newsfirstkannada.com

ನಿರ್ಮಲಾ ಸೀತಾರಾಮನ್‌ ಬಳಿ ದುಡ್ಡಿಲ್ವಾ? ಚುನಾವಣೆಗೆ ನಿಲ್ಲದಿರೋಕೆ ಕಾರಣ ಬಿಚ್ಚಿಟ್ಟ ಡಿಎಂಕೆ; ಏನದು?

Share :

Published March 28, 2024 at 2:18pm

  ದಕ್ಷಿಣ ಭಾರತದ ಯಾವುದೇ ರಾಜ್ಯದಿಂದಲೂ ಸ್ಪರ್ಧಿಸದ ಕೇಂದ್ರ ಹಣಕಾಸು ಸಚಿವೆ

  ‘ನನ್ನ ಬಳಿ ಹಣ ಇಲ್ಲ, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ’- ನಿರ್ಮಲಾ

  ನಿರ್ಮಲಾ ಸೀತಾರಾಮನ್ ವಿರುದ್ಧ ಡಿಎಂಕೆ ವಕ್ತಾರ ಶರವಣ ಅಣ್ಣಾದೊರೈ ವ್ಯಂಗ್ಯ

ಚೆನ್ನೈ: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಮತಯಾಚನೆಯ ಜೊತೆಗೆ ಮಾತಿನ ಯುದ್ಧ ಜೋರಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ನಾಯಕರ ವಿರುದ್ಧ ಡಿಎಂಕೆ ನಾಯಕರು ಕೆಂಡಾಮಂಡಲರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ಲೀಡರ್ಸ್ ವಾಗ್ದಾಳಿ ನಡೆಸಿದ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟಾರ್ಗೆಟ್ ಆಗಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನನ್ನ ಬಳಿ ಹಣ ಇಲ್ಲ. ಹೀಗಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಇದೇ ಮಾತನ್ನು ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದು, ದಕ್ಷಿಣ ಭಾರತದ ಯಾವುದೇ ರಾಜ್ಯದಿಂದಲೂ ನಿರ್ಮಲಾ ಸೀತಾರಾಮನ್ ಅವರು ಚುನಾವಣೆಗೆ ಸ್ಪರ್ಧಿಸಿಲ್ಲ.

ನಿರ್ಮಲಾ ಸೀತಾರಾಮನ್ ಅವರ ಈ ಹೇಳಿಕೆಗೆ ಡಿಎಂಕೆ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ಚುನಾವಣೆ ಗೆಲ್ಲಲು ಹಣ ಬೇಕಾಗಿಲ್ಲ. ಚುನಾವಣೆ ಗೆಲ್ಲಲು ಜನ ಬೆಂಬಲ ಬೇಕು. ನಿರ್ಮಲಾ ಸೀತಾರಾಮನ್‌ಗೆ ಜನ ಬೆಂಬಲ ಇಲ್ಲ. ಹೀಗಾಗಿ ನಿರ್ಮಲಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದ ಡಿಎಂಕೆ ವಕ್ತಾರ ಶರವಣ ಅಣ್ಣಾದೊರೈ ಹೇಳಿದ್ದಾರೆ.

ಇದನ್ನೂ ಓದಿ: ‘ನಿರ್ಮಲಾ ಸೀತಾರಾಮನ್‌ರಿಂದಲೇ ಕರ್ನಾಟಕಕ್ಕೆ ಅನ್ಯಾಯ’- ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

ತಮಿಳುನಾಡಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ನಾಯಕರು ಸಾಕಷ್ಟು ರಣತಂತ್ರ ಹೆಣೆದಿದ್ದಾರೆ. ಕೊಯಮತ್ತೂರಿನಿಂದ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿದ್ದು, ಡಿಎಂಕೆ ಪಕ್ಷವನ್ನ ಸಮರ್ಥವಾಗಿ ಎದುರಿಸೋ ವಿಶ್ವಾಸದಲ್ಲಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿರುವಾಗಲೇ ಬಿಜೆಪಿ ಹಾಗೂ ಡಿಎಂಕೆ ನಾಯಕರ ಮಧ್ಯೆ ತೀವ್ರ ವಾಕ್ಸಮರ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿರ್ಮಲಾ ಸೀತಾರಾಮನ್‌ ಬಳಿ ದುಡ್ಡಿಲ್ವಾ? ಚುನಾವಣೆಗೆ ನಿಲ್ಲದಿರೋಕೆ ಕಾರಣ ಬಿಚ್ಚಿಟ್ಟ ಡಿಎಂಕೆ; ಏನದು?

https://newsfirstlive.com/wp-content/uploads/2023/12/NIRMALA-SEETARAMAN.jpg

Load More