ಶಾಖಾಹಾರಿಗಳೇ ಅತಿಹೆಚ್ಚು ಕಾಲ ಬದುಕುತ್ತಾರಾ? ಈ ಮಾತು ಎಷ್ಟು ಸತ್ಯ, ಎಷ್ಟು ಮಿಥ್ಯ?

author-image
Gopal Kulkarni
Updated On
ಶಾಖಾಹಾರಿಗಳೇ ಅತಿಹೆಚ್ಚು ಕಾಲ ಬದುಕುತ್ತಾರಾ? ಈ ಮಾತು ಎಷ್ಟು ಸತ್ಯ, ಎಷ್ಟು ಮಿಥ್ಯ?
Advertisment
  • ಮಾಂಸಾಹಾರಿಗಳಿಗಿಂತ ಶಾಖಾಹಾರಿಗಳಿಗೆ ಆಯಸ್ಸು ಜಾಸ್ತಿಯಾ?
  • ಸಸ್ಯಾಹಾರದಲ್ಲಿ ಮನುಷ್ಯನ ಆಯಸ್ಸು ಹೆಚ್ಚಿಸುವ ಯಾವ ಅಂಶಗಳಿವೆ?
  • ಸಸ್ಯಾಹಾರ ಆಹಾರ ಕ್ರಮ ನಮ್ಮದಾದರೆ ಯಾವೆಲ್ಲಾ ಪ್ರಯೋಜನಗಳಿವೆ?

ಜಗತ್ತಿನಲ್ಲಿ ಶಾಖಾಹಾರಿಗಳು ದೀರ್ಘಕಾಲ ಬಾಳುತ್ತಾರೆ ಎಂಬ ಮಾತಿದೆ. ಅದಕ್ಕೆ ಹಲವು ಉದಾಹರಣೆಗಳನ್ನು ಸಾಕ್ಷಿಗಳನ್ನು ಕೂಡ ಆಹಾರ ತಜ್ಞರು ನೀಡುತ್ತಾರೆ. ಜಗತ್ತಿನಲ್ಲಿ ನಮಗೆ ಯಾವುದೇ ಜಾಗಕ್ಕೆ ಹೋದರು ಕೂಡ ಶಾಖಾಹಾರಿಗಳು ಮಾಂಸಾಹಾರಿಗಳು ಇಬ್ಬರೂ ಇರುವುದು ಕಾಣುತ್ತದೆ. ಆದರೆ ಸಸ್ಯಾಹಾರ ಒಂದು ಸಾತ್ವಿಕ ಆಹಾರ ಎಂಬ ನಂಬಿಕೆ ಹಲವಾರು ವರ್ಷಗಳಿಂದ ಹಲವಾರು ಧರ್ಮಗಳಲ್ಲಿ ಬೇರೂರಿಕೊಂಡು ಬಂದಿದೆ. ಶಾಖಾಹಾರಿಗಳೇ ಅತಿಹೆಚ್ಚು ಕಾಯಿಲೆಗಳಿಂದ ದೂರ ಉಳಿಯುವುದು. ಅವರೇ ಹೆಚ್ಚು ಕಾಲ ಬಾಳುವುದು ಎಂಬ ವಾದವಿದೆ. ಅದು ಎಷ್ಟು ಸತ್ಯ. ಅದಕ್ಕೆ ಕಾರಣಗಳೇನು ಎಂಬುದನ್ನು ನೋಡುವುದಾದ್ರೆ

publive-image

ಶಾಖಾಹಾರದಲ್ಲಿ ಕೊಲೆಸ್ಟ್ರಾಲ್ ಅಥವಾ ಬ್ಯಾಡ್ ಫ್ಯಾಟ್ ಅಂಶ ಕಡಿಮೆ ಇರುತ್ತದೆ ಎಂಬ ನಂಬಿಕೆಯಿದೆ, ಮಾಂಸಾಹಾರಕ್ಕೆ ಹೋಲಿಕೆ ಮಾಡಿ ನೋಡಿದಾಗ ಸಸ್ಯಾಹಾರದಲ್ಲಿ ಇದರ ಅಂಶ ಕಡಿಮೆ. ಇದರಿಂದಾಗಿ ಬಿಪಿ ಮತ್ತು ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗುವುದನ್ನು ತಡೆಯಬಹುದು.

ಶಾಖಾಹಾರಿ ಹಾಗೂ ಮಾಂಸಾಹಾರ ಉತ್ಪಾನೆಗೆ ಸಂಪನ್ಮೂಲಗಳ ಬಳಕೆಯ ವಿಚಾರದಲ್ಲಿ ಬಂದಾಗ ಶಾಖಾಹಾರಿ ಆಹಾರಗಳ ಉತ್ಪಾದನೆಗೆ ಅಧಿಕ ನೀರು ಭೂಮಿ ಹಾಗೂ ಶಕ್ತಿಯ ಬಳಕೆಯಾಗುತ್ತದೆ. ಆದ್ರೆ ಮಾಂಸಾಹಾರ ಉತ್ಪಾದನೆಯಲ್ಲಿ ಇಷ್ಟೊಂದು ಸಂಪನ್ಮೂಲಗಳು ಸೇರಿಕೊಂಡಿರುವುದಿಲ್ಲ.

ಇದನ್ನೂ ಓದಿ:ಇದು ಜಗತ್ತಿನ ಅತ್ಯಂತ ದುಬಾರಿ ಶಾಪಿಂಗ್ ಬೀದಿ.. ಲಂಡನ್​, ಪ್ಯಾರಿಸ್ ಅಲ್ಲವೇ ಅಲ್ಲ.. ಎಲ್ಲಿದೆ ಇದು?

ಇನ್ನು ಸಸ್ಯಾಹಾರದಲ್ಲಿ ನಮಗೆ ವಿಭಿನ್ನ ಬಗೆಯ ಪೋಷಕ ಸತ್ವಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ,ಅಧಿಕ ವಿಟಮಿನ್​ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್ಸ್​ನ ಅಂಶಗಳು ಹೆಚ್ಚು ಇರುತ್ತವೆ. ಇವು ನಮ್ಮ ಆರೋಗ್ಯವನ್ನು ಕಾಪಾಡಲು ಅತಿ ಅವಶ್ಯಕ, ಹಣ್ಣು ತರಕಾರಿ, ಧಾನ್ಯಗಳಲ್ಲಿ ವಿವಿಧ ಪ್ರಕಾರದ ಜೀವಸತ್ವಗಳು, ಪೋಷಕಾಂಶಗಳ ಪೌಷ್ಠಿಕಾಂಶಗಳು ಇರುತ್ತವೆ. ಸಸ್ಯಾಹಾರಕ್ಕೆ ಹೋಲಿಸಿದರೆ ಮಾಂಸಾಹಾರದಲ್ಲಿ ಇಷ್ಟೊಂದು ಪೋಷಕಾಂಶಗಳು ಖನಿಜಾಂಶಗಳು ಜೀವಸತ್ವಗಳು ಸಿಗುವುದು ಕಡಿಮೆ

ಇನ್ನು ಸಸ್ಯಾಹಾರದಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ಇದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ಸೃಷ್ಟಿಯಾಗುವುದಿಲ್ಲ. ಇದರಿಂದಾಗಿ ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸೃಷ್ಟಿಯಾಗುವುದಿಲ್ಲ. ಆದ್ರೆ ಮಾಂಸಾಹಾರದಲ್ಲಿ ಜೀರ್ಣಕ್ರಿಯೆಯನ್ನು ಸುಲಭವಾಗಿಸುವು ಗುಣಗಳು ಇಲ್ಲ ಹೀಗಾಗಿ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಅತಿಹೆಚ್ಚು ಮಾಂಸಾಹಾರದಿಂದ ಬರುತ್ತವೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ:ನಿಮ್ಮ ಗಮನಶಕ್ತಿಯನ್ನು ಧ್ವಂಸಗೊಳಿಸುತ್ತವೆ ಈ ಪ್ರಮುಖ ಅಭ್ಯಾಸಗಳು: ಯಾವುವು ಗೊತ್ತಾ?

publive-image

ಇನ್ನು ಶಾಖಾಹಾರದಲ್ಲಿ ಆ್ಯಂಟಿಆಕ್ಸಿಡೆಂಟ್​ ಮತ್ತು ಫಾಯಿಟೊಕೆಮಿಕಲ್ಸ್​ನಂತಹ ಅಂಶಗಳು ಜಾಸ್ತಿ ಇರುತ್ತವೆ. ಇವು ಕ್ಯಾನ್ಸರ್ ಕೋಶಗಳಿಗೆ ಅಪಾಯಕವಾಗಬಲ್ಲ ಶಕ್ತಿಯನ್ನು ಹೊಂದಿವೆ. ಹೀಗಾಗಿ ಕ್ಯಾನ್ಸರ್ ಬರುವ ಸಂಭವ ಕಡಿಮೆ ಎಂದು ಹೇಳಲಾಗುತ್ತದೆ. ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಸಸ್ಯಹಾರವನ್ನು ನಮ್ಮ ಆಹಾರದ ಕ್ರಮ ಮಾಡಿಕೊಳ್ಳುವುದರಿಂದ ಕೊಲೊನ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಪ್ರೊಸ್ಟೆಟ್​ ಕ್ಯಾನ್ಸರ್ ಬರುವ ಅಪಾಯಗಳು ಕಡಿಮೆ ಎಂದು ಹೇಳಲಾಗುತ್ತದೆ.

ಇನ್ನು ಶಾಖಾಹಾರಿ ಆಹಾರ ಕ್ರಮವು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದರಲ್ಲಿ ಹಾಗೂ ತಡೆಯುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೆಲವು ಸಸ್ಯಾಹಾರ ಆಹಾರ ಕ್ರಮವನ್ನು ನಮ್ಮದಾಗಿಸಿಕೊಂಡರೆ ಡಯಾಬಿಟಿಸ್ ಟೈಪ್ 2 ತಡೆಯುವಲ್ಲಿ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡ ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಮಾಂಸಾಹಾರ ಸೇವನೆ ಮಾಡುವವರಿಗಿಂತ ಸಸ್ಯಹಾರ ಸೇವನೆ ಮಾಡುವವರು 6 ರಿಂದ 8 ವರ್ಷ ಹೆಚ್ಚಿಗೆ ಬದುಕುತ್ತಾರೆ ಎಂದು ಹೇಳಲಾಗಿದೆ. ಇದೊಂದು ಅತ್ಯಂತ ಸಾಮಾನ್ಯವಾದ ಒಂದು ಮಾಹಿತಿ. ಯಾವುದೇ ಚಿಕಿತ್ಸಕರು, ತಜ್ಞರು ಅಧಿಕೃತವಾಗಿ ಹಾಗೂ ದೃಢವಾಗಿ ಹೇಳಿದ ಅಥವಾ ಉಲ್ಲೇಖಿಸಿದ ಮಾಹಿತಿ ಅಲ್ಲ. ಕೆಲವು ಸಾಮಾನ್ಯ ಅಂಶಗಳು ಈ ಮಾತನ್ನು ಹಾಗೂ ಮಾಹಿತಿಯನ್ನು ಒಪ್ಪುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment