newsfirstkannada.com

ನಾನು ದೇಶದ್ರೋಹ ಹೇಳಿಕೆ ನೀಡಿದ್ರೆ ಜೈಲಿಗೆ ಹಾಕಲಿ.. ಕಾಂಗ್ರೆಸ್​​ ಸಂಸದ ಡಿ.ಕೆ ಸುರೇಶ್​​

Share :

Published February 1, 2024 at 10:14pm

Update February 1, 2024 at 10:15pm

    ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿರೋ ಭಾರತ ವಿಭಜನೆ ವಿವಾದ

    ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಸಂಸದ ಡಿ.ಕೆ ಸುರೇಶ್​

    ನನ್ನ ಹೇಳಿಕೆಯನ್ನು ಬಿಜೆಪಿಯವರೇ ತಿರುಚಿದ್ದಾರೆ ಎಂದು ಆಕ್ರೋಶ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದ ಮಧ್ಯಂತರ ಬಜೆಟ್‌ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್​​ ಸದ ಡಿ.ಕೆ ಸುರೇಶ್‌, ಭಾರತ ವಿಭಜನೆ ಬಗ್ಗೆ ಮಾತನಾಡಿದ್ದರು. ಇದಕ್ಕೀಗ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಈ ಬಗ್ಗೆ ಡಿ.ಕೆ ಸುರೇಶ್​ ಸ್ಪಷ್ಟನೆ ನೀಡಿದ್ದಾರೆ.

ನಾನು ದೇಶ ವಿಭಜನೆ ಬಗ್ಗೆ ಮಾತಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಭಾರತೀಯತೆನ್ನು ನಾನು ಪ್ರಶ್ನೆ ಮಾಡಿದ್ದೇನೆ, ಯಾವುದೇ ದುರುದ್ದೇಶದಿಂದ ಅಲ್ಲವೇ ಅಲ್ಲ. ನನ್ನದು ದೇಶ ವಿರೋಧಿ ಹೇಳಿಕೆ ಆದರೆ, ಜೈಲಿಗೆ ಹಾಕಲಿ ಎಂದಿದ್ದಾರೆ ಡಿ.ಕೆ ಸುರೇಶ್​​.

ಇನ್ನು, ನಾನು ತಪ್ಪು ಮಾತಾಡಿಲ್ಲ. ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದೆ. ಕನ್ನಡ ಭಾವುಟಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ಕೊಟ್ಟಿಲ್ಲ. ನೀರಾವರಿ, ತೆರಿಗೆ, ಮೇಕೆದಾಟು, ಕೃಷ್ಣಾ, ಮಹಾದಾಯಿ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದರು.

ಕನ್ನಡದ ಪರ ಮಾತಾಡಿದ್ದೇನೆ ಎಂದ ಸುರೇಶ್​​

ಬಿಜೆಪಿಯರೇ ದೇಶ ವಿಭಜನೆ ಬಗ್ಗೆ ಮಾತಾಡಿದ್ದಾರೆ. ನಾನು ಕನ್ನಡದ ಪರ ಮಾತಾಡಿದ್ದೇನೆ. ಅನುದಾನ, ರಾಜ್ಯದ ಪಾಲು ಕೊಡಿ ಎಂದು ಪ್ರಶ್ನಿಸಿದ್ದೇನೆ. ಬಿಜೆಪಿಗೆ ಮಾಡೋಕೆ ಕೆಲಸ ಇಲ್ಲ ಎಂದು ಆಕ್ರೋಶ ಹೊರಹಾಕಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ದೇಶದ್ರೋಹ ಹೇಳಿಕೆ ನೀಡಿದ್ರೆ ಜೈಲಿಗೆ ಹಾಕಲಿ.. ಕಾಂಗ್ರೆಸ್​​ ಸಂಸದ ಡಿ.ಕೆ ಸುರೇಶ್​​

https://newsfirstlive.com/wp-content/uploads/2024/02/DK-Suresh.jpg

Load More