Advertisment

‘ಹಿಂದಿ ಭಾಷಿಕರು ತಮಿಳುನಾಡಲ್ಲಿ ಟಾಯ್ಲೆಟ್ ಕ್ಲೀನ್ ಮಾಡ್ತಾರೆ’- DMK ಸಂಸದ ದಯಾನಿಧಿ ಮಾರನ್

author-image
Veena Gangani
Updated On
‘ಹಿಂದಿ ಭಾಷಿಕರು ತಮಿಳುನಾಡಲ್ಲಿ ಟಾಯ್ಲೆಟ್ ಕ್ಲೀನ್ ಮಾಡ್ತಾರೆ’- DMK ಸಂಸದ ದಯಾನಿಧಿ ಮಾರನ್
Advertisment
  • ಬಿಹಾರದ ಜನರ ಬಗ್ಗೆ DMK ಟೀಕೆಗಳಿಗೆ ರವಿಶಂಕರ್ ಪ್ರಸಾದ್ ಗರಂ
  • ಡಿಎಂಕೆ ಸಂಸದ ದಯಾನಿಧಿ ಮಾರನ್ ವಿರುದ್ಧ ಎಲ್ಲೆಲ್ಲು ಕಿಡಿ
  • ಇಂಗ್ಲೀಷ್‌ ಕಲಿಯುವವರಿಗೆ ಐಟಿಯಲ್ಲಿ ಉದ್ಯೋಗ ಸಿಗುತ್ತೆ ಆದರೆ..!

ಚೆನ್ನೈ: ಉತ್ತರ ಪ್ರದೇಶ ಮತ್ತು ಬಿಹಾರದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಕರು ಗಾರೆ ಕೆಲಸ, ರಸ್ತೆ ನಿರ್ಮಾಣ ಕೆಲಸ, ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಹೇಳಿದ್ದಾರೆ. ಇದೀಗ ಡಿಎಂಕೆ ಸಂಸದ ದಯಾನಿಧಿ ಮಾರನ್ ಈ ರೀತಿಯ ಹೇಳಿಕೆ ಈಗ ವಿವಾದವನ್ನೇ ಸೃಷ್ಟಿಸಿದೆ.

Advertisment

ಇನ್ನು, ಡಿಎಂಕೆ ಸಂಸದ ದಯಾನಿಧಿ ಮಾರನ್‌ ನೀಡಿರೋ ಹೇಳಿಕೆಯ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. ಹಿಂದಿ ಕಲಿಯಿರಿ ಹೇಳಿಕೆ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರ ಹೇಳಿಕೆ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಹಿಂದಿ ಬಗ್ಗೆ ಸಂಸದ ದಯಾನಿಧಿ ಮಾರನ್ ಅವರ ಕಾಮೆಂಟ್ ಇಂಗ್ಲೀಷ್‌ ಕಲಿಯುವ ಮತ್ತು ಹಿಂದಿಯನ್ನು ಮಾತ್ರ ಕಲಿಯುವ ಜನರ ಹೋಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಇಂಗ್ಲೀಷ್‌ ಕಲಿಯುವವರಿಗೆ ಐಟಿಯಲ್ಲಿ ಉತ್ತಮ ಉದ್ಯೋಗಗಳು ಸಿಗುತ್ತವೆ, ಆದರೆ ಹಿಂದಿಯನ್ನು ಮಾತ್ರ ಕಲಿಯುವವರು- ಉತ್ತರ ಪ್ರದೇಶ ಮತ್ತು ಬಿಹಾರದ ಜನರು ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಡಿಎಂಕೆ ನಾಯಕ ಹೇಳಿದರು.

publive-image

ಬಿಹಾರದ ಜನರ ಬಗ್ಗೆ ಡಿಎಂಕೆ ಸಂಸದರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪಾಟ್ನಾದ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ‘ಡಿಎಂಕೆ ನಾಯಕರು ಬಿಹಾರದ ಜನರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು. ತಮ್ಮ ಇಂಡಿಯಾ ಮೈತ್ರಿಕೂಟದ ಸದಸ್ಯರಾಗಿರುವ ನಿತೀಶ್ ಕುಮಾರ್ ಅವರ ಆಡಳಿತ ರಾಜ್ಯದ ಸ್ಥಿತಿಯಿಂದಾಗಿ ಬಿಹಾರದ ಜನರು ತಮಿಳುನಾಡಿಗೆ ಹೋಗಬೇಕಾಯಿತು ಎಂದು ಹೇಳಿದ್ದಾರೆ.

Advertisment

publive-image

ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ನಂತರ ಮತ್ತು ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ನಂತರ ಉತ್ತರ - ದಕ್ಷಿಣ ಭಾರತ ಚರ್ಚೆ ಹೆಚ್ಚಾಯಿತು. ಮತದಾನದ ಮಾದರಿಯ ಬಗ್ಗೆ ಹಲವಾರು ಕಾಮೆಂಟ್‌ಗಳನ್ನು ಮಾಡಲಾಗಿದ್ದು, ಈ ಸಂದರ್ಭದಲ್ಲಿ ಡಿಎಂಕೆಯ ಸೆಂಥಿಲ್ ಕುಮಾರ್ ಉತ್ತರ ಭಾರತದ ರಾಜ್ಯಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment