ಕೆಪಿಸಿಸಿ ಅಧ್ಯಕ್ಷ ಗಾದಿ ರೇಸ್​ಗೆ ಮತ್ತೊಬ್ಬ ನಾಯಕನ ಎಂಟ್ರಿ; ಡಿಕೆ ಬ್ರದರ್ಸ್ ದೆಹಲಿ ಭೇಟಿ ಭಾರೀ ಕುತೂಹಲ..!

author-image
Ganesh
Updated On
ಕೆಪಿಸಿಸಿ ಅಧ್ಯಕ್ಷ ಗಾದಿ ರೇಸ್​ಗೆ ಮತ್ತೊಬ್ಬ ನಾಯಕನ ಎಂಟ್ರಿ; ಡಿಕೆ ಬ್ರದರ್ಸ್ ದೆಹಲಿ ಭೇಟಿ ಭಾರೀ ಕುತೂಹಲ..!
Advertisment
  • ಮೂರು ಕ್ಷೇತ್ರಗಳ ಬೈ-ಎಲೆಕ್ಷನ್​ನಲ್ಲಿ ಭರ್ಜರಿ ಕಮಾಲ್
  • ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಸುದ್ದಿ ಸದ್ದು
  • ಅಧ್ಯಕ್ಷ ಸ್ಥಾನದ ಆಸೆ ಬಗ್ಗೆ ಜಾರಕಿಹೊಳಿ ಹೇಳಿದ್ದೇನು?

ಬೆಂಗಳೂರು: ಮೂರು ಕ್ಷೇತ್ರಗಳ ಬೈ-ಎಲೆಕ್ಷನ್​ನಲ್ಲಿ ಭರ್ಜರಿ ಕಮಾಲ್​ ಮಾಡಿರುವ ಕಾಂಗ್ರೆಸ್​ ರಣೋತ್ಸಾಹದಲ್ಲಿದೆ. ಬೆನ್ನಲ್ಲೇ ಸಂಪುಟ ಪುನಾರಚನೆ ಸುದ್ದಿ ಸದ್ದು ಮಾಡುತ್ತಿದೆ. ಜೊತೆಗೆ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಸ್ಥಾನದ ಬದಲಾವಣೆಯೂ ಆಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​ ನಾಯಕರ ನಿಗೂಢ ನಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ

ಕಳೆದ ಎರಡು ದಿನಗಳಿಂದ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ದೆಹಲಿಗೆ ಲಗ್ಗೆ ಇಟ್ಟಿದ್ದಾರೆ. ಸಚಿವ ಸಂಪುಟ ಪುನಾರಚನೆಯ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕೂಡ ದೊಡ್ಡ ಮೊಟ್ಟದಲ್ಲಿ ಸುದ್ದಿಯಾಗುತ್ತಿರುವ ಹೊತ್ತಿನಲ್ಲೇ ರೇಸ್​ನಲ್ಲಿ ಡಿಕೆ ಸುರೇಶ್ ಕೂಡ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ದೆಹಲಿಯಲ್ಲಿ ಸಿಎಂ, ಡಿಸಿಎಂ; ಸಂಪುಟ ಸರ್ಜರಿ ಜೊತೆಗೆ KPCC ಅಧ್ಯಕ್ಷರನ್ನು ಬದಲಾವಣೆ ಮಾಡ್ತಾರಾ?

ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿರೋ ಡಿ.ಕೆ ಸಹೋದರರು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸ್ತಿದ್ದಾರೆ. ಪಕ್ಷದಲ್ಲಿ ತಮ್ಮ ಹಿಡಿತ ಬೇರೆಯವರಿಗೆ ಬಿಟ್ಟುಕೊಡಲು ಡಿಕೆ ಶಿವಕುಮಾರ್ ಒಪ್ಪುತ್ತಿಲ್ಲ. ಅದೇ ಕಾರಣಕ್ಕೆ ಸಹೋದರ ಸುರೇಶ್​ಗೆ ಪಕ್ಷದಲ್ಲಿ ಸ್ಥಾನ ಕೊಡಿಸಲು ಪ್ರಯತ್ನ ಮಾಡ್ತಿದ್ದಾರೆ ಎನ್ನಲಾಗಿದೆ. ಒಟ್ಟು 4 ಬಾರಿ ಸಂಸದರಾಗಿದ್ದ ಅನುಭವವೇ ಡಿ.ಕೆ ಸುರೇಶ್​ಗೆ ಬಲ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಹೈಕಮಾಂಡ್ ನಿಲುವೇನು? ಅನ್ನೋದ್ರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.

ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್​​ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಮೊದಲಿನಿಂದಲೂ ಚರ್ಚೆ ಇದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಿಎಂ ಅವರಿಗೆ ಈ ಅಧಿಕಾರ ಇದೆ. ನಮಗೆ ಯಾವುದೇ ಅಧಿಕಾರ ಇಲ್ಲವೇ ಇಲ್ಲ. ನಾವು ಕೇಳಿದ್ದೇವೆ. ಆದರೆ ಯಾವಾಗ ಮಾಡುತ್ತಾರೆಂದು ನಮಗೆ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಯೋಗೇಶ್ವರ್​ಗೆ ಗೆಲುವು.. ಜಮೀರ್ ಹೇಳಿಕೆಯ ಚರ್ಚೆ ಹಿಂದಿನ ಸತ್ಯ ಬಿಚ್ಚಿಟ್ಟ ಡಿಕೆ ಸುರೇಶ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment