newsfirstkannada.com

‘ಪಾಕಿಸ್ತಾನಕ್ಕೆ ಬಳೆ ತೊಡಿಸೋಣ ಬಿಡಣ್ಣ’- ಫಾರೂಕ್‌ ಅಬ್ದುಲ್ಲಾಗೆ ಪ್ರಧಾನಿ ಮೋದಿ ಟಾಂಗ್​!

Share :

Published May 13, 2024 at 10:26pm

    ಪ್ರಧಾನಿ ನರೇಂದ್ರ ಮೋದಿ ಲೋಕಸಂಚಾರ ಅದ್ಧೂರಿ ಮತಪ್ರಚಾರ

    ಭಾರತದ ವಿರುದ್ಧ ಮಾತನಾಡಲು ಇಂಡಿ ಮೈತ್ರಿ ಕೂಟ ಸುಪಾರಿ

    ಅಬ್ದುಲ್ಲಾ, ಮಣಿಶಂಕರ್‌ ಅಯ್ಯರ್​, ರೇವಂತ್​ ರೆಡ್ಡಿ ವಿರುದ್ಧ ಕಿಡಿ

ಬಿಹಾರದ ಪಾಟ್ನಾ ಸಾಹೀಬ್ ಗುರುದ್ವಾರದಲ್ಲಿ ಮೋದಿ ಇವತ್ತು ಭಿನ್ನವಾಗಿ ಕಾಣಿಸಿದ್ರು. ಸಿಖ್ಖ್​ರ ಟರ್ಬನ್​​ ಧರಿಸಿದ ಲಂಗರ್ ಸೇವೆ ನೆರವೇರಿಸಿದ್ರು. ಗುರುದ್ವಾರದಲ್ಲಿದ್ದ ಜನರಿಗೆ ಬೆಳಗಿನ ತಿಂಡಿ ಬಡಿಸಿ ಧನ್ಯತಾ ಭಾವದಲ್ಲಿ ಮುಳುಗಿದ್ರು. ಇತ್ತ, ಮುಜಫ್ಫರ್​​ಪುರದಲ್ಲಿ ವಿಪಕ್ಷಗಳ ಪಾಕಿಸ್ತಾನ ಮತ್ತು ಅಣುಬಾಂಬ್​ ಗುಣಗಾನವನ್ನೇ ನಮೋ ಅಸ್ತ್ರವಾಗಿಸಿದ್ರು. ಇದು ಪಾಟ್ನಾದಲ್ಲಿನ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರ.

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

ಇದೇ ಗುರುದ್ವಾರಕ್ಕೆ ಪ್ರಧಾನಿ ಭೇಟಿ ನೀಡಿದ್ದರು. 1666ರಲ್ಲಿ ಪಾಟ್ನಾದಲ್ಲಿ ಜನಿಸಿದ ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್​ರು ಆರಂಭಿಕ ದಿನಗಳನ್ನ ಕಳೆದ ಸ್ಥಳ. ಇದೇ ಗುರುದ್ವಾರಕ್ಕೆ ಭೇಟಿ ನೀಡಿದ ಮೋದಿ, ಕೇಸರಿ ಬಣ್ಣದ ಸಿಖ್ ಪೇಟ ಧರಿಸಿ ಮಿಂಚಿದ್ರು. ಅಂದ್ಹಾಗೆ ಸಿಖ್ಖ್​​ ಧರ್ಮದಲ್ಲಿ ಇದನ್ನ ಲಂಗರ್ ಸೇವೆ ಅಂತ ಕರೀತಾರೆ. ಸಿಖ್ಖ್ ಧರ್ಮದಲ್ಲಿ ಲಂಗರ್ ಸೇವೆಯು ಐದು ತಖ್ತ್​ಗಳಲ್ಲಿ ಒಂದು ಪರಿಗಣಿಸಲಾಗುತ್ತೆ. ಇದೇ ಸೇವೆಯನ್ನ ಪ್ರಧಾನಿ ಮೋದಿ ನೆರವೇರಿಸಿದ್ರು. ಗುರುದ್ವಾರದ ಅಡುಗೆ ಹಾಲ್‌ಗೆ ತೆರಳಿದ ಅವರು, ಅಲ್ಲದೆ ಅಡುಗೆ ಕೋಣೆಯಲ್ಲಿ ದಾಲ್ ಹಾಗೂ ಇತರೆ ಖಾದ್ಯ ತಯಾರಿಸುವ ಕಾರ್ಯದಲ್ಲಿಯೂ ನೆರವಾದ್ರು. ಚಪಾತಿ ಕೂಡ ಲಟ್ಟಿಸಿ ಗಮನ ಸೆಳೆದ್ರು. ಬಳಿಕ ಸ್ಟೀಲ್​ ಬಕೆಟ್‌ಗೆ ಆಹಾರ ಸರ್ವ ಮಾಡ್ಕೊಂಡ್ರು. ಬಳಿಕ ನೆಲದ ಮೇಲೆ ಕುಳಿತಿರುವ ನೂರಾರು ಮಂದಿಗೆ ಬೆಳಗಿನ ತಿಂಡಿ ಬಡಿಸುವ ಮೂಲಕ ಪ್ರಧಾನಿ ಮೋದಿ ಸಹ ಇದೇ ಲಂಗರ್ ಸೇವೆ ನೆರವೇರಿಸಿದ್ದಾರೆ.

ಇನ್ನು, ಪಿಒಕೆ ಮರಳಿ ಪಡೆಯುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಘೋಷಣೆ ಬಗ್ಗೆ ಮಾತ್ನಾಡಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಫಾರೂಕ್‌ ಅಬ್ದುಲ್ಲಾ, ಪಾಕಿಸ್ತಾನದವರೇನೂ ಬಳೆ ತೊಟ್ಟು ಕುಳಿತಿಲ್ಲ. ಅವರಲ್ಲಿ ಆಟೋಮಿಕ್‌ ಬಾಂಬ್‌ಗಳಿವೆ ಅನ್ನೋ ಹೇಳಿಕೆಗೆ ಮುಜಫ್ಫರ್‌ಪುರದಲ್ಲಿ ಮೋದಿ ತೀಕ್ಷ್ಣ ತಿರುಗೇಟು ಕೊಟ್ರು.

ಪಾಕಿಸ್ತಾನದವರು ಏನೂ ಬಳೆ ತೊಟ್ಟಿಲ್ಲ ಅಂತಾರೆ, ಅಯ್ಯೋ ಅಣ್ಣಾ ಬಳೇ ಹಾಕಿಸೋಣ ಬಿಡಿ. ಈಗ ಪಾಕಿಸ್ತಾನವರಿಗೆ ಗೋಧಿ ಹಿಟ್ಟೂ ಬೇಕು, ಅವರ ಹತ್ತಿರ ವಿದ್ಯುತ್‌ ಶಕ್ತಿಯೂ ಇಲ್ಲ, ನಮಗೆ ಗೊತ್ತಿಲ್ಲ. ಅವರ ಹತ್ರ ಬಳೆಗೂ ಬರ ಇದೇಂತ ಈಗ ಗೊತ್ತಾಯ್ತು.
– ನರೇಂದ್ರ ಮೋದಿ, ಪ್ರಧಾನಮಂತ್ರಿ

ಇನ್ನು, ಸಂಜೆ ವಾರಾಣಸಿಗೆ ಪ್ರವೇಶ ಮಾಡಿದ ಪ್ರಧಾನಿ ಮೋದಿ, ನಾಳೆ ಮೂರನೇ ಬಾರಿಗೆ ವಿಶ್ವನಾಥನ ಸನ್ನಿಧಿಯಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪಾಕಿಸ್ತಾನಕ್ಕೆ ಬಳೆ ತೊಡಿಸೋಣ ಬಿಡಣ್ಣ’- ಫಾರೂಕ್‌ ಅಬ್ದುಲ್ಲಾಗೆ ಪ್ರಧಾನಿ ಮೋದಿ ಟಾಂಗ್​!

https://newsfirstlive.com/wp-content/uploads/2024/05/pm-modi16.jpg

Load More