/newsfirstlive-kannada/media/post_attachments/wp-content/uploads/2024/07/Bhaskar-shenoy-2.jpg)
ಮಣಿಪಾಲ್​​ ಆಸ್ಪತ್ರೆಯ ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್​ ಭಾಸ್ಕರ್​ ಶೆಣೈಯವರು ನ್ಯೂಸ್​​ಫಸ್ಟ್​ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಮಳೆಗಾಲದಲ್ಲಿ ಮಕ್ಕಳಲ್ಲಿ ಕಾಣುವ ಡೆಂಗ್ಯೂ ಮತ್ತು ವೈರಲ್​ ಫೀವರ್​ ಕುರಿತಾಗಿ ಹಿರಿಯ ಪತ್ರಕರ್ತೆಯಾದ ಅರ್ಚನಾ ರವಿಕುಮಾರ್​ರವರು ಅವರ ವಿಶೇಷ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ವೈದ್ಯರು ಪೋಷಕರಿಗಾಗಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಜ್ವರ ಬಂದ ತಕ್ಷಣವೇ ರಕ್ತ ಪರೀಕ್ಷೆ ಮಾಡಿದ್ರೆ ಫಲಿತಾಂಶ ಗೊತ್ತಾಗುತ್ತಾ?
ಮೊದಲ ಮೂರು ದಿನ ರಕ್ತ ಟೆಸ್ಟ್​ ಮಾಡೋದು ಸರಿಯಲ್ಲ. ಕೆಲವೊಮ್ಮೆ ಡೆಂಗ್ಯೂ ಇರುವವನಿಗೆ ಮೊದಲ ದಿನ ಟೆಸ್ಟ್​ ಮಾಡಿದ್ರೆ ಸರಿ ಬರಲಿಕ್ಕೂ ಇಲ್ಲ. ನೆಗೆಟೀವ್​ ಬರಬಹುದು. ಆವಾಗ ಡೆಂಗ್ಯೂ ಇಲ್ಲ ಅಂತ ರಿಲಾಕ್ಸ್​ ಮಾಡ್ತೇವೆ. ಆವಾಗ ತೊಂದರೆ ಆಗಬಹುದು. ಮೊದಲ ದಿನ ಬ್ಲಡ್​ ಟೆಸ್ಟ್​ ಮಾಡಿ ಬಂದರೂ ಮೊದಲ 5 ದಿನ ಟ್ರೀಟ್​ಮೆಂಟ್​ ಇಲ್ಲ. ಜ್ವರದ ಔಷಧಿ ಕೊಟ್ಟು ಕಂಟ್ರೋಲ್​ ಮಾಡಬೇಕು
ಡೆಂಗ್ಯೂ ಬಂದಾಗ ಜ್ವರ ನಿಯಂತ್ರಿಸುವುದು ಹೇಗೆ?
ಜ್ವರ ಬಂದಾಗ ಒದ್ದೆ ಬಟ್ಟೆಯಲ್ಲಿ ಒರೆಸಬೇಕು. ಒದ್ದೆ ಬಟ್ಟೆ ಎಂದಾಗ ಹಣೆಗೆ ಪಟ್ಟಿ ಇಡುತ್ತೇವೆ, ಅದಲ್ಲ. ನೀರು ಸುರಿಯುವ ಹಾಗೆ ತಲೆಯಿಂದ ಕಾಲಿನವರೆಗೆ, ಕೂದಲು ಒದ್ದೆಯಾಗುವ ಹಾಗೆ. ಜನರಲ್ಲಿ ಒಂದು ನಂಬಿಕೆ ಇದೆ ತಲೆಗೆ ನೀರು ಹಾಕಿದ್ರೆ ಶೀತ ಆಗುತ್ತೆ ಅಂತ. ಆದರೆ ಹಾಗಾಗಲ್ಲ. ತಲೆ ಮತ್ತು ಇಡೀ ದೇಹವನ್ನ 20 ನಿಮಿಷ ಒರೆಸಿ, ಮಗು ನಡುಗಿದರೂ ಪರವಾಗಿಲ್ಲ. ಆಮೇಲೆ ಒಣಬಟ್ಟೆಯಲ್ಲಿ ಸರಿ ಮಾಡಬಹುದು. ಅದು ಎಲ್ಲಾ ಮೆಡಿಸಿನ್​ಗಿಂತ ಬೆಸ್ಟ್​ ಮೆಡಿಸಿನ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us