Advertisment

44 ವರ್ಷಗಳ ಹಿಂದಿನ ಕೊಲೆ ಪ್ರಕರಣ.. ಆರೋಪಿಯ ಸುಳಿವು ನೀಡಿತು ಒಂದು ಚೂಯಿಂಗ್ ಗಮ್‌

author-image
AS Harshith
Updated On
44 ವರ್ಷಗಳ ಹಿಂದಿನ ಕೊಲೆ ಪ್ರಕರಣ.. ಆರೋಪಿಯ ಸುಳಿವು ನೀಡಿತು ಒಂದು ಚೂಯಿಂಗ್ ಗಮ್‌
Advertisment
  • 19 ವರ್ಷದ ವಿದ್ಯಾರ್ಥಿನಿಯನ್ನ ಅಪಹರಣ ಮಾಡಿ, ಬಳಿಕ ಅತ್ಯಾಚಾರಗೈದು ಕೊಲೆ
  • ತರಗತಿಗಳಿಗೆ ಹಾಜರಾಗಲು ಬಂದ ವಿದ್ಯಾರ್ಥಿಗಳು ಶವ ನೋಡಿದ್ದರು ಬೆಚ್ಚಿಬಿದ್ದಿದ್ದರು
  • ಅಪರಾಧ ನಡೆದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದರು

ಆರೋಪಿ ಎಷ್ಟೇ ಬುದ್ಧಿವಂತಿಕೆಯಿಂದ ಅಪರಾಧ ಮಾಡಿದ್ರೂ, ಸಿಕ್ಕಿ ಬೀಳ್ತಾನೆ ಅನ್ನೋದಕ್ಕೆ ಈ ಸ್ಟೋರಿಯೇ ಬೆಸ್ಟ್​ ಎಕ್ಸಾಂಪಲ್​. ಅಮೆರಿಕದ ಒರೆಗಾನ್ ರಾಜ್ಯದಲ್ಲಿ 1980ರಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಹತ್ಯೆ ಪ್ರಕರಣ, ಬರೋಬ್ಬರಿ 44 ವರ್ಷಗಳ ಬಳಿಕ ಕೊನೆಗೂ ಬಗೆಹರಿದಿದೆ.

Advertisment

44 ವರ್ಷಗಳ ಹಿಂದಿನ ಕೊಲೆ ಆರೋಪಿ ಸುಳಿವು ಸಿಕ್ಕಿದ್ದೇ ರೋಚಕ

ಈ ಘಟನೆ ನಡೆದದ್ದು 1980ರಲ್ಲಿ. ಆ ವೇಳೆಗೆ ಈ ಘಟನೆ ಒರೆಗಾನ್ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಅಚ್ಚರಿಯ ಸಂಗತಿ ಎಂದರೆ ಆರೋಪಿಯ ಚ್ಯೂಯಿಂಗ್ ಗಮ್ ಸಹಾಯದಿಂದ ಪೊಲೀಸರು ಈ ಪ್ರಕರಣದ ನಿಗೂಢತೆಯನ್ನು ಭೇದಿಸಿದ್ದಾರೆ.

  • ಬಾರ್ಬರಾ ಮೌಂಟ್ ಹುಡ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು
  • 1980ರ ಜ.15 ರಂದು 19 ವರ್ಷದ ವಿದ್ಯಾರ್ಥಿನಿ ಬಾರ್ಬರಾ ಕೊಲೆ
  • ಅಪಹರಣ ಮಾಡಿ, ಬಳಿಕ ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು
  • ತರಗತಿಗಳಿಗೆ ಹಾಜರಾಗಲು ಬಂದ ವಿದ್ಯಾರ್ಥಿಗಳು ಶವ ನೋಡಿದ್ದರು
  • ಅಪರಾಧದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದರು
  • ಪ್ರತ್ಯಕ್ಷದರ್ಶಿ ಮಾಹಿತಿ ಮೇರೆಗೆ ರಾಬರ್ಟ್ ಮೇಲೆ ಅನುಮಾನ

ಕೊಲೆಯಾದ ಬಾರ್ಬರಾ ಮೌಂಟ್ ಹುಡ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು.. 1980ರ ಜ.15 ರಂದು 19 ವರ್ಷದ ವಿದ್ಯಾರ್ಥಿನಿ ಬಾರ್ಬರಾಳನ್ನು ರಾಬರ್ಟ್​ ಅಪಹರಣ ಮಾಡಿ, ಬಳಿಕ ಅತ್ಯಾಚಾರಗೈದು ಕೊಲೆ ಮಾಡಿದ್ದ. ಕಾಲೇಜಿನ ತರಗತಿಗಳಿಗೆ ಹಾಜರಾಗಲು ಬಂದ ವಿದ್ಯಾರ್ಥಿಗಳು ಶವ ನೋಡಿದ್ದರು. ಇನ್ನು ಅಪರಾಧದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿ ಮೇರೆಗೆ ಪೊಲೀಸರಿಗೆ ರಾಬರ್ಟ್ ಮೇಲೆ ಅನುಮಾನ ಬಂದು ಆತನ ಮೇಲೆ ಕಣ್ಣಿಟ್ಟಿದ್ದರು.

Advertisment

ಕೊಲೆ ಆರೋಪಿಯ ಪತ್ತೆ ನೆರವಾದ ಡಿಎನ್‌ಎ

ರಾಬರ್ಟ್ ತಪ್ಪಿತಸ್ಥ ಎಂದು ಸಾಬೀತುಪಡಿಸಲು ಒಂದು ಚೂಯಿಂಗ್ ಗಮ್ ನೆರವಾಗಿದ್ದೇ ರೋಚಕ ಸಂಗತಿಯಾಗಿದೆ.

ಇದನ್ನೂ ಓದಿ: ಗೆಲುವಿಗಾಗಿ ದೇವರ ಮೊರೆ ಹೋದ DK ಬ್ರದರ್ಸ್; ಮನೆಯಲ್ಲಿ ವಿಶೇಷ ಪೂಜೆ

ಬಾರ್ಬರಾ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಯೋನಿಯ ದ್ರವ ಸಂಗ್ರಹ

ಬಾರ್ಬರಾ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಯೋನಿಯ ದ್ರವ ತೆಗೆಯಲಾಗಿತ್ತು. ಹಾಗೂ 2000ರಲ್ಲಿ ವಿಶ್ಲೇಷಣೆಗಾಗಿ ಒರೆಗಾನ್ ರಾಜ್ಯ ಪೊಲೀಸರು ಕ್ರೈಮ್ ಲ್ಯಾಬ್‌ಗೆ ಕಳುಹಿಸಿದ್ದರು. ದ್ರವದ ಆಧಾರದಲ್ಲಿ ಕ್ರೈಮ್ ಲ್ಯಾಬ್, ಡಿಎನ್‌ಎ ಪ್ರೊಫೈಲ್ ಅನ್ನು ಅಭಿವೃದ್ಧಿಪಡಿಸಿತ್ತು. ಅಪರಿಚಿತ DNA ಪ್ರೊಫೈಲ್​ಗೂ, ರಾಬರ್ಟ್ ಪ್ಲಿಂಪ್ಟಾನ್‌ಗೆ ಸಂಬಂಧ ಇರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ರಾಬರ್ಟ್ ಉಗುಳಿದ್ದ ಚೂಯಿಂಗ್ ಗಮ್‌ನ್ನು ಪೊಲೀಸರು ಪರೀಕ್ಷಿಸಿದ್ದರು. ಆಗ 2000 ಇಸವಿಯಲ್ಲಿ ಅಭಿವೃದ್ಧಿಪಡಿಸಿದ ಅಪರಿಚಿತ ಡಿಎನ್‌ಎ ಪ್ರೊಫೈಲ್​ಗೂ, ರಾಬರ್ಟ್ ಪ್ಲಿಂಪ್ಟಾನ್‌ಗೆ ಸಂಬಂಧಿಸಿರುವ ಸಾಧ್ಯತೆ ಇದೆ ಎಂದು ಸಾಬೀತಾಗಿತ್ತು. 2021ರ ಜೂ.8ರಂದು ರಾಬರ್ಟ್ ಪ್ಲಿಂಪ್ಟಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ರು.

ಇದೀಗ ಸುದೀರ್ಘ ವಿಚಾರಣೆ ಬಳಿಕ, 60 ವರ್ಷದ ಹಂತಕ ರಾಬರ್ಟ್ ಪ್ಲಿಂಪ್ಟಾನ್‌ನನ್ನು ತಪ್ಪಿತಸ್ಥ ಎಂದು ಕೋರ್ಟ್​ ತೀರ್ಪು ನೀಡಿದೆ. ಆದರೆ ಆತ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ರಾಬರ್ಟ್ ವಾದಿಸಿದ್ದಾನೆ. ಆತನ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಉದ್ದೇಶಿಸಿರುವುದಾಗಿ ಆತನ ಪರ ವಕೀಲರು ತಿಳಿಸಿದ್ದಾರೆ. ಒಟ್ಟಾರೆ.. 44 ವರ್ಷಗಳ ಬಳಿಕ ಮಗಳ ಸಾವಿಗೆ ನ್ಯಾಯ ಸಿಕ್ಕಿದ್ದು, ಬಾರ್ಬರಾ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment