/newsfirstlive-kannada/media/post_attachments/wp-content/uploads/2025/04/Dog-and-cat.jpg)
ನಿದ್ರೆಯಲ್ಲಿ ಬೀಳುವ ಕನಸುಗಳ ಅಸ್ತಿತ್ವದ ಬಗ್ಗೆ ನಿಖರ ಮಾಹಿತಿ ಇನ್ನೂ ಇಲ್ಲ. ಅನೇಕ ವೈಜ್ಞಾನಿಕ ಸಂಶೋಧನೆಗಳು ಕನಸುಗಳ ಕುರಿತು ವಿಭಿನ್ನ ಹೇಳಿಕೆ ನೀಡುತ್ತವೆ. ಜ್ಯೋತಿಷ್ಯವು ತನ್ನದೆಯಾದ ತರ್ಕ ಹೊಂದಿದೆ. ನಿಮಗೆ ಗೊತ್ತಾ ಪ್ರಾಣಿಗಳಿಗೂ ಕನಸುಗಳು ಬೀಳುತ್ತವೆ..
ಕೆಲವು ಸಂಶೋಧನೆಗಳು ಮನುಷ್ಯರಂತೆ ಪ್ರಾಣಿಗಳೂ ಕನಸು ಕಾಣುತ್ತವೆ. ಅವು ಕಲ್ಪನಾ ಲೋಕದಲ್ಲಿ ಕಳೆದುಹೋಗುತ್ತವೆ ಎಂಬುವುದನ್ನ ಸಾಬೀತುಪಡಿಸಿವೆ. ಪ್ರಾಣಿಗಳು ಗಾಢ ನಿದ್ರೆಯಲ್ಲಿದ್ದಾಗ ಅವುಗಳ ಮೆದುಳಿನ ಒಂದು ಭಾಗ ಸಕ್ರಿಯವಾಗಿರುತ್ತದೆ. ಇದು ಕನಸುಗಳನ್ನು ಕಾಣುವ ಸಾಧ್ಯತೆಯನ್ನ ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೆಚ್ಚಾಗಿ ಸಾಕು ನಾಯಿಗಳು ಮತ್ತು ಬೆಕ್ಕುಗಳಲ್ಲಿ ಕಂಡುಬರುತ್ತದೆ.
ಪ್ರಾಣಿಗಳು ನಿದ್ರೆಯಲ್ಲಿ ಬೆಚ್ಚಿಬೀಳುತ್ತವೆ..
ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವು ಮಲಗಿರುವಾಗ ಬೆಚ್ಚಿಬೀಳುವುದನ್ನು ನೀವು ಗಮನಿಸಿರಬಹುದು. ಹಲವು ಬಾರಿ ನಾಯಿಗಳು ನಿದ್ದೆ ಮಾಡುವಾಗ ಬೊಗಳಲು ಅಥವಾ ಕಾಲುಗಳನ್ನು ಚಲಿಸಲು ಪ್ರಾರಂಭಿಸುತ್ತವೆ. ಬೆಕ್ಕುಗಳು ನಿದ್ರೆಯಲ್ಲಿ ಮಿಯಾಂವ್ ಎಂದು ಕೂಗುತ್ತವೆ. ಇದು ಪ್ರಾಣಿಗಳು ಕನಸುಗಳನ್ನು ಕಾಣುತ್ತಿವೆ ಅನ್ನೋದಕ್ಕೆ ಸಿಗುವ ಸೂಚನೆಗಳು ಎಂದು ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಆರೋಗ್ಯ ರಕ್ಷಣೆಯಲ್ಲಿ AI ಆವಿಷ್ಕಾರ.. 14ನೇ LHIF ಆವೃತ್ತಿಗೆ ಕ್ಷಣಗಣನೆ; ನೀವೂ ಭಾಗವಹಿಸಿ!
ಮನುಷ್ಯರಂತೆ, ಪ್ರಾಣಿಗಳು ಸಹ ಆರ್ಇಎಂ (Rapid eye movement) ನಿದ್ರೆಯನ್ನು ಅನುಭವಿಸುತ್ತವೆ. 1950ರಲ್ಲಿ ವಿಜ್ಞಾನಿಗಳು REM ಎಂಬ ಪದವನ್ನು ಬಳಸಿದರು. ಇದರರ್ಥ ತ್ವರಿತ ಕಣ್ಣಿನ ಚಲನೆ. ಇದು ನಿದ್ರೆಯ ಹಂತವಾಗಿದ್ದು, ಈ ಹಂತದಲ್ಲಿ ಮನುಷ್ಯರು ಕನಸುಗಳನ್ನು ಕಾಣುತ್ತಾರೆ.
ವಿಜ್ಞಾನಿಗಳ ಪ್ರಕಾರ.. ನಿದ್ರೆಯ ಸಮಯದಲ್ಲಿ ಕಣ್ಣುಗಳು, ಕಣ್ಣುರೆಪ್ಪೆಗಳ ಹಿಂದೆ ವೇಗವಾಗಿ ಚಲಿಸುತ್ತವೆ. ಹೃದಯ ಬಡಿತ ಹೆಚ್ಚಾಗುತ್ತದೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗದೊಂದಿಗೆ ಒಂದು ಅಧ್ಯಯನ ನಡೆಸಿದರು. ಈ ಅವಧಿಯಲ್ಲಿ ಪ್ರಾಣಿಗಳು, ಮನುಷ್ಯರಂತೆ REM ನಿದ್ರೆ ಮತ್ತು ಕನಸುಗಳನ್ನು ಅನುಭವಿಸುತ್ತವೆ ಅಂತಾ ತಿಳಿದುಕೊಂಡಿದೆ. ಸಸ್ತನಿಗಳು, ಕೆಲವು ಪಕ್ಷಿಗಳು ಮತ್ತು ಕೆಲವು ಸರೀಸೃಪಗಳು REM ನಿದ್ರೆಯನ್ನು ಅನುಭವಿಸುತ್ತವೆ ಎಂದು ವಿಜ್ಞಾನಿಗಳು ನಂಬುತ್ತಾರೆ.
ಒಳ್ಳೆಯದರಿಂದ ಭಯಾನಕವರೆಗೆ..
ವಿಜ್ಞಾನಿಗಳು ಹೇಳುವಂತೆ ಮನುಷ್ಯರಂತೆ ಪ್ರಾಣಿಗಳು ಕೂಡ ಒಳ್ಳೆಯ ಮತ್ತು ಕೆಟ್ಟ ಕನಸುಗಳನ್ನು ಕಾಣುತ್ತವೆ. ಪ್ರಾಣಿಗಳು ನಿದ್ರೆಯಲ್ಲಿ ಬೆಚ್ಚಿಬಿದ್ದರೆ, ಬೇಟೆಗಾರನು ಅವುಗಳನ್ನು ಬೇಟೆಯಾಡಲು ಹೊರಟಿರುವಂತೆ ಅವುಗಳಿಗೆ ಭಯಾನಕ ಕನಸು ಬಿತ್ತು ಎಂದರ್ಥ. ನಾಯಿಗಳು ತಮ್ಮ ಕಾಲುಗಳನ್ನು ಚಲಿಸಿದಾಗ, ಕನಸಿನಲ್ಲಿ ಕಾಲ್ಪನಿಕ ಪ್ರಾಣಿಯನ್ನು ಬೇಟೆಯಾಡಲು ಬೆನ್ನಟ್ಟುತ್ತಿವೆ ಎಂದರ್ಥ.
ಇದನ್ನೂ ಓದಿ: ಹಲ್ಲುಗಳ ಹುಳುಕು, ನೋವು, ಮುರಿದ್ರೆ ಚಿಂತೆ ಬೇಡ.. ವಿಜ್ಞಾನಿಗಳಿಂದ ನಿಮಗೆ ಗುಡ್ನ್ಯೂಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ