ಕೂರುವ ಮಗ ಅಲ್ಲ. ಸದ್ಯ ಸೋತಿದ್ದೀವಿ, ಸ್ವಲ್ಪ ಸುಧಾರಿಸಿಕೊಳ್ಳಬೇಕು ಎಂದಿದ್ದರು. ಡಿ.ಕೆ ಸುರೇಶ್‌ ಚನ್ನಪಟ್ಟಣದಿಂದ ಸ್ಪರ್ಧಿಸುವಂತೆ ಒಕ್ಕಲಿಗ ಶಾಸಕರು, ಸಚಿವರು ಒತ್ತಡ ಹಾಕಿದ್ದಾರೆ. ಆದ್ರೀಗ ಡಿಕೆಶಿ ನಡೆ ಬಗ್ಗೆ ಕುತೂಹಲ ಹೆಚ್ಚಿಸಿದೆ. ಒಟ್ಟಾರೆ, ಏನೇ ಆದ್ರೂ ಶತಾಯಗತಾಯ ಚನ್ನಪಟ್ಟಣ ಕಬ್ಜ ಮಾಡಲು ಹೊಸ ಆಟ ರಣರೋಚಕ ಫೈಟ್​ಗೆ ನಾಂದಿ ಹಾಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ವರದಿ: ಹರೀಶ್ ಕಾಕೋಳು 

ಇದನ್ನೂ ಓದಿ:ಎಲ್ಲೆಲ್ಲೂ ತಂಪೆರೆದ ಮಳೆರಾಯ.. ರಾಜ್ಯದೆಲ್ಲೆಡೆ ಮಳೆ, ಮಳೆ.. ಎಲ್ಲಿ ಏನೆಲ್ಲ ಆಯ್ತು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM ಕನಸು ನನಸಿಗೆ ಡಿಕೆಶಿ​​ ನಡೆ ತೀವ್ರ ಕುತೂಹಲ.. ಚನ್ನಪಟ್ಟಣ ವಿಚಾರದಲ್ಲಿ ಕಾಂಗ್ರೆಸ್ ಗೇಮ್ ಚೇಂಜ್..!

https://newsfirstlive.com/wp-content/uploads/2024/06/RAHUL-DK-SHIVAKUMAR.jpg

Load More