ಡಿ.ಕೆ ಸುರೇಶ್​ಗೆ ನಕಲಿ ತಂಗಿ ಸಂಕಷ್ಟ.. ಇಂದು ಮಹತ್ವದ ಬೆಳವಣಿಗೆ ಸಾಧ್ಯತೆ..!

author-image
Ganesh
Updated On
ಡಿ.ಕೆ ಸುರೇಶ್​ಗೆ ನಕಲಿ ತಂಗಿ ಸಂಕಷ್ಟ.. ಇಂದು ಮಹತ್ವದ ಬೆಳವಣಿಗೆ ಸಾಧ್ಯತೆ..!
Advertisment
  • ಡಿ.ಕೆ.ಸುರೇಶ್​ಗೆ ಉರುಳಾಗುತ್ತಾ ಐಶ್ವರ್ಯಗೌಡ ಕೇಸ್?​
  • ಇ.ಡಿ ವಿಚಾರಣೆಗೆ ಹಾಜರಾಗಲಿರುವ ಡಿ.ಕೆ. ಸುರೇಶ್
  • ಡಿ.ಕೆ. ಸುರೇಶ್​ಗೆ ಸಮನ್ಸ್ ಜಾರಿ ಮಾಡಿರುವ ಇ.ಡಿ

ಮಾಜಿ ಸಂಸದ ಡಿ.ಕೆ.ಸುರೇಶ್​​ಗೆ ಜಾರಿ ನಿರ್ದೇಶನಾಲಯದಿಂದ ಸಂಕಷ್ಟ ಎದುರಾಗಿದೆ. ಬಂಗಾರಿ ಐಶ್ವರ್ಯಾ ಗೌಡಳ ಕೋಟಿ, ಕೋಟಿ ವಂಚನೆ ಪ್ರಕರಣದಲ್ಲಿ ED ನೋಟಿಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ಇಡಿ ಅಧಿಕಾರಿಗಳು ಜೂನ್ 19ರಂದು ಡಿ.ಕೆ.ಸುರೇಶ್​ಗೆ ಇವತ್ತು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದ್ದಾರೆ. ಅಂತೆಯೇ ಬೆಳಗ್ಗೆ 11 ಗಂಟೆಗೆ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಹಾಜರಾಗುವ ಸಾಧ್ಯತೆ ಇದೆ. ನಾನು ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಐಶ್ವರ್ಯ ಗೌಡ ಕೋಟಿ ಕೋಟಿ ವಂಚನೆ ಮಾಡಿದ್ದಾಳೆ ಎಂಬ ಆರೋಪ ಇದೆ.

ಇದನ್ನೂ ಓದಿ: ಎತ್ತಿನ ಹೊಳೆ ಯೋಜನಾ ವೆಚ್ಚ ಡಬಲ್.. ಪದೇ ಪದೆ ಕಾಮಗಾರಿಗೆ ಡೆಡ್​ಲೈನ್ ಕೊಡ್ತಿದ್ದರೂ ವಿಳಂಬ ಆಗ್ತಿರೋದ್ಯಾಕೆ..?

ಈ ಸಂಬಂಧ ಚಂದ್ರಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರ್‌.ಆರ್‌.ನಗರ ಪೊಲೀಸ್‌ ಠಾಣೆಯಲ್ಲೂ ದೂರು ದಾಖಲಾಗಿತ್ತು. ಐಶ್ವರ್ಯ ಗೌಡ ಜೊತೆಗೆ ಡಿ.ಕೆ.ಸುರೇಶ್​ಗೆ ಆರ್ಥಿಕ ವ್ಯವಹಾರಗಳ ಸಂಬಂಧ ಇದೆಯಾ ಎಂಬ ಅನುಮಾನ EDಗೆ ಇದೆ. ಹೀಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಸುರೇಶ್, ನಾನು ಯಾವುದೇ ಅಕೌಂಟ್ ಟ್ರಾನ್ಸಾಕ್ಷನ್ ನಡೆಸಿರಲಿಲ್ಲ. ಅವರು ನಮ್ಮ ಕ್ಷೇತ್ರದವರು. ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಎನ್ನುವ ಹೆಸರಲ್ಲಿ ಹೀಗೆಲ್ಲ ಮಾಡಿದ್ದಾರೆಂಬುದು ತಿಳಿದ ಕೂಡಲೇ ಸ್ವತಃ ನಾನೇ ದೂರು ಕೊಟ್ಟಿದ್ದೇನೆ. ಇ.ಡಿ. 7 ರಿಂದ 8 ದಾಖಲೆಗಳನ್ನು ಕೇಳಿದೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಅದನ್ನ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿ ಪ್ರವಾಸದಲ್ಲಿ ಸಿದ್ದರಾಮಯ್ಯ ರಾಷ್ಟ್ರಪತಿಗಳ ಭೇಟಿ ಆಗಲು ನಿರ್ಧರಿಸಿದ್ದು ಏಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment