VIDEO: ತೆಲಂಗಾಣದಲ್ಲಿ ಚುನಾವಣಾ ಅಸ್ತ್ರವಾದ ಡಿಸಿಎಂ ಡಿ.ಕೆ ಶಿವಕುಮಾರ್ ಒಂದು ಡೈಲಾಗ್‌; ಏನದು?

author-image
admin
Updated On
VIDEO: ತೆಲಂಗಾಣದಲ್ಲಿ ಚುನಾವಣಾ ಅಸ್ತ್ರವಾದ ಡಿಸಿಎಂ ಡಿ.ಕೆ ಶಿವಕುಮಾರ್ ಒಂದು ಡೈಲಾಗ್‌; ಏನದು?
Advertisment
  • ಡಿ.ಕೆ ಶಿವಕುಮಾರ್ ಅವರನ್ನ ತರಾಟೆಗೆ ತೆಗೆದುಕೊಂಡ ಸಿಎಂ ಕೆಸಿಆರ್‌
  • ತೆಲಂಗಾಣದಲ್ಲಿ ನಾವು ದಿನದ 24 ಗಂಟೆ ವಿದ್ಯುತ್ ನೀಡುತ್ತಿದ್ದೇವೆ
  • ಬಿಆರ್‌ಎಸ್ ನಾಯಕರಿಗೆ ಕೈ ನಾಯಕ ರೇವಂತ್ ರೆಡ್ಡಿ ಪ್ರತಿ ಸವಾಲು

ಹೈದರಾಬಾದ್‌: ತೆಲಂಗಾಣ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ವರ್ಸಸ್ BRS ಪಕ್ಷದ ಫೈಟ್ ತಾರಕಕ್ಕೇರಿದೆ. ಸಿಎಂ ಕೆ.ಚಂದ್ರಶೇಖರ್ ರಾವ್ ಅವರನ್ನ ಸೋಲಿಸಲು ಜಿದ್ದಿಗೆ ಬಿದ್ದಿರೋ ಕಾಂಗ್ರೆಸ್ ನಾಯಕರು ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಈ ಚುನಾವಣಾ ಪ್ರಚಾರದ ಮಧ್ಯೆ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಒಂದು ಮಾತು ತೀವ್ರ ಸಂಚಲನ ಸೃಷ್ಟಿಸಿದೆ. ಸಿಎಂ ಕೆಸಿಆರ್ ಡಿ.ಕೆ ಶಿವಕುಮಾರ್ ಅವರ ಡೈಲಾಗ್‌ ಅನ್ನೇ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಇಂದು ಗಜ್ವಲ್ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ ಕೆಸಿಆರ್, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಪ್ರಚಾರದ ವೇಳೆ ಡಿಕೆಶಿ ಆಡಿದ ಒಂದು ಮಾತಿಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ.

publive-image

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಬರಗಾಲದ ಪರಿಸ್ಥಿತಿಯಲ್ಲೂ ಕರ್ನಾಟಕದಲ್ಲಿ ರೈತರಿಗೆ 5 ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದೇವೆ ಎಂದಿದ್ದರು. ಡಿಕೆಶಿ 5 ಗಂಟೆ ವಿದ್ಯುತ್‌ ಬಗ್ಗೆ ಹೇಳಿಕೆ ನೀಡಿರುವ ವಿಡಿಯೋ ತೆಲಂಗಾಣದಲ್ಲಿ ವೈರಲ್ ಆಗಿದೆ.


">October 28, 2023

publive-image

ಡಿ.ಕೆ ಶಿವಕುಮಾರ್ ಅವರ 5 ಗಂಟೆ ವಿದ್ಯುತ್ ನೀಡುವ ಹೇಳಿಕೆಯನ್ನೇ ಬಿಆರ್‌ಎಸ್ ಪಕ್ಷ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿಸಿದೆ. ಇದೇ ವಿಚಾರವನ್ನು ಪ್ರಸ್ತಾಪ ಮಾಡಿರುವ ಸಿಎಂ ಕೆಸಿಆರ್‌, ಕರ್ನಾಟಕದ ಡಿಸಿಎಂ ರೈತರಿಗೆ 5 ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ, ತೆಲಂಗಾಣದಲ್ಲಿ ನಾವು ದಿನದ 24 ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಟೀಕಿಸಿದ್ದಾರೆ.

publive-image

ತೆಲಂಗಾಣ ಸಿಎಂ ಅವರ ಈ ಹೇಳಿಕೆಯನ್ನ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಅವರು ಖಂಡಿಸಿದ್ದಾರೆ. ತೆಲಂಗಾಣದಲ್ಲಿ ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಅನ್ನೋದು ಸುಳ್ಳು ಪ್ರಚಾರ. ದಿನದ 24 ಗಂಟೆ ವಿದ್ಯುತ್ ಪೂರೈಕೆ ಸಾಬೀತುಪಡಿಸಿದರೆ ನಾನು ಚುನಾವಣೆಯಲ್ಲಿ ನಾಮಪತ್ರವನ್ನೇ ಸಲ್ಲಿಸಲ್ಲ ಎಂದು ಬಿಆರ್‌ಎಸ್ ನಾಯಕರಿಗೆ ರೇವಂತ್ ರೆಡ್ಡಿ ಅವರು ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment