/newsfirstlive-kannada/media/post_attachments/wp-content/uploads/2025/06/EARTH.jpg)
ಮನುಷ್ಯ ಜೀವಂತವಾಗಿರಲು ಹೃದಯ ನಿರಂತರವಾಗಿ ಬಡಿದುಕೊಳ್ಳುತ್ತದೆ. ಈ ಪ್ರಕ್ರಿಯೆ ತುಂಬಾನೇ ಮುಖ್ಯ. ಸಾಮಾನ್ಯ ಮನುಷ್ಯನ ಹೃದಯವು ನಿಮಿಷಕ್ಕೆ 72 ಬಾರಿ ಬಡಿದುಕೊಳ್ಳುತ್ತದೆ. ವಿಷಯ ಅದಲ್ಲ! ನಮ್ಮ ಭೂಮಿಯ ಹೃದಯವೂ ಬಡಿಯುತ್ತದೆ ಅನ್ನೋ ವಿಚಾರ ನಿಮಗೆ ಗೊತ್ತಾ?
ಸುಮಾರು 60 ವರ್ಷಗಳ ಹಿಂದೆ ವಿಜ್ಞಾನಿಗಳು ಭೂಮಿಯ ಮಧ್ಯಭಾಗದಿಂದ ಒಂದು ನಿಗೂಢ ಶಬ್ದ ಕೇಳಿದರು. ಪ್ರತಿ 26 ಸೆಕೆಂಡುಗಳಿಗೊಮ್ಮೆ ಭೂಮಿಯಲ್ಲಿ ಉಂಟಾಗುವ ಕಂಪನವನ್ನು ವಿಜ್ಞಾನಿಗಳು ಪತ್ತೆ ಮಾಡಿದರು. ಆದರೆ ಈ ಶಬ್ದದ ರಹಸ್ಯ ಏನು ಅನ್ನೋದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಮೊಬೈಲ್ ಜೋಪಾನ.. ನೀರಿನಿಂದ ರಕ್ಷಿಸಿಕೊಳ್ಳಲು ಬೆಸ್ಟ್ ಐಡಿಯಾ..!
1960ರ ದಶಕದ ಆರಂಭದಲ್ಲಿ ವಿಜ್ಞಾನಿ ಜ್ಯಾಕ್ ಆಲಿವರ್ (Jack Oliver) ಭೂಮಿಯಿಂದ ಬರುವ ಶಬ್ದವನ್ನು ಮೊದಲ ಬಾರಿಗೆ ಕೇಳಿದ. ಪ್ರತಿ 26 ಸೆಕೆಂಡುಗಳಿಗೊಮ್ಮೆ ಭೂಮಿಯಿಂದ ಒಂದು ಶಬ್ದ ಬರುತ್ತದೆ ಅನ್ನೋದನ್ನು ಆತ ಕಂಡುಹಿಡಿದ. ಅದು ಮಾನವ ಹೃದಯ ಬಡಿತದಂತೆ ತೋರುತ್ತದೆ ಎಂದ.
ಜ್ಯಾಕ್ ಆಲಿವರ್ ನಡೆಸಿದ ಸಂಶೋಧನೆಯ ಪ್ರಕಾರ.. ಈ ಅಲೆಗಳು ದಕ್ಷಿಣ ಅಥವಾ ಸಮಭಾಜಕ ಅಟ್ಲಾಂಟಿಕ್ ಸಾಗರದ ಎಲ್ಲೋ ಒಂದು ಕಡೆಯಿಂದ ಭೂಮಿಯನ್ನು ಪ್ರವೇಶಿಸುತ್ತವೆ. ಉತ್ತರ ಗೋಳಾರ್ಧದಲ್ಲಿ ಬೇಸಿಗೆಯಲ್ಲಿ ಕಂಪನದ ತೀವ್ರತೆ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾನೆ.
1980ರಲ್ಲಿ ಅಮೆರಿಕ ಭೂವಿಜ್ಞಾನಿ ಗ್ಯಾರಿ ಹೋಲ್ಕಾಂಬ್ ಕೂಡ ಭೂಮಿಯಿಂದ ಬರುವ ನಿಗೂಢ ಶಬ್ದವನ್ನು ಕೇಳಿದ್ದಾರೆ. 2005ರಲ್ಲಿ ಕೊಲೊರಾಡೋ ವಿಶ್ವವಿದ್ಯಾಲಯದ ಸಂಶೋಧಕರು ಸಹ ಈ ಶಬ್ದವನ್ನು ಕೇಳಿಸಿಕೊಂಡಿದ್ದಾರೆ. ಭೂಮಿಯಿಂದ ಬರುವ ನಿಗೂಢ ಶಬ್ದವು ಭೂಮಿಯೊಳಗಿನ ಟೆಕ್ಟೋನಿಕ್ ಪ್ಲೇಟ್‌ಗಳ (tectonic plates) ಘರ್ಷಣೆಯಿಂದ ಅಥವಾ ಅಲೆಗಳಿಂದ ಬರಬಹುದು ಅಂತಾ ವಿಜ್ಞಾನಿಗಳು ನಂಬಿದ್ದಾರೆ.
ಇದನ್ನೂ ಓದಿ: ಜೂನ್ 1ರಿಂದ ಪ್ರಮುಖ 5 ಬದಲಾವಣೆಗಳು; ಇಂದಿನಿಂದ ಈ ಮೊಬೈಲ್‌ಗಳಲ್ಲಿ WhatsApp ವರ್ಕ್ ಆಗಲ್ಲ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ